ರಾಷ್ಟ್ರೀಯ

ಭಾವಚಿತ್ರ, ಮೂರ್ತಿಗಳಿಗೆ ಮಹತ್ವ ನೀಡದ ಮುಸ್ಲಿಮರಿಗೆ ಜಿನ್ನಾ ಭಾವಚಿತ್ರದ ಚಿಂತೆ ಏಕೆ ?: ಬಾಬಾ ರಾಮದೇವ್ ಪ್ರಶ್ನೆ

Pinterest LinkedIn Tumblr

ಬಿಹಾರ್ ಶರೀಫ್: ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಜಿನ್ನಾ ಭಾವಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಯೋಗ ಗುರು ಬಾಬಾ ರಾಮದೇವ, ಭಾವಚಿತ್ರ ಮತ್ತು ಮೂರ್ತಿಗಳಿಗೆ ಮಹತ್ವ ನೀಡದ ಮುಸ್ಲಿಮರಿಗೆ ಜಿನ್ನಾ ಭಾವಚಿತ್ರದ ಚಿಂತೆ ಏಕೆ ಎಂದು ಪ್ರಶ್ನಿಸಿದ್ದಾರೆ.

ನಲಂದಾದಲ್ಲಿ ಯೋಗ ತರಗತಿಯನ್ನು ನಡೆಸಿಕೊಡುತ್ತಿರುವ ಬಾಬಾ ರಾಮದೇವ್ ಅವರಿಗೆ ಅಲಿಘಡ ವಿಶ್ವವಿದ್ಯಾಲಯದಲ್ಲಿ ಜಿನ್ನಾ ಭಾವಚಿತ್ರ ವಿವಾದಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಲಾಯಿತು. ಅದಕ್ಕುತ್ತರಿಸಿದ ಬಾಬಾ ಮುಸ್ಲಿಂಮರಿಗೆ ಭಾವಚಿತ್ರ, ಮೂರ್ತಿಪೂಜೆಯಲ್ಲಿ ನಂಬಿಕೆ ಇಲ್ಲ. ಮತ್ಯಾಕೆ ಅವರು ಪಾಕಿಸ್ತಾನ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಭಾವಚಿತ್ರದ ಬಗ್ಗೆ ತಲೆ ಕೆಡಿಸಿಕೊಂಡಿರುವುದು? ಎಂದು ಕೇಳಿದ್ದಾರೆ.

“ದೇಶದ ಏಕತೆ ಮತ್ತು ಸಮಗ್ರತೆಯನ್ನು ಬೆಂಬಲಿಸುವವರಿಗೆ ಜಿನ್ನಾ ಎಂದಿಗೂ ಆದರ್ಶ ವ್ಯಕ್ತಿಯಾಗುವುದಿಲ್ಲ” ಎಂದು ಅವರು ಪ್ರತಿಪಾದಿಸಿದ್ದಾರೆ.

ಇದೇ ಸಂದರ್ಭದಲ್ಲಿ ಯೋಗಾ ಬಗ್ಗೆ ಮಾತನಾಡಿದ ಅವರು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿರುವ ಯೋಗವನ್ನು ಹಿಂದೂ ಪರ ಅಥವಾ ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ವಿರುದ್ಧ ಎಂದು ವ್ಯಾಖ್ಯಾನಿಸಬಾರದು. ‘ಗಾಯತ್ರಿ’ ಮಂತ್ರ ಹೇಳಲು ಒಪ್ಪದವರು ‘ಅಲ್ಲಾ’ ನಾಮೋಚ್ಚಾರಣೆ ಮಾಡುತ್ತ ಯೋಗಾಭ್ಯಾಸ ಮಾಡಬಹುದು. ಯೋಗದಲ್ಲಿ ಯಾವ ತಂತ್ರ-ಮಂತ್ರವೂ ಇಲ್ಲ ಎಂದಿದ್ದಾರೆ.

Comments are closed.