ಆರೋಗ್ಯ

ಸೆಕ್ಸ್’ನಿಂದ ಆರೋಗ್ಯಕ್ಕಾಗುವ ಲಾಭವನ್ನು ನೀವು ತಿಳಿದುಕೊಳ್ಳಲೇಬೇಕು…!

Pinterest LinkedIn Tumblr

ಸೆಕ್ಸ್ ಎಂಬ ಪದವನ್ನು ಕೇಳಿದ ಕೂಡಲೇ ಎಲ್ಲರೂ ಒಮ್ಮೆಗೆ ರೋಮಾಂಚನಗೊಳ್ಳುತ್ತಾರೆ. ಇನ್ನು ಕೆಲವರು ನಾಚಿಕೆ ಪಡುತ್ತಾರೆ. ಸೆಕ್ಸ್ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಆದರೆ ಸೆಕ್ಸ್’ನಿಂದಾಗಿ ಆರೋಗ್ಯಕ್ಕಾಗುವ ಲಾಭವನ್ನು ಯಾರು ಅರಿಯಲು ಹೋಗುವುದಿಲ್ಲ.

ಹೆಣ್ಣು ಮತ್ತು ಗಂಡು ಮಿಲನದಲ್ಲಿ ತೊಡಗಿಕೊಳ್ಳುವ ಮೂಲಕ ಪರೋಕ್ಷವಾಗಿ ದೈಹಿಕ ವ್ಯಾಯಾಮದಲ್ಲಿ ತೊಡಗಿಕೊಂಡಿರುತ್ತಾರೆ. ಮಿಲನ ಪ್ರಕ್ರಿಯೆ ಒಂದು ವ್ಯಾಯಾಮದ ಆಯಾಮ. ಸಮಾಗಮ ಒಂದು ಆರೋಗ್ಯದ ಮೂಲ. ನಿತ್ಯ ಮಿಲನದಲ್ಲಿ ತೊಡಗುವುದರಿಂದ ನಿಮ್ಮ ಹಾರ್ಟ್​ರೇಟ್​ ಉತ್ತಮಗೊಳ್ಳುತ್ತದೆ. ಇದೊಂದು ರೀತಿ  ಜೋರಾಗಿ ವಾಕಿಂಗ್​ ಮಾಡಿದಂತಹ ವ್ಯಾಯಾಮವನ್ನು ದೇಹಕ್ಕೆ ನೀಡುತ್ತದೆ.

ವಾರದಲ್ಲಿ ಕನಿಷ್ಠ ಎರಡು ಬಾರಿ ಮಿಲನಮಹೋತ್ಸವದಲ್ಲಿ ಪಾಲ್ಗೊಳ್ಳುವುದರಿಂದ ಮಹಿಳೆಯರು ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು. ತಿಂಗಳಲ್ಲಿ ಒಂದು ಬಾರಿ ಕೂಡವ ಬದಲು ಜೋಡಿಗಳು ಕನಿಷ್ಠ ವಾರದಲ್ಲಿ ಎರಡು ಬಾರಿ ಒಂದಾಗುವುದರಿಂದ ಉಪಯೋಗಗಳು ಬಹಳ.

ಕಾಮಾಸಕ್ತಿ ಹೆಚ್ಚು ಹೆಚ್ಚು ಇದ್ದಷ್ಟು ನಿಮ್ಮ ಆರೋಗ್ಯದಲ್ಲಿ ವೃದ್ಧಿ ಕಾಣಿಸಿಕೊಳ್ಳುತ್ತೆ. ನೀವು ನಿಮ್ಮ ಸಂಗಾತಿಯ ಬಾಹುಬಂಧಗಳಲ್ಲಿ ಕಳೆದು ಹೋದಷ್ಟು ನಿಮ್ಮ ಆಯುಷ್ಯ ವೃದ್ಧಿಸಲಿದೆ ಎಂದು ಸಂಶೋಧನೆಯ ಮೂಲಕ ತಿಳಿದು ಬಂದಿದೆ

ಸಂಗಾತಿಗಳು ಹೆಚ್ಚು ಹಾಸಿಗೆಯಲ್ಲಿ ದೈಹಿಕವಾಗಿ ಸಂಗಮಗೊಂಡು ಸಂಭ್ರಮಿಸುವುದರಿಂದ ಹಲವು ಉಪಯೋಗಗಳಿವೆ. ನೀವು ಸದಾ ಖುಷಿಯಾಗಿರಬೇಕೆಂದರೇ ವಾರದಲ್ಲಿ ಕನಿಷ್ಟವೆಂದರೂ ಒಂದು ಬಾರಿ ನೀವು ಸಂಗಾತಿಯೊಂದಿಗೆ ಸುಖಿಸಲೇ ಬೇಕು. ಇದರಿಂದ ನೀವು ಸದಾ ಉಲ್ಲಾಸದಿಂದಿರಲು ಸಾಧ್ಯವಾಗುತ್ತದೆ ಎಂದು ಅಧ್ಯಯನದ ಮೂಲಕ ತಿಳಿದು ಬಂದಿದೆ.

ಸಂಗಾತಿಯನ್ನು ಖುಷಿ ಪಡಿಸಲು.. ಬಾಂಧ್ಯವವನ್ನು ಗಟ್ಟಿಗೊಳಿಸಲು ಗಂಡು ಹೆಣ್ಣು ಇಬ್ಬರು ಒಂದಿಲ್ಲೊಂದು ಹೊಸ ಉಪಾಯ ಮಾಡುತ್ತಾರೆ. ಆದ್ರೆ ನೀವು ಆಗಾಗ ಸೆಕ್ಸ್​ನಲ್ಲಿ ಪಾಲ್ಗೊಳ್ಳುವುದರಿಂದ ಬಾಂಧವ್ಯದಲ್ಲಿ ಹೊಸ ಗಟ್ಟಿತನ ಬೆಳೆಯುತ್ತೆ. ಜೋಡಿಗಳು ಸೆಕ್ಸ್​ನಲ್ಲಿ ಪಾಲ್ಗೊಂಡಾಗ ಹಾರ್ಮೊನ್​ಗಳು ಆಕ್ಸಿಟಾಕಿನ್ಸ್​ ಎಂಬ ರಾಸಾಯನಿಕ ವಸ್ತುವನ್ನು ಬಿಡುಗಡೆ ಮಾಡುತ್ತವೆ. ಇದು ನಿಮ್ಮ ಬಾಂಧವ್ಯವನ್ನು ಹೊಸ ಹಂತಕ್ಕೆ ತೆಗೆದುಕೊಂಡು ಹೋಗಲು ಬಲಿಷ್ಠಗೊಳ್ಳಲು ಸಹಾಯ ಮಾಡುತ್ತೆ.

ಹೆಚ್ಚು ಹೆಚ್ಚು ಕಾಮಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ನೀವು ನಿಮ್ಮ ದೇಹ ಸೌಂದರ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ತೆಳ್ಳಗೆ ಇರುವವರು ಅತಿ ಹೆಚ್ಚು ಮಿಲನದಲ್ಲಿ ತೊಡಗುವುದರಿಂದ ನಿಮ್ಮ ದೇಹ ಸೌಂದರ್ಯವನ್ನು ಉತ್ತಮಗೊಳಿಸಲು ಸಾಧ್ಯವಾಗುತ್ತದೆ.

ಲೈಂಗಿಕತೆಯಲ್ಲಿ ತೊಡಗುವುದರಿಮದ ಅಂಗಗಳು ಹೆಣ್ಣು ಮತ್ತು ಗಂಡಿನಲ್ಲಿ ಎಂಡೊರ್ಪಿನ್ಸ್ ಹಾಗೂ ಆಕ್ಸಿಟಾಸಿನ್​ನ್ನ ಬಿಡುಗಡೆಗೊಳಿಸುತ್ತವೆ ಇದು ನಿಮ್ಮ ನಿದ್ರೆಯ ಗುಣಮಟ್ಟವನ್ನು ಉತ್ತಮಗೊಳಿಸಲು ಸಹಾವಾಗುತ್ತದೆ ಅಂತ ವಿಜ್ಞಾನಿಗಳು ಹೇಳುತ್ತಾರೆ.

ಪುರುಷರು ಹೆಚ್ಚು ಹೆಚ್ಚು ರತಿಕ್ರೀಡೆಯಲ್ಲಿ ತೊಡಗುವುದರಿಂದ ಕ್ಯಾನ್ಸರ್​ನಂತಹ ಮಾರಕ ಕಾಯಿಲೆಗಳಿಂದ ದೂರವಿರಬಹುದು ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್​ ಕೂಡ ಹೆಚ್ಚು ಹೆಚ್ಚು ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗುವುದರಿಂದ ಸ್ತನ ಕ್ಯಾನ್ಸರ್​ನ್ನ ದೂರ ಇಡಬಹುದು.

ಅಂತವರು ಮಕ್ಕಳು ಬೇಕು ಎಂದು ನಿರ್ಧರಿಸಿದಾಗ ಹೆಚ್ಚು ಹೆಚ್ಚು ಕೂಡಿಕೊಳ್ಳಬೇಕು. ಸರಿಯಾದ ಸಮಯದಲ್ಲಿ ಸರಿಯಾದ ರೀತಿ ದೈಹಿಕವಾಗಿ ಸೇರಿದಾಗ ಮಕ್ಕಳು ಆಗುತ್ತವೆ. ಇನ್ನು ಅತಿ ಹೆಚ್ಚು ಲೈಂಗಿಕ ಕ್ರೀಡೆಯಲ್ಲಿ ತೊಡಗುವುದರಿಂದ ಪುರುಷರ ವಿರ್ಯಾಣುಗಳ ಗುಣಮಟ್ಟವೂ ಸುಧಾರಿಸುತ್ತದೆ.

ಯಾವ ಜೋಡಿಗಳು ಉತ್ತಮ ಲೈಂಗಿಕ ಜೀವನ ಹೊಂದುತ್ತಾರೋ ಅವರು ಉತ್ತಮ ಗುಣಮಟ್ಟದ ಜೀವನ ನಡೆಸಲು ಸಾಧ್ಯ. ಕೇವಲ ಪ್ರಸಕ್ತ ಬದುಕಲ್ಲದೇ, ಭವಿಷ್ಯದ ಜೀವನಕ್ಕೂ ಉತ್ತಮ ಸೆಕ್ಸ್​ ಲೈಫ್​ ಅವಶ್ಯ. ವೃದ್ಧಾಪ್ಯದಲ್ಲಿ ನೀವು ಸಂತಸದಿಂದರಲು ಇಂದಿನ ನಿಮ್ಮ ವೈವಾಹಿಕ ಜೀವನ ರಸಮಯವಾಗಿರಬೇಕು.

ಒಟ್ಟಿನಲ್ಲಿ ಜೀವನದ ಒಂದು ಭಾಗವಾಗಿರುವ ಲೈಂಗಿಕ ಜೀವನ ನಿಮ್ಮ ಆರೋಗ್ಯದ ಗಣಿ. ಉತ್ತಮ ಬಾಳ ಪಯಣದಲ್ಲಿ ಉತ್ತಮ ಸೆಕ್ಸ್​ ಜೀವನ ಹೊಂದಿದಲ್ಲಿ​ ಬದುಕು ಹೊಸ ದಿಕ್ಕಿನಲ್ಲಿ ಸಾಗುತ್ತದೆ ಎಂಬುದು ಸಂಶೋಧಕರ ಹಾಗೂ ಅಧ್ಯಯನಗಳ ವಾದ. ಆರೋಗ್ಯ ವೃದ್ಧಿಗಾಗಿ ನಿಮ್ಮ ರಸರಾತ್ರಿಗಳು, ರಸನಿಮಿಷಗಳು ಅಕ್ಷಯವಾಗಲಿ.

Comments are closed.