ಕರಾವಳಿ

ಪ್ರತಿಷ್ಠಿತ ಇನ್‌ಲ್ಯಾಂಡ್ ಸಂಸ್ಥೆಯ ನೂತನ ಐಶಾರಾಮಿ ವಸತಿ ಸಮುಚ್ಚಯ “ಇನ್‌ಲ್ಯಾಂಡ್ ಎಸ್ಟೋರಿಯ’ ಉದ್ಘಾಟನೆ

Pinterest LinkedIn Tumblr

ಮಂಗಳೂರು, ಜೂನ್.17: ನಿರ್ಮಾಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ‘ಇನ್ ಲ್ಯಾಂಡ್ ಗ್ರೂಪ್’ ಸಂಸ್ಥೆಯು ತನ್ನದೇ ಆದ ಹೆಗ್ಗುರತನ್ನು ಹೊಂದಿದ್ದು, ಈಗಾಗಲೇ ಹಲವಾರು ವಸತಿ ಸಮ್ಮುಚ್ಛಯ ಹಾಗೂ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಪ್ರಸಿದ್ಧಿಯನ್ನು ಹೊಂದಿದೆ. ಇದೀಗ ಮಂಗಳೂರಿನ ಜನತೆಗೆ ತನ್ನ ಮತ್ತೊಂದು ಕೊಡುಗೆ ‘ಇನ್‌ಲ್ಯಾಂಡ್ ಎಸ್ಟೋರಿಯ’ ವನ್ನು ಲೋಕಾರ್ಪಣೆಗೊಳಿಸಿದೆ.

ನಗರದ ವೆಲೆನ್ಸಿಯಾದ ಬಿಷಪ್ ವಿಕ್ಟರ್ ರೋಡ್‌ನಲ್ಲಿ ನೂತನ ಶೈಲಿಯ ವಿಶೇಷ ವಿನ್ಯಾಸದೊಂದಿಗೆ ರೂಪುಗೊಂಡಿರುವ ನೂತನ ವಸತಿ ಸಮುಚ್ಚಯ ‘ಇನ್‌ಲ್ಯಾಂಡ್ ಎಸ್ಟೋರಿಯ’ ವನ್ನು ರವಿವಾರ ಕುನಿಲ್ ಗ್ರೂಪ್ ಅಧ್ಯಕ್ಷ ಡಾ.ಫಕ್ರುದ್ದೀನ್ ಕುನಿಲ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಡಾ.ಫಕ್ರುದ್ದೀನ್ ಕುನಿಲ್ ಅವರು ‘ಇನ್‌ಲ್ಯಾಂಡ್ ಎಸ್ಟೋರಿಯ’ಅತ್ಯಂತ ಸುಂದರವಾದ ವಸತಿ ಸಮುಚ್ಚಯವಾಗಿದೆ. ಮಂಗಳೂರಿನ ಸೌಂದರ್ಯವನ್ನು ಈ ಕಟ್ಟಡದ ವಿನ್ಯಾಸ ಹೆಚ್ಚಿಸಿದೆ. ‘ಇನ್‌ಲ್ಯಾಂಡ್ ಸಮೂಹ ಸಂಸ್ಥೆಯ ಅಧ್ಯಕ್ಷ ಸಿರಾಜ್ ಅಹ್ಮದ್ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸಲಿದೆ ಎಂದು ಶುಭಾಹಾರೈಸಿದರು.

ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಇನ್‌ಲ್ಯಾಂಡ್ ಗ್ರೂಪ್‌ನ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ಅವರು, ‘ಇದು ನಮ್ಮ ಸಂಸ್ಥೆಯ 42ನೆ ಯೋಜನೆಯಾಗಿದೆ. ಈ ವಸತಿ ಸಮುಚ್ಚಯದಲ್ಲಿ ಜನರ ಬದುಕಿಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇಲ್ಲಿನ 35 ಫ್ಲಾಟ್‌ಗಳನ್ನೂ ಕೂಡಾ ಗ್ರಾಹಕರು ತಮ್ಮದಾಗಿಸಿಕೊಂಡಿದ್ದಾರೆ. ಗ್ರಾಹಕರನ್ನು ಸಂತೃಪ್ತಿಗೊಳಿಸುವುದು ನಮ್ಮ ಉದ್ದೇಶವಾಗಿದ್ದು, ಸುಂದರವಾರ ಮನೆ ಕಟ್ಟಿಕೊಳ್ಳಬೇಕು ಎಂಬ ಜನರ ಕನಸನ್ನು ನನಸು ಮಾಡುವಲ್ಲಿ ನಾವು ಕೂಡ ಗ್ರಾಹಕರೊಂದಿಗೆ ಕೈಜೋಡಿಸುತ್ತಿದ್ದೇವೆ ಎಂದು ಹೇಳಿದರು.

ಇನ್‌ಲ್ಯಾಂಡ್ ಸಂಸ್ಥೆಯು ದುಬೈಯಲ್ಲಿ ತನ್ನ ಮಾರ್ಕೆಟಿಂಗ್ ಕಚೇರಿಯನ್ನು ಕೂಡಾ ತೆರೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ. ಅಲ್ಲದೆ ಗಲ್ಫ್ ಎನ್‌ಆರ್‌ಐ ಹೂಡಿಕೆದಾರರ ಅಗತ್ಯಗಳನ್ನು ಪೂರೈಸುತ್ತಿದೆ. ವಿದೇಶದಲ್ಲಿ ನೆಲೆಸಿರುವ ಮಂಗಳೂರಿಗರು ಸಂಸ್ಥೆಯ ಈ ಕ್ರಮವನ್ನು ಮುಕ್ತವಾಗಿ ಸ್ವಾಗತಿಸಿದ್ದಾರೆ. ಇದಲ್ಲದೆ ಇನ್‌ಲ್ಯಾಂಡ್ ಸಂಸ್ಥೆಯು ಭವಿಷ್ಯದಲ್ಲಿ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ತನ್ನ ಹೊಸ ಯೋಜನೆಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು ಸಿರಾಜ್ ಅಹ್ಮದ್ ತಿಳಿಸಿದರು.

ಈ ಸಂಸ್ಥೆಯು ನಿರ್ಮಾಣ ಕ್ಷೇತ್ರದಲ್ಲಿ ನುರಿತ ತಜ್ಞರ ತಂಡವನ್ನು ಹೊಂದಿದ್ದು, ಅತ್ಯುತ್ತಮವಾದ ಮಾದರಿ ಕಟ್ಟಡಗಳನ್ನು ನಿರ್ಮಿಸುತ್ತಿದೆ. ಗ್ರಾಹಕರ ನಿರೀಕ್ಷೆಯ ಸಾಕಾರ , ಸಂತೃಪ್ತಿ ಇನ್ ಲ್ಯಾಂಡ್ ಸಂಸ್ಥೆಯ ಉದ್ದೇಶ ಹಾಗೂ ಧ್ಯೇಯವಾಗಿದೆ. 2017ರಲ್ಲಿ ಪರಿಚಯಿಸಲ್ಪಟ್ಟ ಹೊಸ ಮಸೂದೆಗಳಾದ ಜಿಎಸ್‌ಟಿ ಮತ್ತು ರೇರಾ ಭಾರತದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈ ಮಸೂದೆಗಳು ರಿಯಲ್ ಎಸ್ಟೇಟ್‌ಉದ್ಯಮ ಮತ್ತು ನಿರ್ಮಾಣ ವಲಯಗಳಿಗೆ ಸಂಬಂಧಿಸಿದ ಕಾನೂನು ಹಾಗೂ ನಿಯಮಗಳಲ್ಲಿ ಮಾರ್ಪಾಡನ್ನು ತಂದಿವೆ. ಈ ಮಸೂದೆಗಳಲ್ಲಿ ಉಂಟಾದ ರಚನಾತ್ಮಕ ಬದಲಾವಣೆ ಮತ್ತು ನೀತಿಗಳಲ್ಲಿ ಸುಧಾರಣೆಗಳು ಭಾರತದ ರಿಯಲ್ ಎಸ್ಟೇಟ್ ಉದ್ಯಮ ಮತ್ತು ನಿರ್ಮಾಣ ವಲಯಗಳಿಗೆ ಹೊಸತನದ ಆಯಾಮವನ್ನು ತಂದು ಕೊಟ್ಟಿವೆ. ಅಲ್ಲದೆ ಮನೆ ಖರೀದಿದಾರರಿಗೆ ಪಾರರ್ದಶಕತೆಯ ವ್ಯವಹಾರ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಸಿರಾಜ್ ಅಹ್ಮದ್ ಮಾಹಿತಿ ನೀಡಿದರು.

ಈ ಸಂದರ್ಭ ಇನ್‌ಲ್ಯಾಂಡ್ ಗ್ರೂಪ್‌ನ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್, ಇನ್‌ಲ್ಯಾಂಡ್ ಗ್ರೂಪ್‌ನ ನಿರ್ದೇಶಕರಾದ ಮೆರಾಜ್ ಯೂಸುಫ್, ವಹಾಜ್ ಯೂಸುಫ್ ಉಪಸ್ಥಿತರಿದ್ದರು. ಹಿರಿಯ ಮಾರ್ಕೆಟಿಂಗ್ ಮ್ಯಾನೇಜರ್ ಉಲ್ಲಾಸ್ ಕದ್ರಿ ಸ್ವಾಗತಿಸಿದರು.

ಉದ್ಘಾಟನೆಗೂ ಮುನ್ನ…

ಉದ್ಘಾಟನೆಗೂ ಮುನ್ನ ಬೆಳಿಗ್ಗೆ ಸರ್ವಧರ್ಮ ಸಂಪ್ರದಾಯದಂತೆ ಧಾರ್ಮಿಕ ಗುರುಗಳಿಂದ ಪೂಜೆ, ದುವಾ, ಪ್ರಾರ್ಥನೆ ನೆರವೇರಿತು.

ನಗರದ ಶರಾವು ಶ್ರೀ ಗಣಪತಿ ದೇವಾಸ್ಥಾನದ ಸಮೀಪವಿರುವ ಶ್ರೀ ರಾಧಾಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ಗಿರಿಧರ್ ಭಟ್ ಪೂಜೆಗೈದು ಧಾರ್ಮಿಕ ವಿಧಿ ವಿಧಾನವನ್ನು ನೆರವೇರಿಸಿದರು.ಮುಸ್ಲಿಂ ಧರ್ಮಗುರು ರಿಯಾಝ್ ಮದನಿಯವರು ದು:ವಾಗೈದರು. ಕ್ರೈಸ್ತ ಧರ್ಮಗುರು ಫಾ.ವಲೇರಿಯನ್ ಡಿಸೋಜ ಅವರು ಪ್ರಾರ್ಥಿಸಿದರು.

‘ಇನ್‌ಲ್ಯಾಂಡ್ ಎಸ್ಟೋರಿಯ’ ಬಗ್ಗೆ ಒಂದಿಷ್ಟು..

‘ಇನ್‌ಲ್ಯಾಂಡ್ ಎಸ್ಟೋರಿಯ’ ಆಕರ್ಷಕ ವಿನ್ಯಾಸ, ಉತ್ತಮ ಗುಣಮಟ್ಟ ಹಾಗೂ ಆಧುನಿಕ ಎಲ್ಲಾ ಸೌಲಭ್ಯಗಳನ್ನು ಹೊಂದಿವೆ. ಐದು ಅಂತಸ್ತುಗಳ ಈ ಸಮುಚ್ಛಯದಲ್ಲಿ 2 ಬಿಎಚ್‌ಕೆ, 3 ಬಿಎಚ್‌ಕೆಗಳ 35 ಫ್ಲಾಟ್‌ಗಳಿವೆ. ವಿಶಾಲವಾದ ಲಾಬಿ, ಸಂದರ್ಶಕರ ಲಾಂಜ್, ಇಂಟರ್‌ಕಾಮ್ ವ್ಯವಸ್ಥೆ, ಜಿಮ್ನೇಶಿಯಂ, ಸಿಸಿಟಿವಿ, ಜನರೇಟರ್ ಬ್ಯಾಕ್‌ಅಪ್, ಡಬಲ್ ಎಲಿವೇಟರ್ ಹಾಗೂ ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ ವ್ಯವಸ್ಥೆಯನ್ನು ಕೂಡ ಅಳವಡಿಸಲಾಗಿದೆ. ಅಲ್ಲದೆ ನಿತ್ಯ ಜೀವನಕ್ಕೆ ಅತ್ಯಗತ್ಯವಿರುವ ಮಾರುಕಟ್ಟೆ, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳು, ಮನೋರಂಜನಾ ಕೇಂದ್ರಗಳು, ಆಸ್ಪತ್ರೆಗಳು ಈ ವಸತಿ ಸಮುಚ್ಚಯದ ಅನತಿ ದೂರದಲ್ಲಿದ್ದು, ಇದು ವಸತಿ ಸಮುಚ್ಚಯದ ಹಿರಿಮೆಯನ್ನು ಹೆಚ್ಚಿಸಿವೆ.

ಸಂಸ್ಥೆಯ ಮುಂದಿನ ಯೋಜನೆಗಳು :

ಇನ್‌ಲ್ಯಾಂಡ್ ಗ್ರೂಪ್ ಮಂಗಳೂರಿನ ಕೂಳೂರು-ಕಾವೂರು ರಸ್ತೆಯಲ್ಲಿ ಇನ್‌ಲ್ಯಾಂಡ್ ಸನ್‌ಲೈಟ್-ಮೂನ್‌ಲೈಟ್, ಪಿಂಟೋಸ್ ಲೇನ್‌ನಲ್ಲಿ ಇನ್‌ಲ್ಯಾಂಡ್ ಅಪಿರಾನ್ ಮತ್ತು ಪುತ್ತೂರಿನಲ್ಲಿ ಇನ್‌ಲ್ಯಾಂಡ್ ಮಯೂರದ ನಿರ್ಮಾಣ ಕಾರ್ಯಭರದಿಂದ ಸಾಗುತ್ತಿದೆ. ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನಲ್ಲಿ ಇನ್‌ಲ್ಯಾಂಡ್ ಎಡಿಲಾನ್‌ನ ಕಾಮಗಾರಿ ಭರದಿಂದ ಸಾಗಿದ್ದು, ಕೆಲವೇ ತಿಂಗಳುಗಳಲ್ಲಿ ಲೋರ್ಕಾಪಣೆಗೊಳ್ಳಲಿದೆ.

ಈ ಸಂಸ್ಥೆಯು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಈಗಾಗಲೇ 40ಕ್ಕಿಂತಲೂ ಅಧಿಕ ವಸತಿ ಹಾಗೂ ವಾಣಿಜ್ಯ ಸಂರ್ಕೀಣಗಳನ್ನು ಯಶಸ್ವಿಯಾಗಿ ನಿರ್ಮಿಸಿದೆ. ಅಲ್ಲದೆ ಮಂಗಳೂರಿನ ಕದ್ರಿ ಕಂಬಳದಲ್ಲಿ ‘ಇನ್‌ಲ್ಯಾಂಡ್ ಎಂಬರ್’ ಎಂಬ ನೂತನ ವಸತಿ ಸಮುಚ್ಚಯಕ್ಕೆ ಶೀಘ್ರ ಶಿಲಾನ್ಯಾಸ ನೆರವೇರಲಿದೆ.

ಹೆಚ್ಚಿನ ಮಾಹಿತಿಗಾಗಿ www.inland builders.net ಅಥವಾ ಮೊ.ಸಂ: 9972089099 ಅನ್ನು ಸಂಪರ್ಕಿಸಬಹುದು ಎಂದು ಇನ್‌ಲ್ಯಾಂಡ್ ಗ್ರೂಪ್‌ನ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ತಿಳಿಸಿದ್ದಾರೆ.

Corporate Office – Mangalore

IN-LAND® INFRASTRUCTURE DEVELOPERS PVT LTD
IN-LAND BUILDERS®
3rd Floor, IN-LAND ORNATE,
Navbharath Circle, Kodialbail,
Mangalore – 575003.
Karnataka, India

Tel: +91 824 2496110 / 2492180 / 2491795
Fax: +91 824 2496291
Email: info@inlandbuilders.net
Mobile: +91 9972089099

Registered Office- Bangalore

IN-LAND® INFRASTRUCTURE DEVELOPERS PVT LTD
IN-LAND BUILDERS®
“Abhilasha Arcade”, #495
3rd floor, CBI Road
R. T. Nagar, Bangalore-560032.

Telefax: +91 80 23545277
Email: mktg.blr@inlandbuilders.net
Mobile: +91 9880145145

FOR BOOKINGS IN DUBAI

Inland General Trading LLC
304-1, Zabeel Business Centre
Behind Karama Post Office
Karama, Dubai, UAE, P.O Box-28452.
Email: info@inlandtrading.ae
Mobile: +97143955659 / +971563748091

IN-LAND INFRASTRUCTURE DEVELOPERS PVT. LTD

“Inland ornate, 3rd floor, Navabharath Circle, Mangaluru- 575003.

Contact: +91824 2496110, +91 9880138015, +919972014055
E-mail: info@inlandbuilders.net

Comments are closed.