ಆರೋಗ್ಯ

ಪುರುಷರಿಗೆ ಸೆಕ್ಸ್ ಸಂದರ್ಭದಲ್ಲಿ ಕಾಡುವ ಪ್ರಮುಖ ಸಮಸ್ಯೆಗಳಿವು

Pinterest LinkedIn Tumblr

ಹಲವು ಅನುಮಾನಗಳಿಗೆ ಅವರಲ್ಲಿಯೇ ಪರಿಹಾರವಿರುತ್ತದೆ
ಆತ್ಮವಿಶ್ವಾಸದಿಂದಿರೆ ಸೆಕ್ಸ್ ಜೀವನ ಉತ್ತಮವಾಗಿರುತ್ತದೆ
ರತಿಕ್ರೀಡೆಗೆ ಮಂಚಕ್ಕೆ ಬಂದಾಗ ತಾವು ಸಿಂಹದಂತೆ ಘರ್ಜಿಸಬಹುದು ಎಂಬ ಭಾವನೆ ಪುರುಷರಲ್ಲಿರುತ್ತದೆ. ಇದಕ್ಕೆ ಪೋರ್ನ್ ಚಿತ್ರಗಳು ಕಾರಣವಾಗಿರಬಹುದು. ಆದರೆ ವಾಸ್ತವದಲ್ಲಿ ನಡೆಯುವುದೇ ಬೇರೆಯಂಬುದು ಹಲವು ದೇಶಗಳಲ್ಲಿ ಕೈಗೊಂಡ ಸಮೀಕ್ಷೆಗಳಿಂದ ತಿಳಿದು ಬಂದಿದೆ. ಸೆಕ್ಸ್ ಸಮಯದಲ್ಲಿ ಗಂಡಸರಿಗೆ ನಿಜವಾಗಿಯೂ ಕಾಡುವ ಚಿಂತೆಗಳಿವು.

ನಿರೀಕ್ಷಿಸಿದಷ್ಟು ಸುಖ ನೀಡಲು ಸಾಧ್ಯವಾಗದಿದ್ದರೆ ?
ಬಹುತೇಕ ಪುರುಷರಲ್ಲಿ ಈ ಪ್ರಶ್ನೆ ಕಾಡುತ್ತಿರುತ್ತದೆ. ತಾವು ನೀಡುವ ಸುಖದಿಂದ ಸಂಗಾತಿ ಸಂಪೂರ್ಣ ತೃಪ್ತಿ ಹೊಂದಿದಳೋ ಸೆಕ್ಸ್ ನಂತರ ತನ್ನ ಬಗ್ಗೆ ನಕಾರಾತ್ಮಕ ಕಾರಣಗಳು ಆಕೆಯಲ್ಲಿ ಹುಟ್ಟಿಕೊಳ್ಳುತ್ತದೆಯೋ ಎಂಬ ಆಲೋಚನೆಗಳು ಮನಸ್ಸಿನಲ್ಲಿ ಬರಲು ಪ್ರಾರಂಭಿಸುತ್ತವೆ. ಅತೃಪ್ತಿ ಹೊಂದಿದ ಸಂಗಾತಿ ಸುಖಕ್ಕಾಗಿ ಬೇರೆಯವರನ್ನು ಹುಡುಕಿಕೊಂಡು ಹೋಗುವ ಭಯವು ಬರಲಾರಂಭಿಸುತ್ತದೆ. ಕೆಲವೊಮ್ಮೆ ವಯಾಗ್ರದಿಂದಲೂ ಸಂಪೂರ್ಣ ಪ್ರಯೋಜನವಾಗಿರುವುದಿಲ್ಲ.

ವೀರ್ಯಸ್ಖಲನದ ತೊಂದರೆ
ನಿಮ್ಮ ಸಂಗಾತಿಗೆ ನೀಡುವ ಸುಖದಿಂದ ಆತುರಾತುರದಲ್ಲಿ ವೀರ್ಯಸ್ಖಲನವಾದರೆ ಮುಂದೇನು ಮಾಡಬೇಕು ಎಂಬುದಾಗಿ ಚಿಂತಿಸುವವರು ಹಲವರು. ಮೈಮೇಲೆ ಬಿದ್ದ ಕೆಲವೇ ಸೆಕೆಂಡುಗಳಲ್ಲಿ ಸ್ಖಲಿಸಿಬಿಟ್ಟರೆ ಎಂಬ ವ್ಯಾಕುಲಗೊಳ್ಳುವುದು ಕೂಡ ಸಹಜ. ವೈದ್ಯಕೀಯವಾಗಿ ಒಂದು ನಿಮಿಷದವರೆಗೂ ಸಂಭೋಗ ಮಾಡುತ್ತೀರಾ ಎಂದರೆ ಚಿಂತಿಸುವ ಅಗತ್ಯವಿಲ್ಲ. ರತಿಕ್ರೀಡೆಯ ಸಮಯದಲ್ಲಿ ನೀವು ಮಾನಸಿಕವಾಗಿ ಆತ್ಮವಿಶ್ವಾಸದಿಂದರಬೇಕು. ಆಗ ಸುಖವು ಹೆಚ್ಚು ಲಭಿಸುತ್ತದೆ.

ಗರ್ಭಿಣಿಯಾಗಿಲ್ಲವಲ್ಲ?
ಇಬ್ಬರು ತೃಪ್ತಿ ಹೊಂದುಕೊಂಡು ಲೈಂಗಿಕ ಜೀವನ ಉತ್ತಮವಾಗಿ ನಡೆಯುತ್ತಿದ್ದರೂ ನಿಮ್ಮ ಸಂಗಾತಿ ಗರ್ಭವತಿಯಾಗದಿದ್ದರೆ ನಿಮ್ಮ ಮೇಲೆ ಭಯ ಇನ್ನಷ್ಟು ಶುರುವಾಗುತ್ತದೆ. ಆದರೆ ಇದು ಸಂಪೂರ್ಣ ತಪ್ಪು ಅಭಿಪ್ರಾಯ. ಸೆಕ್ಸ್ ಮಾಡಿದಾಗೆಲ್ಲಾ ನಿಮ್ಮವಳು ಗರ್ಭಿಣಿಯಾಗುತ್ತಾಳೆಂದು ನಿರೀಕ್ಷಿಸುವುದು ಸರಿಯಿಲ್ಲ. ದಂಪತಿಗಳು ಇಬ್ಬರೂ ಲೈಂಗಿಕವಾಗಿ ಆರೋಗ್ಯವಂತರಾಗಿದ್ದರೂ ಹಲವು ಸಂದರ್ಭಗಳಲ್ಲಿ ಮಕ್ಕಳಾಗದಿರುವ ಸಾಧ್ಯತೆಯಿದೆ. ಲೈಂಗಿಕ ತೃಪ್ತಿಯ ಜೊತೆಗೆ ದೈಹಿಕ ಆರೋಗ್ಯವು ಪ್ರಮುಖವಾಗಿರುತ್ತದೆ.

ಪೋರ್ನ್ ಚಿತ್ರಗಳಂತೆ ಭಾವಿಸುವುದು ತಪ್ಪು
ಪೋರ್ನ್ ಚಿತ್ರಗಳು ಭಾರತೀಯರನ್ನು ಆಗಾಧವಾಗಿ ಆವರಿಸಿದೆ. ವಿವಾಹವಾದವರು ಕೂಡ ಹೆಚ್ಚಿನ ಲೈಂಗಿಕ ಜ್ಞಾನಕ್ಕೆ ಪೋರ್ನ್ ದೃಶ್ಯಗಳನ್ನು ಅವಲಂಬಿಸುತ್ತಿದ್ದಾರೆ. ಆದೇ ರೀತಿ ಮಾಡಬೇಕೆಂದು ಆತೊರೆಯುತ್ತಾರೆ. ಆದರೆ ಬಹುತೇಕ ಮಹಿಳೆಯರು ಪೋರ್ನ್ ಚಿತ್ರಗಳ ಶೈಲಿಗಳನ್ನು ನಿರಾಕರಿಸುತ್ತಾರೆ. ಸಂಗಾತಿಗಳು ನಿರಾಕರಿಸಿದರೆ ನೀವು ಒತ್ತಡ ಹಾಕುವುದು ತಪ್ಪು. ಮನವೊಲಿಸಿದರೆ ಉತ್ತಮ. ಸೆಕ್ಸ್ ಎನ್ನುವುದು ನೈಸರ್ಗಿಕ ಸಹಜ ಜ್ಞಾನವಾಗಿರುವ ಕಾರಣ ಸಂಪೂರ್ಣ ಲೈಂಗಿಕ ತಿಳುವಳಿಕೆಯಿಲ್ಲದವರು ಉತ್ತಮವಾಗಿ ಸಂಭೋಗ ಮಾಡಬಲ್ಲವರಾಗಿರುತ್ತಾರೆ ಎಂಬುದು ವೈದ್ಯರ ಅಭಿಪ್ರಾಯ.

ಹಸ್ತಮೈಥುನ ಸಮಸ್ಯೆಯಲ್ಲ
ಸೆಕ್ಸ್’ನಲ್ಲಿ ಅತೃಪ್ತಿ ಹೊಂದುತ್ತಿದ್ದರೆ ಹಸ್ತಮೈಥುನ ಕಾರಣವೆಂದು ಹಲವರು ತಿಳಿದುಕೊಂಡಿರುತ್ತಾರೆ. ಹಸ್ತಮೈಥುನ ಸೆಕ್ಸ್ ಜೀವನಕ್ಕೆ ಯಾವುದೇ ಕಾರಣದಿಂದ ಅಡ್ಡಿ ಬರುವುದಿಲ್ಲ. ಹಸ್ತಮೈಥುನದಿಂದ ವೀರ್ಯ ಸ್ಖಲನವಾದರೂ ಕೆಲವೇ ಕೆಲವೂ ಗಂಟೆಗಳಲ್ಲಿ ನಿಮ್ಮ ವೀರ್ಯ ಮರು ಉತ್ಪಾದನೆಯಾಗುತ್ತದೆ. ಪೌಷ್ಟಿಕ ಆಹಾರಗಳನ್ನು ಸೇವಿಸಿದರೆ ಇನ್ನಷ್ಟು ಆರೋಗ್ಯವಂತರಾಗುತ್ತೀರಿ.

Comments are closed.