ಆರೋಗ್ಯ

ಮಗು ಕೈಗೆ ಸಿಕ್ಕಿದ ಎಲ್ಲಾ ವಸ್ತುಗಳನ್ನು ಬಾಯಿಗೆ ಹಾಕಿ ಬೊಚ್ಚು ದವಡೆಯಿಂದ ಕಚ್ಚುವುದು ಯಾಕೆ ಗೊತೆ..?

Pinterest LinkedIn Tumblr

ಹಲ್ಲು ಮೊಳೆಯುವ ಸಮಯಹಲ್ಲು ಮೊಳೆಯುವ ಸಮಯಮೊನ್ನೆದಿನ ತಾಯಿಯೊಬ್ಬಳು ತನ್ನ ಮಗುವನ್ನು ದಂತ ಚಿಕಿತ್ಸಾಲಯಕ್ಕೆ ಕರೆತಂದು ಕಳೆದರೆಡು ದಿನಗಳಿಂದ ಮಗು ಪದೇ ಪದೇ ಅಳುತ್ತ್ತಿದೆ. ಕೈಗೆ ಸಿಕ್ಕಿದ ಎಲ್ಲಾ ವಸ್ತುಗಳನ್ನು ಬಾಯಿಗೆ ತುರುಕುತ್ತದೆ ಮತ್ತು ನಿನ್ನೆಯಿಂದ ಬೇಧಿ ಬೇರೆ ಶುರುವಾಗಿದೆ. ಕೆಳಗಿನ ದವಡೆಯ ಮೇಲ್ಬಾಗದ ವಸಡು ಕೆಂಪಾಗಿದೆ ಎಂದು ಒಂದೇ ಉಸಿರಿನಲ್ಲಿ ಹೇಳಿದ್ದರು.

ಆ ಮಗುವಿನ ವಯಸ್ಸು 6 ರಿಂದ 8 ತಿಂಗಳು ಇರಬಹುದು. ಇದು ಹೆಚ್ಚಿನ ಎಲ್ಲಾ ತಾಯಂದಿರು ಮಕ್ಕಳಲ್ಲಿ ಕಂಡುಬರುವ ಸಹಜವಾದ ಪ್ರತಿಕ್ರಿಯೆ ಸಾಮಾನ್ಯವಾಗಿ ಮಕ್ಕಳಲ್ಲಿ ಹಾಲು ಹಲ್ಲು 6 ರಿಂದ 8 ತಿಂಗಳಿನ ಒಳಗೆ ಮೊಳೆಯಲು (ಹುಟ್ಟಲು) ಆರಂಭವಾಗುತ್ತದೆ. ದವಡೆಯ ಮೇಲಿರುವ ವಸಡನ್ನು ಸೀಳಿಕೊಂಡು ಹಲ್ಲು ಮೊಳೆಯುವುದು. ಈ ಪ್ರತಿಕ್ರಿಯೇ ಈ ಪ್ರಕ್ರಿಯೇ ಹಲ್ಲು ಹುಟ್ಟುವುದು ಎನ್ನಲಾಗುತ್ತದೆ. ಸುಮಾರು 6 ರಿಂದ 24 ತಿಂಗಳವರೆಗೆ ಈ ಪ್ರಕ್ರಿಯೆ ಮುಂದುವರಿಯುತ್ತದೆ.

ಲಕ್ಷಣ ಏನು?
ವಸಡಿನ ಮೇಲ್ಬಾಗ ಊದಿಕೊಂಡು ಕೆಂಪಾಗುವುದು, ಸಣ್ಣದಾದ ನೋವು, ಮಗು ಕಾರಣವಿಲ್ಲದೆ ಅಳುವುದು, ಕೈಗೆ ಸಿಕ್ಕಿದ ಎಲ್ಲಾ ವಸ್ತುಗಳನ್ನು ಬಾಯಿಗೆ ಹಾಕಿ ಬೊಚ್ಚು ದವಡೆಯಿಂದ ಕಚ್ಚುವುದು. ಪದೇ ಪದೇ ಬಾಯಿಗೆ ಕೈ ಹಾಕುವುದು, ಪದೇ ಪದೇ ಅಳುವುದು. ಇವೆಲ್ಲವೂ ಹಲ್ಲು ಹುಟ್ಟುವಾಗ ಕಂಡುಬರುವ ಸಾಮಾನ್ಯ ಲಕ್ಷಣಗಳು. ಕೆಲವೊಮ್ಮೆ ಜ್ವರ, ಬೇಧಿ, ಕೆಮ್ಮು ಮತ್ತು ನೆಗಡಿ ಆಗುವ ಸಾಧ್ಯತೆಗಳು ಇರುತ್ತದೆ. ಕೈ ಗೆ ಸಿಕ್ಕಿದ ಎಲ್ಲಾ ವಸ್ತುಗಳನ್ನು ಬಾಯಿಗೆ ಹಾಕಿದಾಗ ಇದೆಲ್ಲಾ ಸರ್ವೆ ಸಾಮಾನ್ಯ. ಹೀಗೆ ಮಾಡಿದಾಗ ಬೇಧಿ, ಜ್ವರ, ಶೀತ ಉಂಟಾಗುವ ಸಾಧ್ಯತೆ ಇರುತ್ತದೆ. ಇರದ ಜೊತೆಗೆ ಜಾಸ್ತಿ ಜೊಲ್ಲು ರಸ ಹರಿಯುವುದು. ನಿದ್ರಾಹೀನತೆ ಆಹಾರ ತಿನ್ನಲು ಕಿರಿ ಕಿರಿ ಮಾಡುವುದು. ಕೂಡಾ ಕಾಣಿಸಿಕೊಳ್ಳುತ್ತದೆ.

ಚಿಕಿತ್ಸೆ ಹೇಗೆ?
ಜ್ವರ ಮತ್ತು ಬೇಧಿ ಇದ್ದಲ್ಲಿ ವೈದ್ಯರ ಸಲಹೆ ಅವಶ್ಯಕ. ಹಲ್ಲು ಮೂಡುವ ಕಾರಣದಿಂದಲೇ ಜ್ವರ ಬಂದಿದೆ ಎಂಬುವುದನ್ನು ಪ್ರಾಮಾಣಿಕರಿಸಲು ವೈದ್ಯರ ಸಲಹೆ ಅವಶ್ಯಕ. ಬೇರೆ ವೈರಾಣುನಿಂದ ಜ್ವರ ಬಂದಿದ್ದಲ್ಲಿ ಸೂಕ್ತ ಚಿಕಿತ್ಸೆ ನೀಡತಕ್ಕದು. ಹೆಚ್ಚಾಗಿ ದಂತ ವೈದ್ಯರ ಬಳಿ ಹೋದಲ್ಲಿ ಮೊಳೆಯುವ ಸಮಯದಲ್ಲಿ ಹಲ್ಲು ಮೂಳೆಯುವ ಆಟಿಕೆಗಳನ್ನು ನೀಡುತ್ತಾರೆ. ಕೈಗೆ ಸಿಕ್ಕಿದ ಗಲೀಜು ವಸ್ತುಗಳನ್ನು ಬಾಯಿಗೆ ಹಾಕಿ ವಸಡುಗಳ ಮದ್ಯೆ ಕಚ್ಚುವುದನ್ನು ತಡೆಯಲು ಈ ಆಟಿಕೆಗಳು ಸಹಾಯಕಾರಿ. ಚೆನ್ನಾಗಿ ತೊಳೆದು ಶುಬ್ರಗೊಳಿಸಿದ ಈ ಆಟಿಕೆಗಳನ್ನು ಮಗುವಿಗೆ ನೀಡಿದಲ್ಲಿ ಯಾವುದೇ ತೊಂದರೆ ಆಗದು. ಮಾರುಕಟ್ಟೆಯಲ್ಲಿ ಸಿಗುವ ಕಳಪೆ ಗುಣಮಟ್ಟದ, ಕಡಿಮೆ ಕ್ರಮದ ಚೈನೀಸ್ ಆಟಿಕೆಗಳನ್ನು ಬಳಸಬೇಡಿ. ಅದೇ ರೀತಿ ರಾಸಾಯನಿಕಗಳನ್ನು ಬಿಡುಗಡೆ ಮಾಡುವ ಆಟಿಕೆಗಳನ್ನು ಬಳಸಬಾರದು. ದಂತವೈದ್ಯರ ಸಲಹೆ ಮೇರೆಗೆ ವೈದ್ಯರು ಸೂಚಿಸಿದ ಆಟಿಕೆಗಳನ್ನು ಬಳಸತಕ್ಕದು.

ಮನೆಮದ್ದು ಹೇಗೆ?

1. ಶುಚಿಯಾದ ಶುಭ್ರವಾದ ಬಟ್ಟೆಯಲ್ಲಿ ಐಸ್‍ಗಡ್ಡೆಯನ್ನು ಇಟ್ಟು ಚೆನ್ನಾಗಿ ಸುತ್ತಿ ಐಸ್‍ಗಡ್ಡೆಹೊರಬಾರದಂತೆ ಮಾಡಿದ ನಂತರ ಮಗುವಿಗೆ ಈ ಗಂಟನ್ನು ನೀಡಿದಾಗ, ಬೊಚ್ಚು ದವಡೆಗಳ ನಡುವೆ ಮಗು ಕಚ್ಚಿದಾಗ ಮಗುವಿಗೆ ನೋವು ನಿವಾರಣೆ ಆಗಿ ಹಿತವಾದ ಮುದ ನೋಡುತ್ತದೆ.
2. ಮಗುವಿಗೆ ಹಾಲು ಅಥವಾ ನೀರು ನೀಡುವ ನಿಪ್ಪಲ್ ಇರೊ ಬಾಟಲಿನಲ್ಲಿ ನೀರು ತುಂಬಿಸಿ ಚೆನ್ನಾಗಿ ತಂಪುಗೊಳಿಸಿ ಐಸ್‍ಗಡ್ಡೆಯಂತಾದಾಗ ಮಗುವಿಗೆ ವಸಡುಗಳ ನಡುವೆ ಈ ಬಾಟಲಿಯನ ನಿಪ್ಪಲನ್ನು ಇಟ್ಟಾಗ ಮಗು ಅದನ್ನು ಕಡಿದಾಗ ಹಿತವಾದ ಅನುಭವ ಉಂಟಾಗಿ ಮಗು ಅಳುವುದನ್ನು ನಿಲ್ಲಿಸುತ್ತದೆ.
3. ಚೆನ್ನಾಗಿ ತೊಳೆದ ಸಿಪ್ಪೆ ಸುಲಿದ ದೊಡ್ಡದಾದ ಕ್ಯಾರೆಟ್ ನ್ನು ಚೆನ್ನಾಗಿ ತಂಪುಗೊಳಿಸಿ ಮಗುವಿಗೆ ನೀಡಿದಲ್ಲಿ, ಬೊಚ್ಚು ವಸಡುಗಳ ನಡುವೆ ಜಗಿದಾಗ ನೋವು ಶಮನವಾಗುತ್ತದೆ.
4. ಏನೂ ಸಿಗದಿದ್ದಲ್ಲಿ ಬಣ್ಣ ಬಳಿದ ಆಟಿಕೆಗಳ ಬದಲಾಗಿ, ಚೆನ್ನಾಗಿ ತೊಳೆದು ಶುಭ್ರಗೊಳಿಸಿದ ಕರವಸ್ತ್ರವನ್ನು ನೀಡಿದರೂ ಮಗು ಅದನ್ನು ಜಗಿಯುತ್ತಾ ತನ್ನ ನೋವನ್ನು ಮರೆಯುವ ಸಾಧ್ಯತೆ ಇದೆ. ಇಷ್ಟೆಲ್ಲಾ ಮಾಡಿದ ಬಳಿಕವೂ ಮಗು ಮತ್ತೆ ಕಿರಿ ಕಿರಿ ಮಾಡುತ್ತಿದ್ದಲ್ಲಿ, ಅಲ್ಪ ಪ್ರಮಾಣದ ವಸಡನ್ನು ಮರಗಟ್ಟಿಸುವ ಔಷಧಿಯಿಂದ ಚೆನ್ನಾಗಿ ವಸಡಿನ ಮೇಲೆ ಹಚ್ಚಿ ಮಸಾಜ್ ಮಾಡಿದ್ದಲ್ಲಿ ತಾತ್ಕಲಿಕವಾಗಿ ನೋವು ಶಮನವಾಗುತ್ತದೆ. ಹೆತ್ತವರು ಕೈ ಚೆನ್ನಾಗಿ ತೊಳೆದ ಬಳಿಕ ಮಗುವಿನ ವಸಡನ್ನು ಹೆತ್ತವರು ಹಿತವಾಗಿ ಉಜ್ಜಬೇಕು. ಈ ರೀತಿ ಉಜ್ಜುವುದರಿಂದ ಮಗುವಿಗೆ ಹಿತವಾದ ಮಸಾಜ್ ಮಾಡಿದಂತಾಗಿ ಮಗುವಿಗೆ ಮತ್ತಷ್ಟು ಖಷಿಯಾಗುತ್ತದೆ ಮತ್ತು ಹಿತಕರವಾದ ಅನುಭವ ಉಂಟಾಗುತ್ತದೆ. ಒಟ್ಟಿನಲ್ಲಿ 6 ತಿಂಗಳಿನಿಂದ ಆರಂಭವಾಗುವ ‘ಹಲ್ಲು ಪ್ರಸವದ’ ಈ ನೋವು ಮಕ್ಕಳನ್ನು ಕಾಡುವುದಂತೂ ಸತ್ಯವಾದ ಮಾತು. ಸುಮಾರು 24 ರಿಂದ 30 ತಿಂಗಳಾಗುವಾಗ ಎಲ್ಲ 20 ಹಾಲು ಹಲ್ಲುಗಳು ಬಂದಿರುತ್ತದೆ. ಸಾಮಾನ್ಯವಾಗಿ ಹಿಂಭಾಗದ ದವಡೆ ಹಲ್ಲುಗಳು ಮೊಳೆಯುವಾಗ ಕಿವಿನೋವು ಮತ್ತು ಬಾಯಿಯ ಹಿಂಭಾಗದಲ್ಲಿ ನೋವು ಇರುವ ಸಾಧ್ಯತೆಯೂ ಇದೆ. ಕೆಲವೊಮ್ಮೆ ಹಲ್ಲು ಹೊರಬರುವ ವಸಡಿನ ಭಾಗದಲ್ಲಿ ನೀರಿನಂತ ಉರಿಯೂತದ ದ್ರಾವಣ ತುಂಬಿಕೊಂಡು ಗುಳ್ಳೆಯ ರೀತಿಯಲ್ಲಿ ಉಬ್ಬಿಕೊಳ್ಳಬಹುದು. ಇದಕ್ಕೆ ಗಾಬರಿಯಾಗುವ ಅವಶ್ಯಕತೆ ಇಲ್ಲ. ದಂತವೈದ್ಯರ ಬಳಿ ತೋರಿಸಿಕೊಂಡಲ್ಲಿ ಈ ಗುಳ್ಳೆಯನ್ನು ಓಡೆದು ಹಲ್ಲು ಸರಿಯಾಗಿ ಮೂಡುವಂತೆ ದಂತವೈದ್ಯೆರು ಮಾಡುತ್ತಾರೆ.

Comments are closed.