ಭಾರತದಲ್ಲಿ ಹಲವಾರು ನಂಬಿಕೆಗಳಿವೆ, ಕೆಲವೊಂದು ಇಂತಹ ನಂಬಿಕೆಗಳ ಮೂಲ ಹುಡುಕುತ್ತಾ ಹೊರಟರೆ ಅದರಲ್ಲಿ ನಿಜವಾಗಲೂ ಒಂದು ಲಾಜಿಕ್ ಇರುತ್ತದೆ. ಅದರಲ್ಲಿ ಒಂದು ಮೊಸರಿಗೆ ಸಕ್ಕರೆ ಹಾಕಿ ತಿನ್ನುವುದು. ಇದು ಭಾರತೀಯರಿಗೆ ತುಂಬಾ ಇಷ್ಟವಾಗಿರುವ ಸಿಹಿ. ಅಲ್ಲದೆ, ಸಾಮಾನ್ಯವಾಗಿ ಮಕ್ಕಳು ಪರೀಕ್ಷೆ ಬರೆಯಲು ಹೋಗುವ ಮೊದಲು ಇದನ್ನು ಮಕ್ಕಳಿಗೆ ತಿನ್ನಿಸುವ ಸಂಪ್ರದಾಯವೂ ಹೆಚ್ಚಿನ ಕಡೆಗಳಲ್ಲಿದೆ.
ರಾತ್ರಿ ಹೊತ್ತು ಮೊಸರು ತಿಂದರೆ ಏನಾಗುತ್ತದೆ?
ಮೊಸರಿಗೆ ಸಕ್ಕರೆ ಹಾಕಿ ಮಕ್ಕಳಿಗೆ ಕೊಟ್ಟರೆ ಅವರಿಗೆ ಪರೀಕ್ಷೆ ಸುಲಭವಾಗಿರುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಆದರೆ ಈ ನಂಬಿಕೆ ಎಷ್ಟು ನಿಜ ಎನ್ನುವುದಕ್ಕಿಂತ ಇದರ ಹಿಂದೆ ಒಂದು ವೈಜ್ಞಾನಿಕ ಕಾರಣ ಇದೆ ಗೊತ್ತೇ? ಆಯುರ್ವೇದ ಈ ಬಗ್ಗೆ ಏನು ಹೇಳುತ್ತದೆ?
ಸಕ್ಕರೆ ಮತ್ತು ಮೊಸರು ಮಿಕ್ಸ್ ಮಾಡಿ ತಿನ್ನುವುದರಿಂದ ಬೇಗನೆ ಹಸಿವು ಆಗುವುದಿಲ್ಲ, ಆದ್ದರಿಂದ ಮಾಡುವ ಕೆಲಸದತ್ತ ಗಮನ ಹರಿಸಬಹುದು, ಬೇಗನೆ ಬಳಲಿಕೆ ಉಂಟಾಗುವುದಿಲ್ಲ. ಇದರಿಂದ ಮಕ್ಕಳು ಪರೀಕ್ಷೆ ಬರೆಯುವಾಗ ಯಾವುದೇ ದೈಹಿಕ ಬಳಲಿಕೆ ಇಲ್ಲದೆ, ಸರಾಗವಾಗಿ ಪರೀಕ್ಷೆ ಬರೆದು ಮುಗಿಸಬಹುದು. ಆದ್ದರಿಂದಲೇ ಪರೀಕ್ಷೆಗೆ ಹೋಗುವ ಮುನ್ನ ಮೊಸರಿನಲ್ಲಿ ಸಕ್ಕರೆ ಹಾಕಿ ನೀಡಲಾಗುವುದು

Comments are closed.