ಕರ್ನಾಟಕ

ಮದುವೆ ಮನೆಯಿಂದ ಅತ್ತೆ ಮಗಳ ಆಸೆಗೆ ಬಿದ್ದು ನಾಪತ್ತೆಯಾದ ವರ

Pinterest LinkedIn Tumblr

ತುಮಕೂರು: ತುಮಕೂರಿನ ಕುಣಿಗಲ್​ನಲ್ಲಿ ಮದುವೆ ಮನೆಯಿಂದ ನಾಪತ್ತೆಯಾಗಿದ್ದ ವರ, ಪೊಲೀಸ್​ ಠಾಣೆಯಲ್ಲಿ ಪ್ರತ್ಯಕ್ಷನಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ.

ಯಡಿಯೂರಿನ ಕಲ್ಲೇಗೌಡನಪಾಳ್ಯದ ಶಿವಕುಮಾರ್​ಗೂ ಕುಣಿಗಲ್​ನ ರಾಜಲಕ್ಷ್ಮಿ ಎಂಬುವವರ ವಿವಾಹ ಇಂದು ಯಡಿಯೂರಿನ ಹನುಮಮ್ಮ ತಿಮ್ಮೇಗೌಡ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿತ್ತು. ಆದರೆ, ಮೂಹೂರ್ತಕ್ಕೆ ಬಾರದೆ ಶಿವಕುಮಾರ್​ ಕಾಣೆಯಾಗಿದ್ದ. ಶಿವಕುಮಾರ್​ ಕುಟುಂಬದವರೂ ಮದುವೆಯಿಂದ ದೂರು ಉಳಿದಿದ್ದರು. ಇದರಿಂದ ವಧುವಿನ ಕುಟುಂಬಸ್ಥರು ಕಂಗಾಲಾಗಿದ್ದರು.

ಹೀಗಿರುವಾಗಲೇ ವರ ಶಿವಕುಮಾರ್​ ಕುಣಿಗಲ್​ ಠಾಣೆಯಲ್ಲಿ ಕಾಣಿಸಿಕೊಂಡಿದ್ದಾನೆ. ಮದುವೆ ಮನೆಯಿಂದ ನಾಪತ್ತೆಯಾಗಿರುವುದಕ್ಕೆ ಶಿವಕುಮಾರ್​ ಕಾರಣವನ್ನೂ ನೀಡಿದ್ದಾನೆ.

ಶಿವಕುಮಾರ್​ ಹುಲಿವಾನ ಗ್ರಾಮದಲ್ಲಿರುವ ತನ್ನ ಅತ್ತೆಯ ಮಗಳನ್ನು ಈ ಹಿಂದೆ ಪ್ರೀತಿಸಿದ್ದ. ಆದರೆ, ಉದ್ಯೋಗವಿಲ್ಲದ ಕಾರಣಕ್ಕೆ ಶಿವಕುಮಾರ್​ಗೆ ಮಗಳನ್ನು ಮದುವೆ ಮಾಡಿಕೊಡಲು ಅತ್ತೆ ಮನೆಯವರು ನಿರಾಕರಿಸಿದ್ದರು. ನಂತರ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಪಡೆಯುವಲ್ಲಿ ಶಿವಕುಮಾರ್​ ಯಶಸ್ವಿಯಾಗಿದ್ದ. ನಂತರ ಕುಣಿಗಲ್​ನ ರಾಜಲಕ್ಷ್ಮಿ ಅವರೊಂದಿಗೆ ಶಿವಕುಮಾರ್​ಗೆ ಮದುವೆ ನಿಶ್ಚಯವಾಗಿತ್ತು. ಅದರಂತೆ ಮೂರು ದಿನಗಳ ಹಿಂದೆ ವಿವಾಹ ಆಮಂತ್ರಣ ನೀಡಲು ಹುಲಿವಾನದ ಅತ್ತೆ ಮನೆಗೆ ಶಿವಕುಮಾರ್​ ತೆರಳಿದ್ದ. ಈ ವೇಳೆ ತಮ್ಮ ಮಗಳನ್ನೇ ಮದುವೆ ಮಾಡಿಕೊಡುವುದಾಗಿ ಅತ್ತೆ ಮನೆಯವರು ಶಿವಕುಮಾರ್​ಗೆ ಹೇಳಿದ್ದಾರೆ.

ಪ್ರೀತಿ ಮಾಡಿದ ಅತ್ತೆ ಮಗಳು ಸಿಗುವ ಆಸೆಗೆ ಬಿದ್ದ ಶಿವಕುಮಾರ್​ ನಿಶ್ಚಯವಾಗಿದ್ದ ಮದುವೆ ಮುರಿದುಕೊಂಡು, ಮದುವೆ ಮನೆಯಿಂದ ನಾಪತ್ತೆಯಾಗಿದ್ದ ಎನ್ನಲಾಗಿದೆ.

Comments are closed.