ರಾಷ್ಟ್ರೀಯ

ಯೋಧ ಔರಂಗಜೇಬ ಹತ್ಯೆಗೂ ಮುನ್ನ ಸೇನಾ ಮಾಹಿತಿ ಪಡೆದ ಉಗ್ರರು… ವಿಡಿಯೋ ವೈರಲ್

Pinterest LinkedIn Tumblr

ಶ್ರೀನಗರ: ಉಗ್ರರಿಂದ ಅಪಹರಣಕ್ಕೀಡಾಗಿ ಸಾವನ್ನಪ್ಪಿದ ಭಾರತೀಯ ಸೇನೆಯ 44 ರಾಷ್ಟ್ರೀಯ ರೈಫಲ್ಸ್‌ನ ರೈಫಲ್‌ಮನ್‌ ಯೋಧ ಔರಂಗಜೇಬನ ಹತ್ಯೆಗೂ ಮುನ್ನ ಉಗ್ರರು ಆತನಿಂದ ಸೇನಾಪಡೆಯ ಮಾಹಿತಿ ಪಡೆದಿದರು ಎಂದು ಹೇಳಲಾಗುತ್ತಿದೆ.

ಯೋಧ ಔರಂದಜೇಬನನ್ನು ಅಪಹರಿಸಿದ್ದ ಉಗ್ರರು ಆತನ ಸಾವಿಗೂ ಮುನ್ನ ಮಾಡಿರುವ ವಿಡಿಯೋದಲ್ಲಿ ಆತ ಮಾಡಿದ್ದ ಎನ್ ಕೌಂಟರ್ ಗಳು ಮತ್ತು ಇತರೆ ಮಾಹಿತಿಗಳ ಕುರಿತು ಮಾಹಿತಿ ಪಡೆದಿದ್ದಾರೆ. ಸದ್ಯಕ್ಕೆ 1.15 ನಿಮಿಷ ಇರುವ ವಿಡಿಯೋ ಬಿಡುಗಡೆಯಾಗಿದ್ದು, ಇದೀಗ ಈ ವಿಡಿಯೋ ವೈರಲ್‌ ಆಗಿದೆ.

ಯೋಧನ ಹತ್ಯೆಗೂ ಮುನ್ನ ಮಾಡಿರುವ ವಿಡಿಯೋ ಇದಾಗಿದ್ದು, ನೀಲಿ ಜೀನ್ಸ್‌ ಮತ್ತು ಕಪ್ಪು ಟೀಶರ್ಟ್‌ ತೊಟ್ಟಿರುವ ಯೋಧನನ್ನು ಶಂಕಿತ ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರರು ಸೇನೆಯಲ್ಲಿ ಆತನ ಪಾತ್ರ, ಪೋಸ್ಟಿಂಗ್‌ ಮತ್ತು ಎನ್‌ಕೌಂಟರ್‌ ಕಾರ್ಯಾಚರಣೆ ಕುರಿತಂತೆ ಮಾಹಿತಿ ಕೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರವಷ್ಟೇ ಯೋಧ ಔರಂಗಜೇಬ್​ ಈದ್‌ ಅಂಗವಾಗಿ ರಜೆ ಮೇಲೆ ಮನೆಗೆ ತೆರಳುತ್ತಿದ್ದಾಗ ಕಲಾಂಪೊರ ಬಳಿಯಿಂದ ಉಗ್ರರು ಅಪಹರಿಸಿದ್ದರು. ಸೇನಾಧಿಕಾರಿಯೊಬ್ಬರು ಕಾರೊಂದನ್ನು ಅಡ್ಡಹಾಕಿ ಯೋಧ ಔರಂಗಜೇಬನನ್ನು ಶೋಪಿಯಾನಕ್ಕೆ ಡ್ರಾಪ್‌ ಮಾಡುವಂತೆ ಡ್ರೈವರ್‌ನನ್ನು ಕೇಳಿಕೊಂಡಿದ್ದಾರೆ. ಕಾರಿನಲ್ಲಿ ಹೊರಟು ಕಲಾಂಪೊರ ತಲುಪುತ್ತಿದ್ದಂತೆಯೇ ಉಗ್ರರು ಕಾರನ್ನು ಅಡ್ಡಗಟ್ಟಿ ಔರಂಗಜೇಬನನ್ನು ಅಪಹರಿಸಿದ್ದರು. ಬಳಿಕ ಅಲ್ಲಿಂದ 10 ಕಿ.ಮೀ. ದೂರದಲ್ಲಿ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಶೂಟ್‌ ಮಾಡಿದ ರೀತಿಯಲ್ಲಿ ಯೋಧನ ಮೃತದೇಹ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಯೋಧನ ಹತ್ಯೆಗೂ ಮುನ್ನ ಆತನ ಹೇಳಿಕೆಯ ವಿಡಿಯೋ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋವನ್ನು ಯೂತ್ ಕಾಂಗ್ರೆಸ್ ಎಂಬ ಟ್ವಿಟರ್ ಖಾತೆ ಶೇರ್ ಮಾಡಿದೆ.

ಯೋಧ ಔರಂಗಜೇಬನ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರು ಪೂಂಚ್‌ನಲ್ಲಿ ನೆರವೇರಿಸಲಾಯಿತು.

Comments are closed.