ಆರೋಗ್ಯ

ಮಹಿಳೆಯರನ್ನೇ ಹೆಚ್ಚಾಗಿ ಕಾಡುವ ಮೂತ್ರ ಸೋಂಕಿಗೆ ನೀರೇ ಉತ್ತಮ ಔಷಧಿ !

Pinterest LinkedIn Tumblr

ಪುರುಷ, ಮಹಿಳೆ ಇಬ್ಬರಿಗೂ ಮೂತ್ರಕೋಶ ಸೋಂಕು ಉಂಟಾಗುತ್ತದೆ. ಆದರೆ, ಈ ಮೂತ್ರಕೋಶಗಳ ಸೋಂಕು ಮಹಿಳೆಯರನ್ನೇ ಹೆಚ್ಚಾಗಿ ಕಾಡುತ್ತವೆ. ಇದಕ್ಕೆ ಪ್ರಮುಖ ಕಾರಣ ಅವರ ಅಂಗರಚನೆ.

ಮೂತ್ರಕೋಶ ಸೋಂಕಿಗೆ ಜೀವನಶೈಲಿ ಕೂಡ ಒಂದು ಕಾರಣ. ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವುದು, ಹೆಚ್ಚು ಓಡಾಡದೇ ಇರುವುದು, ಮೂತ್ರ ನಾಳ ಕಿರಿದಾಗಿದ್ದರೆ, ಸೋಂಕಿನ ಅಪಾಯಗಳು ಹೆಚ್ಚಾಗಿರುತ್ತದೆ. ಆದರೆ, ಹೆಚ್ಚಿನ ಪ್ರಕರಣಗಳಲ್ಲಿ ಈ ಕೋಂಟು 24 ರಿಂದ 48 ಗಂಟೆಗಳೊಳಗೆ ನಿವಾರಣೆಯಾಗುತ್ತದೆ.

ಮೂತ್ರಕೋಶ ಸೋಂಕಿನಿಂದ ಬಳಲುವ ಮಹಿಳೆಯರು ಹೆಚ್ಚು ಸ್ವಚ್ಛತೆಯ ಬಗ್ಗೆ ಗಮನ ಕೊಡಬೇಕು. ಮೂತ್ರಕೋಶ ಅಥವಾ ಮೂತ್ರದ್ವಾರದಲ್ಲಿ ಅಡೆತಡೆಗಳಿದ್ದರೆ, ಈ ಅಂಗಗಳಲ್ಲಿ ಗಾಯಗಳಾಗಿದ್ದರೆ, ಮೂತ್ರನಾಶ ಕಿರಿದಾಗಿದ್ದರೆ ಕೂಡ ಸೋಂಕಿನ ಅಪಾಯ ಹೆಚ್ಚು ಮೂತ್ರಕೋಶ ಸೋಂಕುನಿಂದ ದೂರ ಉಳಿಯಲು ಮಹಿಳೆಯರು ಹೆಚ್ಚೆಚ್ಚು ನೀರು ಕುಡಿಯಬೇಕು. ಇದು ಸೋಂಕನ್ನು ಸಾಕಷ್ಟು ಕಡಿಮೆ ಮಾಡುತ್ತದೆ.

ಮೂತ್ರಕೋಶ ಸೋಂಕು ಕುರಿತಂತೆ ‘ಯುಟಿ ಸೌತ್ ವೆಸ್ಟರ್ನ್ ಮೆಡಿಕಲ್ ಸೆಂಟರ್’ ಸಂಶೋಧನೆಯನ್ನು ನಡೆಸಿದ್ದು, ಹೆಚ್ಚೆಚ್ಚು ನೀರು ಕುಡಿಯುವುದರಿಂದ ಮೂತ್ರಕೋಶ ಸೋಂಕಿನಿಂದ ದೂರ ಉಳಿಯಬಹುದು ಎಂದು ವರದಿಯಲ್ಲಿ ತಿಳಿಸಿದೆ.

ಪ್ರತೀನಿತ್ಯ 1.5 ಲೀಟರ್ ನಷ್ಟು ಹೆಚ್ಚುವರಿಯಾಗಿ ನೀರು ಕುಡಿಯುವ ಮಹಿಳೆಯಲ್ಲಿ ಆಗಾಗ ಮೂತ್ರಕೋಶ ಸೋಂಕಿಗೆ ತುತ್ತಾಗುವವರು ಶೇ.48 ರಷ್ಟು ಕಡಿಮೆಯಾಗುತ್ತದೆ. ಕಡಿಮೆ ನೀರು ಕುಡಿಯುವ ಮಹಿಳೆಯರಲ್ಲಿ ಈ ಸೋಂಕು ಹೆಚ್ಚಾಗಿ ಉಂಟಾಗುತ್ತದೆ ಎಂದು ಹಿರಿಯ ಲೇಖಕ ಡಾಯ ಯೈರ್ ಲೋಟನ್ ಅವರು ಹೇಳಿದ್ದಾರೆ.

ಶೇ.50 ರಷ್ಟು ಮಹಿಳೆಯರು ಮೂತ್ರಕೋಶ ಸೋಂಕಿನಿಂದ ಬಳಲುತ್ತಿರುತ್ತಾರೆ. ಹೀಗಾಗಿ ಈ ಸಂಶೋಧನೆ ಅತ್ಯಂತ ಮುಖ್ಯವಾಗಿತ್ತು. ಮೊದಲ ಬಾರಿಗೆ ಸೋಂಕು ಎದುರಾದ ಬಳಿಕ ಅದು ಗುಣವಾಗುವುದಕ್ಕೂ ಮುನ್ನವೇ ಮಹಿಳೆಯರಲ್ಲಿ ಮತ್ತೊಮ್ಮೆ ಸೋಂಕು ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಈ ವೇಳೆ ಹೆಚ್ಚೆಚ್ಚು ನೀರು ಕುಡಿಯುವುದರಿಂದ ಬ್ಯಾಕ್ಟೀರಿಯಾಗಳ ಕಡಿಮೆಯಾಗುತ್ತದೆ. ಮೂತ್ರಕೋಶಕ್ಕೆ ಅಂಟಿಕೊಳ್ಳುವ ಬ್ಯಾಕ್ಟಿರಿಯಾಗಳು ನೀರಿನ ಮೂಲಕ ಹೊರಬರುತ್ತವೆ ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ಮೂತ್ರಕೋಶ ಸೋಂಕಿನಿಂದ ಬಳಲುತ್ತಿರುವ ಮಹಿಳೆಯರಲ್ಲಿ ಮೂತ್ರಕೋಶದಲ್ಲಿ ಅತೀವ ನೋವು, ಮೂತ್ರ ಮಾಡುವಾಗ ಕಷ್ಟ. ಯಾವಾಗಲೂ ಮೂತ್ರಕೋಶ ತುಂಬಿರುವಂತಹ ಅನುಭವ, ಸ್ವಲ್ಪವೇ ಮೂತ್ರ ಹೋಗುವುದು, ಕಿಬ್ಬೊಟ್ಟೆ ನೋವು, ಕೆಲವೊಮ್ಮೆ ಮೂತ್ರದಲ್ಲಿ ರಕ್ತ ಬೀಳುವ ಲಕ್ಷಣಗಳನ್ನು ಕಾಣಬಹುದು.

Comments are closed.