ಕರಾವಳಿ

‘ಸ್ವಚ್ಚತೆಯೇ ಸೇವೆ’ ಕಾರ್ಯಕ್ರಮದ ಮೂಲಕ ಗಾಂಧೀಜಿಯವರ ಕನಸು ನನಸು ಮಾಡಿದ ಪ್ರಧಾನಿ ಮೋದಿ : ಡಾ| ಎಚ್. ಶಿವಾನಂದ ಮೂರ್ತಿ

Pinterest LinkedIn Tumblr

ಮಂಗಳೂರು ಅಕ್ಟೋಬರ್ 03: ನಗರದ ಎಕ್ಕೂರಿನ ಮತ್ಸ್ಯನಗರ ಕ್ಯಾಂಪಾಸ್‍ನ ಮೀನುಗಾರಿಕಾ ಮಹಾವಿದ್ಯಾಲದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ಘಟಕವು ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಸಹಯೋಗದೊಂದಿಗೆ ಗಾಂಧಿ ಜಯಂತಿ ಯನ್ನು ಆಚರಿಸಿತು.

ಎನ್ನೆಸ್ಸೆಸ್‍ನ 50ನೇ ವರ್ಷದ ಸಮಾರಂಭದ ಹಿನ್ನೆಲೆಯಲ್ಲಿ ಇದೇ ಅಕ್ಟೋಬರ್ 2ನೇ ಮಂಗಳವಾರದಂದು ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚಣೆಯ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಕಾಲೇಜಿನ ಡೀನ್ ಡಾ| ಎಚ್. ಶಿವಾನಂದ ಮೂರ್ತಿಯವರು ಭಾರತ ಸ್ವಾತಂತ್ರ ಪೂರ್ವದಲ್ಲಿ ಶ್ರಮಪಟ್ಟ ಭಾರತೀಯರನ್ನು ನೆನಪಿಸಿ ದೇಶದ ಏಳಿಗೆಗಾಗಿ ದುಡಿದ ಮಹಾನ್ ವ್ಯಕ್ತಿಗಳು ದೇಶದ ಉಳಿವಿಗಾಗಿ ಪಣತೊಟ್ಟ ಸಾಧನೆಯನ್ನು ಸ್ಮರಿಸಿದರು.

ಕೇಂದ್ರ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯದ ಎನ್.ಎಸ್.ಎಸ್. ಯೋಜನೆಯು ದೇಶದ ಪಿತಾಮಹ ಮಹಾತ್ಮಗಾಂಧಿಯವರ ಕನಸಿನಂತೆ ಭಾರತವನ್ನು ಸ್ವಚ್ಚವಾಗಿಡಲು ಪ್ರಧಾನಿ ನರೇಂದ್ರ ಮೋದಿಯವರು 2ನೇ ಅಕ್ಟೋಬರ್ 2014 ರಂದು ಪ್ರಾರಂಭಿಸಿದ ‘ಸ್ವಚ್ಚತೆಯೇ ಸೇವೆ’ ಕಾರ್ಯಕ್ರಮದ ಮೂಲಕ ಪ್ರತಿಯೊಂದು ಹಳ್ಳಿ, ಗ್ರಾಮ, ಪಟ್ಟಣ, ನಗರ ಪ್ರದೇಶಗಳನ್ನು ಸ್ವಚ್ಚವಾಗಿಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಈ ಸಂದರ್ಭದಲ್ಲಿ ಹೇಳಿದರು.

ಎನ್ನೆಸ್ಸೆಸ್‍ನ ಕಾರ್ಯಕ್ರಮಾಧಿಕಾರಿ ಡಾ| ಎ.ಟಿ. ರಾಮಚಂದ್ರ ನಾಯ್ಕ ರವರು ಬಂದ ಅತಿಥಿಗಳನ್ನು ಸ್ವಾಗತಿಸಿ ಮಾತನಾಡುತ್ತಾ, ದೇಶದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯವತಿಯಿಂದ 50 ವರ್ಷಗಳ ಹಿಂದೆ ಪ್ರಾರಂಭವಾದ ಸ್ವಚ್ಚ ಭಾರತ ಆಂದೋಲನವು ನಿತ್ಯ ನಡೆಸುವಂತಹ ಒಂದು ವಿಶೇಷ ಯೋಜನೆಯಾಗಿದ್ದು ಶಾಲಾ-ಕಾಲೇಜುಗಳಲ್ಲಿ ಆಗಿಂದ್ದಾಗ್ಗೆ ನಡೆಸುವ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬ ಯುವಕರು ಭಾಗವಹಿಸಿ ಸ್ವಚ್ಚತೆ ಕಾಪಾಡುವಲ್ಲಿ ಸಹಕಾರಿಯಾಗುತ್ತದೆಂದು ಅಭಿಪ್ರಾಯಪಟ್ಟರು.

ಬಾಪೂಜಿಯವರ 150 ನೇ ಜನ್ಮದಿನವನ್ನು ದೇಶವಿಡೀ ವಿಜೃಂಬಣೆಯಿಂದ ಆಚರಿಸುತ್ತಿರುವುದರ ಬಗ್ಗೆ ಪ್ರಸ್ಥಾಪ ವ್ಯಕ್ತಪಡಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿದ ಭೋದಕ ಸಿಬ್ಬಂಧಿ ಮತ್ತು ಎಲ್ಲಾ ವಿದ್ಯಾರ್ಥಿಗಳನ್ನು ಸರ್ಕಾರಿ ರಜೆಯ ದಿನ ವ್ಯತಯ ಮಾಡದೇ ಹಾಜರಾದುದ್ದಕ್ಕೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಗಾಧೀಜಿಯವರ ಜೀವನಾಧಾರಿತ ಚಲನ ಚಿತ್ರವನ್ನು ಬಿತ್ತರಿಸಲಾಯಿತು. ನಂತರ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮತ್ತು ಭೋದಕ-ಭೋದಕೇತರಿಗೆ ಸ್ವಚ್ಚ ಭಾರತ ಕಪ್‍ನ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಚತುರ್ಥ ಪದವಿಯ ವಿದ್ಯಾರ್ಥಿ ರಿಂಸನ್ ಪಿಂಟೋ ಗಾಂಧೀಜಿಯವರನ್ನು ನೆನಪಿಸಿ ಸಾಧನೆ ಗೈದಹಾದಿಯ ಬಗ್ಗೆ ಸಂಗೀತದ ಮೂಲಕ ಮನೊರಂಜನೆ ನೀಡಿದರು. ಕು| ಪೂರ್ಣಶ್ರೀ ಎಂ.ಟಿ. ಕಾರ್ಯಕ್ರಮ ನಿರೂಪಿಸಿದರು.

ದ್ವಿತೀಯ ಬಿ.ಎ.ಎಸ್ಸಿ. ವಿದ್ಯಾರ್ಥಿಗಳಾದ ಕು| ಜೀವಿತಾ ಎಸ್. ನಾಯ್ಕ, ಕು| ಶೃತಿ ಎಚ್.ಯು. ಮತ್ತು ಕು| ಮೊನಾಲಿಸಾ ಪಾಂಡಾ ದೇಶಭಕ್ತಿಗೀತೆಯ ಮೂಲಕ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಮನೋಜ್‍ಕುಮಾರ್ ವಂದಿಸಿದರು.

Comments are closed.