ಆರೋಗ್ಯ

ಉತ್ತಮ ಆರೋಗ್ಯಕ್ಕಾಗಿ ದಿನಕೊಮ್ಮೆ ಸೈಕ್ಲಿಂಗ್

Pinterest LinkedIn Tumblr

ಹಿಂದಿನ ಕಾಲದಲ್ಲೆಲ್ಲಾದರೆ ಕೆಲವರು ಸೈಕಲ್ ತುಳಿದು ತಮ್ಮ ತಮ್ಮ ಕೆಲಸಕ್ಕಾಗಿ ದೂರದ ಊರಿಗೆ ಹೋಗುತ್ತಿದ್ದರು.ಅವರಿಗೆ ಸೈಕಲ್ಲೇ ಬುಲ್ಲೆಟ್ ಬೈಕ್ ಆಗಿತ್ತು

ಅದು ಬೇಸಿಗೆ ರಜೆಯ ಸಮಯ. ಮನೆಯಲ್ಲೇ ಕೂತು ಬೇಜಾರಾಗಿತ್ತು. ಹಾಗಾಗಿ ಅಜ್ಜನ ಮನೆಗೆ ಹೊರಟೆ. ಅಲ್ಲಿ ಮಕ್ಕಳದ್ದೇ ಸಾಮ್ರಜ್ಯ. ಆ ದಿನ ಅಲ್ಲಿದ್ದ ಹಳೆ ಸೈಕಲ್ ತುಳಿಯುತ್ತಾ ಎಲ್ಲರೂ ಆಟ ಆಡುತ್ತಿದ್ದರು. ನನಗೆ ನನ್ನ ಬಾಲ್ಯ ನೆನಪಿಗೆ ಬಂತು. ಆದರೆ ಈಗೆಲ್ಲ ಸೈಕಲ್ ತುಳಿಯುವರು ಕಾಣಸಿಗುವುದೇ ಅಪರೂಪ. ಹಿಂದಿನ ಕಾಲದಲ್ಲೆಲ್ಲಾದರೆ ಕೆಲವರು ಸೈಕಲ್ ತುಳಿದು ತಮ್ಮ ತಮ್ಮ ಕೆಲಸಕ್ಕಾಗಿ ದೂರದ ಊರಿಗೆ ಹೋಗುತ್ತಿದ್ದರು.ಅವರಿಗೆ ಸೈಕಲ್ಲೇ ಬುಲ್ಲೆಟ್ ಬೈಕ್ ಆಗಿತ್ತು. ಆಗೆಲ್ಲ ವಾಹನದ ಸೌಕರ್ಯ ಕಡಿಮೆಯಿತ್ತು.

ಪರಿಸರ ಹಾನಿ
ಈಗೆಲ್ಲೆಲ್ಲೂ ನೋಡಿದರೂ ಪರಿಸರ ಹಾನಿಯಾಗುತ್ತಿದೆ. ಮಾನವ ಎಲ್ಲಾ ರೀತಿಯಲ್ಲೂ ಪರಿಸರಕ್ಕೆ ಹಾನಿ ಮಾಡುತ್ತಿದ್ದಾನೆ. ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದೇ ಹೊರತು ಕಮ್ಮಿಯಾಗುತ್ತಿಲ್ಲ. ಇದರಿಂದ ಪರಿಸರ ಮಾಲಿನ್ಯವಾಗುತ್ತಿದ್ದು ಮುಂದೊಂದು ದಿನ ಮಾರಣಾಂತಿಕ ಸಮಸ್ಯೆ ಎದುರಾಗದೇ ಇರಲಾರವು. ಪರಿಸರ ನಮಗೆ ಸೃಷ್ಟಿಯು ಕಲ್ಪಿಸಿ ಕೊಟ್ಟ ವರ. ಅದನ್ನು ಬೆಳೆಸಿ ಉಳಿಸಿ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವೂ ಹೌದು.

ಒಂದು ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ವಾಹನ ಬೇಕೇ ಬೇಕು ಅದು ಈಗಿನ ಟ್ರೆಂಡ್. ಜನ ಸಂಖ್ಯೆಗೆ ಅನುಸಾರವಾಗಿ ವಾಹನದ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರಿಂದ ಬಿಡುಗಡೆಯಾಗುವ ಕಾರ್ಬನ್ ಆಕ್ಸೈಡ್ ನಮ್ಮ ಪರಿಸರವನ್ನು ನಾಶ ಮಾಡಿ ಶುದ್ದ ಗಾಳಿಯ ಬದಲು ಅಶುದ್ದ ಗಾಳಿಯನ್ನು ಹೊರಹಾಕುತ್ತದೆ. ಇದನ್ನೇ ಸೇವನೆ ಮಾಡಬೇಕಾಗುವ ಪರಿಸ‍್ಥಿತಿ ಇಂದು ನಾವು ಎದುರುಗಾಣುತ್ತಿದ್ದೇವೆ.

ದಿನಕೊಮ್ಮೆಯಾದರೂ ಸೈಕ್ಲಿಂಗ್ ಮಾಡಿ
ನಮ್ಮ ಪಕ್ಕದ ಮನೆಗೆ ಹೋಗಬೇಕಾದರೂ ನಾವು ಬೈಕ್ ಅಥವಾ ಕಾರಿನಲ್ಲಿ ಓಡಾಡುತ್ತೇವೆ. ಇದರಿಂದ ನಮ್ಮ ಶರೀರಕ್ಕೆ ವ್ಯಾಯಾಮ ಸಿಗುವುದಿಲ್ಲ. ಅದರ ಬದಲು ಸೈಕಲ್ಲ್ ಬಳಕೆ ಮಾಡಿದರೆ ಹೇಗೆ? ಹೌದು ಸೈಕಲ್ಲ್ ತುಳಿಯುವುದರಿಂದ ನಮ್ಮ ಅಂಗಾಂಗಗಳಿಗೆ ಸರಿಯಾದ ವ್ಯಾಯಾಮ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಸೈಕ್ಲಿಂಗ್ ಮಾಡಲು ಮುಗಿಬೀಳುತ್ತಿದ್ದಾರೆ. ಹೆಚ್ಚಿನ ಕಡೆ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸೈಕ್ಲಿಂಗ್ ರಾಯಿಲಿಕೂಡ ನಡೆಸುತ್ತಿದ್ದಾರೆ. ಸೈಕ್ಲಿಂಗ್ ಬಳಕೆಯಿಂದ ಮಾಲಿನ್ಯವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು.

ದಿನಕೊಮ್ಮೆಯಾದರೂ ಸೈಕ್ಲಿಂಗ್ ಮಾಡಿದರೆ ದೇಹ ತೆಳ‍್ಳಗಾಗಿಸಲು ಜಿಮ್ ಸೆಂಟರ್ ಅಂತ ಕಾಲ ಕಳೆಯ ಬೇಕಿಲ್ಲ. ಬದಲಾಗಿ ದಿನ ನಿತ್ಯ ಒಂದು ಹೊತ್ತಾದರೂ ಪೆಡ್ಲಿಂಗ್ ಮಾಡಿದರೆ ಆಕ್ಸಿಜನ್ ಹೆಚ್ಚು ಉತ್ಪತಿಗೊಂಡು ಚರ್ಮಕ್ಕೆ ತಾಜಾ ಗಾಳಿ ನೀಡಿ ನಮಗೆ ಹೊಸ ಹುರುಪನ್ನು ನೀಡುತ್ತದೆ.

ಸೈಕ್ಲಿಂಗ್ ಮಾಡುವುದರಿಂದ ದೇಹಕ್ಕೆ ದೃಡತೆ ನೀಡಿ ಪಾದಗಳು ಮತ್ತು ಸ್ನಾಯುಗಳಗೆ ಸಾಮರ್ಥ್ಯ ನೀಡುತ್ತದೆ. ಕ್ರಮವಾದ ಸೈಕ್ಲಿಂಗ್ ಮಾಡುವುದರಿಂದ ಬೊಜ್ಜು ಮಧುಮೇಹ, ಅಧಿಕ ರಕ್ತದೊತ್ತಡ, ಹಾಗೂ ಇತರೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬರದಂತೆ ತಡೆಯುತ್ತದೆ. ದಿನಕ್ಕೆ 20 ರಿಂದ 30 ನಿಮಿಷ ಸೈಕ್ಲಿಂಗ್ ಮಾಡಿದರೆ ನಿದ್ರಾಹೀನತೆಯನ್ನು ನಿವಾರಿಸುತ್ತದೆ, ಅದಲ್ಲದೆ ನಮ್ಮ ಮನಸ್ಸಿಗೆ ಮನೋಲ್ಲಾಸ ನೀಡಿ ದಿನವಿಡೀ ಲವಲವಿಕೆಯಿಂದ ಇರಬಹುದು.

Comments are closed.