ಹೌದು ನೀವು ಯಾವಾಗ ಹೇಗೆ ಇರುತ್ತೀರಾ ಅನ್ನೋದು ಯಾರಿಗೂ ಕೂಡ ಗೊತ್ತಿರುವುದಿಲ್ಲ ನೀವು ಅನಾರೋಗ್ಯಕ್ಕೆ ತುತ್ತಾದಾಗ ಈ ಉಪಯುಕ್ತ ಮಾಹಿತಿ ನಿಮ್ಮ ಸಹಾಯಕ್ಕಾಗುವುದು.
ಪೆಟ್ಟು ಬಿದ್ದ ಜಗದಲ್ಲಿ ಅಥವಾ ನೋವಿರುವ ಜಗದಲ್ಲಿ ಊತ ಉಂಟಾಗಿದ್ದರೆ ಶ್ರೀಗಂಧದ ಚಕ್ಕೆಯನ್ನು ನೀರಿನಲ್ಲಿ ತೇದು ಗಂಧ ತೆಗೆದು ಊತವಿರುವ ಭಾಗಕ್ಕೆ ಲೇಪಿಸುವುದರಿಂದ ಊತ ಇಳಿಯುತ್ತದೆ.
ನೆಲ್ಲಿ ಕಾಯಿಯನ್ನು ಜಜ್ಜಿ ರಸ ತೆಗೆದು ಅದನ್ನು ದಿನಾಗಲು ಅಂಗೈ, ಅಂಗಾಲಿಗೆ ಲೇಪಿಸಿದರೆ ಬೆವರುವದು ನಿಲ್ಲುತ್ತದೆ.
ಪ್ರತಿದಿನವು ತಣ್ಣಿರು ಸ್ನಾನ ಮಾಡುತ್ತಿದ್ದರೆ ಮೈಮೇಲೆ ಬೆವರು ಗುಳ್ಳೆಗಳು ಏಳುವದಿಲ್ಲ, ಹಾಗೂ ಚರ್ಮ ಸಂಬಂಧಿ ಕಾಯಿಲೆಗಳು ಸಹ ಸಂಭವಿಸುವುದಿಲ್ಲ.
ಆಲೂಗಡ್ಡೆಯನ್ನು ನಿಂಬೆ ರಸದಲ್ಲಿ ನುಣ್ಣಗೆ ಅರೆದು ಚರ್ಮದ ಮೇಲೆ ಲೇಪಿಸಿದರೆ ತುರಿಕೆ, ಕಜ್ಜಿ, ಅಲರ್ಜಿಗಳು ನಿವಾರಣೆಯಗುತ್ತವೆ.
ನುಣ್ಣಗೆ ಅರೆದಿರುವ ಅರಿಶಿನದ ಪುಡಿಯನ್ನು ಜೇನುತುಪ್ಪದಲ್ಲಿ ಸೇರಿಸಿ ಲೇಪಿಸಿದರೆ ಚರ್ಮರೋಗ ನಿವಾರಿಸಬಹುದು.
ಜ್ವರ ಆರಂಭವಾದ ಕೂಡಲೇ, ೬೦ ಮಿ.ಲೀ ನೀರಿಗೆ ಒಂದು ನಿಂಬೆಹಣ್ಣಿನ ರಸ, ಮೂರು ಚಮಚ ಮೂಸಂಬಿ ರಸ ಬೆರೆಸಿ ನಿತ್ಯ ಕುಡಿದರೆ ಜ್ವರ ಬೇಗ ನಿಯಂತ್ರಣಕ್ಕೆ ಬರುತ್ತದೆ.
ಬಿಳಿ ಕೂದಲನ್ನ ತಡೆಗಟ್ಟಲು ನಿಂಬೆಹಣ್ಣಿನ ರಸವನ್ನು ಕೊಬ್ಬರಿ ಎಣ್ಣೆದೂಂದಿಗೆ ಮಿಶ್ರಮಾಡಿ ಕೂದಲಿಗೆ ಹಚ್ಚಿದರೆ ಕೂದಲು ಬಿಳುಪಾಗುವುದನ್ನ ತಡೆಯ ಬಹುದು.
ಹೊಟ್ಟೆನೋವಿಗೆ ಹೆಚ್ಚಾಗಿದ್ದರೆ ಬೆಲ್ಲದಲ್ಲಿ ಕಾಳುಮೆಣಸಿನಪುಡಿ ಬೆರೆಸಿ ಸೇವಿಸಿದರೆ ನೋವು ಬೇಗನೆ ಶಮನವಾಗುತ್ತದೆ.
ಒಣಕೆಮ್ಮು, ಅಥವಾ ಗಂಟಲಿಗೆ ಸಂಬಂದಿಸಿದ ರೋಗಗಳಿಗೆ ಬೆಲ್ಲದಲ್ಲಿ ಅರಿಶಿಣಪುಡಿ ಸೇರಿಸಿ ಸೇವಿಸಿದರೆ ನಿವಾರಣೆಯಾಗಿ
ಒಂದು ಚಮಚ ಕಡಲೇಕಾಯಿ ಎಣ್ಣೆಗೆ ಅಷ್ಟೇ ಪ್ರಮಾಣದ ನಿಂಬೆ ರಸ ಬೆರೆಸಿ ರಾತ್ರಿ ಮುಖಕ್ಕೆ ಲೇಪಿಸುವುದರಿಂದ ಮುಖದ ಕಾಂತಿ ಹೆಚ್ಚುವುದರ ಜೊತೆಗೆ ತ್ವಚೆ ಮೃದುವಾಗುತ್ತದೆ.
Comments are closed.