ಆರೋಗ್ಯ

ಹೆಚ್ಚು ಕಾಲ ಆರೋಗ್ಯವಾಗಿ ಬದುಕಲು ಬಯಸುವವರು ಆಹಾರಗಳ ಜೊತೆ ಇದನ್ನ ಸೇರಿಸಿ…

Pinterest LinkedIn Tumblr

ಪ್ರತಿಯೊಂದು ಜೀವಿಯು ಬದುಕಲು ಇಚ್ಚಿಸುತ್ತದೆ. ಹಾಗೆಯೆ ಮನುಷ್ಯ ಜೀವಿಯು ಸಹ ಹೆಚ್ಚು ಕಾಲ ಬದುಕಲು ಇಚ್ಚಿಸುತ್ತಾನೆ. ನಾವು ಹೆಚ್ಚು ದಿನ ಬದುಕುವುದಕ್ಕಾಗಿಯೇ ಕೆಲಸ, ಮನೆ, ಸಂಸಾರ, ಜೀವನ, ಹಣಗಳಿಸುತ್ತಿರುವುದು ಎಲ್ಲವು ತಾನು ಬದುಕುವುದಕ್ಕಾಗಿಯೇ, ಆದರೆ ಎಷ್ಟು ದಿನ ಬದುಕುತ್ತೇವೆ ಎಂಬುದು ಯಾರಿಗೂ ಸಹ ತಿಳಿದಿಲ್ಲ. ಕೇವಲ ಹೆಚ್ಚು ಕಾಲ ಬದುಕುವುದಕ್ಕಾಗಿಯೇ ಪ್ರತಿ ದಿನ, ಪ್ರತಿ ಗಂಟೆ, ಪ್ರತಿ ಕ್ಷಣ, ಹೋರಾಡುತ್ತಿರುವುದು ಈ ಮನುಷ್ಯ ಜೀವಿ. ಅದಕ್ಕಾಗಿ ಹೆಚ್ಚು ಕಾಲ ಬದುಕಲು ಬಯಸುವವರು ಈ ಆಹಾರಗಳನ್ನ ಸೇವಿಸಿ…

ಏಲಕ್ಕಿ
ಸಿಹಿ ತಿನಿಸು, ಪಾಯಸ ಮಾಡುವುದಿದ್ದರೆ ಏಲಕ್ಕಿ ಬೇಕೇ ಬೇಕು. ಏಲಕ್ಕಿ ಕೇವಲ ಸಿಹಿ ಪದಾರ್ಥಗಳ ರುಚಿ ಹೆಚ್ಚಿಸುವುದಕ್ಕೆ ಮಾತ್ರವಲ್ಲ ನಮ್ಮ ದೇಹದ ಒಳಗಿರುವ ವಿಷಕಾರಿ ಅಂಶವನ್ನು ಹೊರ ಹಾಕುವ ಗುಣವನ್ನ ಹೊಂದಿದೆ. ಇದು ನಮ್ಮ ಜೀರ್ಣ ಪ್ರಕ್ರಿಯೆಯನ್ನು ಸುಗಮಗೊಳಿಸುವುದಲ್ಲದೆ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಜೀರಿಗೆ
ನಮ್ಮ ಅಡುಗೆ ಮನೆಯಲ್ಲಿ ಸಿಗುವ ಸಾಮಾನ್ಯ ವಸ್ತು ಎಂದರೆ ಅದು ಜೀರಿಗೆ. ಇದು ಎಲ್ಲಾ ರೀತಿಯ ಉದರ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಅಷ್ಟೇ ಅಲ್ಲದೆ, ಇದು ನರ ವ್ಯೂಹವನ್ನು ಚುರುಕುಗೊಳಿಸುತ್ತದೆ. ಪ್ರತಿ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ಹಾಕಿದ ನೀರು ಸೇವಿಸುವುದು ತುಂಬಾ ಉತ್ತಮ. ಜೀರಿಗೆ ಟೀ ಕೂಡ ಆರೋಗ್ಯಕ್ಕೆ ಬಹಳ ಉಪಯುಕ್ತ.

ನೆಲ್ಲಿಕಾಯಿ
ಬೆಟ್ಟದ ನೆಲ್ಲಿಕಾಯಿ ಸುದೀರ್ಘ ಜೀವನಕ್ಕೆ ರಹದಾರಿ ಎಂದು ಹಲವು ಆಯುರ್ವೇದ ತಜ್ಞರು ಹೇಳುತ್ತಾರೆ. ದೇಹದ ಮೂರು ಸ್ಥಿತಿಗಳಾದ ವಾತ, ಕಫ ಮತ್ತು ಪಿತ್ಥ ಇವು ಮೂರನ್ನೂ ಸಮತೋಲನದಲ್ಲಿಡಲು ನೆಲ್ಲಿಕಾಯಿ ಸಹಕಾರಿ. ಇದರಲ್ಲಿ ರೋಗ ನಿರೋಧಕ ಶಕ್ತಿಯೂ ಅಧಿಕವಾಗಿದ್ದು, ವಯಸ್ಸಾಗುವಿಕೆಯನ್ನು ತಡೆಗಟ್ಟುವ ಗುಣ ಹೊಂದಿದೆ.

ಶುಂಠಿ
ಶೀತ, ಕೆಮ್ಮು ಶೀತದ ಇತರೆ ಯಾವುದೇ ಕಾಯಿಲೆ ಬಂದರೆ ಶುಂಠಿ ಸೇವಿಸುತ್ತೇವೆ. ಈ ಶುಂಠಿಯಲ್ಲಿ ಸುಮಾರು ರೀತಿಯ ಆಂಟಿ ಆಕ್ಸಿಡೆಂಟ್ ಗುಣವಿದೆ ಎನ್ನಲಾಗುತ್ತದೆ. ಇದು ಹೃದಯ ಖಾಯಿಲೆ, ಕ್ಯಾನ್ಸರ್, ಎಲುಬಿನ ಸಮಸ್ಯೆಯಂತಹ ಗಂಭೀರ ಸಮಸ್ಯೆಗಳು ಬರದಂತೆ ನಮ್ಮ ದೇಹವನ್ನು ರಕ್ಷಿಸುತ್ತದೆ ಎನ್ನಲಾಗುತ್ತದೆ.

Comments are closed.