ಕರಾವಳಿ

ಈ ಹಣ್ಣಿನಲ್ಲಿರುವ ಔಷಧೀಯಗುಣಗಳ ಬಗ್ಗೆ ನೀವೂ ಬಲ್ಲಿರಾ..!

Pinterest LinkedIn Tumblr
ಶರೀರವನ್ನು ತಂಪುಗೊಳಿಸಲು ಮತ್ತು ಬಾಯಿಯ ದುರ್ಗಂಧವನ್ನು ನಿವಾರಣೆ ಮಾಡಲು ಬೇಲದ ಹಣ್ಣಿನ ಪಾನಕವನ್ನು ಸೇವಿಸಬೇಕು
* ಬೇಲದ ಹಣ್ಣಿಗೆ ಸಮಪ್ರಮಾಣ ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ಕಫ ಕಡಿಮೆಯಾಗುತ್ತದೆ.
* ಆಮಶಂಕೆ ಭೇದಿಯಾಗುತ್ತಿದ್ದರೆ ಬೀಜಗಳನ್ನು ತೆಗೆದ ಬೇಲದ ಕಾಯಿಯ ತಿರುಳನ್ನು ನುಣ್ಣಗೆ ರುಬ್ಬಿ ಸೇವಿಸಿದರೆ ಭೇದಿ ನಿಲ್ಲುತ್ತದೆ.
* ಬೇಲದ ಎಳೆಗಳ ರಸಕ್ಕೆ ಸೈನದವ ಉಪ್ಪು ಮತ್ತು ಬಿಸಿ ನೀರನ್ನು ಸೇರಿಸಿ ಸೇವಿಸಿದರೆ ಅಸ್ತಮಾ ಕಡಿಮೆಯಾಗುತ್ತದೆ.
* ಬಿಕ್ಕಳಿಕೆ ಸಮಸ್ಯೆಯಿಂದ ಬಳಲುತ್ತಿದ್ದರೆ ಬೇಲದ ಹಣ್ಣಿನ ರಸ ಮತ್ತು ನೆಲ್ಲಿಕಾಯು ರಸ ಸೇವಿಸಿ ದಿನಕ್ಕೆ ೨ ಚಮಚ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.
* ಬೇಲದ ಹಣ್ಣಿನ ರಸಕ್ಕೆ ಒಣಶುಂಠಿ ಪುಡಿ ಮತ್ತು ಬೆಲ್ಲ ಸೇರಿಸಿ ಸೇವಿಸಿದರೆ ತಾಯಿಯ ಎದೆಹಾಲು ವೃದ್ಧಿಸುತ್ತದೆ.

Comments are closed.