ಆರೋಗ್ಯ

ಹೇರ್‌ ಕಲರಿಂಗ್‌ ಮಾಡಿಸುವಾಗ ಈ ತಪ್ಪುಗಳು ಆಗದಿರಲಿ

Pinterest LinkedIn Tumblr


ಹೇರ್‌ಕಲರ್‌ ನಿಮ್ಮನ್ನು ಸ್ಟೈಲಿಷ್‌ ಆಗಿ ಕಾಣುವಂತೆ ಮಾಡುತ್ತದೆ. ಆದರೆ ಕಲರಿಂಗ್ ಮಾಡುವಾಗ ಎಡವಟ್ಟು ಮಾಡಿಕೊಂಡರೆ ಲುಕ್‌ ಹಾಳಾಗುವುದರ ಜತೆಗೆ ಕೂದಲಿನ ಆರೋಗ್ಯ ಹಾಳಾಗುವುದು.

ಆದ್ದರಿಂದ ಹೇರ್‌ ಕಲರಿಂಗ್ ಮಾಡುವಾಗ ಈ ತಪ್ಪುಗಳನ್ನು ಮಾಡದಿರಿ:

ಅಧಿಕ ಬ್ಲೀಚ್‌ ಮಾಡುವುದು
ಕೂದಲನ್ನು ಬ್ಲೀಚ್‌ ಮಾಡುವಾಗ ಆ ಬ್ಲೀಚ್‌ನಿಂದ ನಿಮ್ಮ ಕೂದಲು ಹಾಗೂ ತ್ವಚೆಗೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂಬುವುದನ್ನು ಖಚಿತಪಡಿಸಿಕೊಳ್ಳಿ. ಕಲರ್‌ ತೆಗೆಯಲು ಅಧಿಕ ಬ್ಲೀಚ್‌ ಮಾಡುವುದರಿಂದ ಕೂದಲು ತನ್ನ ಶೈನಿ ಕಳೆದುಕೊಳ್ಳುವುದು. ಆದ್ದರಿಂದ ಕೂದಲು ಜೋಪಾನ.

ಕಲರಿಂಗ್‌ ಹೋಗುವ ಮುನ್ನ ಡ್ರೈ ಶ್ಯಾಂಪೂ ಬಳಸಬೇಡಿ
ಕೂದಲನ್ನು ತುಂಬಾ ಡ್ರೈಯಾಗಿಸುವ ಶ್ಯಾಂಪೂ ಬಳಸಿದರೆ ಕೂದಲು ಕಲರ್‌ ಅನ್ನು ಸರಿಯಾಗಿ ಹೀರಿಕೊಳ್ಳದೆ ಕೂದಲ ಲುಕ್‌ ಹಾಳಾಗುವುದು.

ಆಲ್ಕೋಹಾಲ್ ಅಂಶವಿರುವ ಹೇರ್‌ಸ್ಪ್ರೇ ಬಳಸಿ ಹೇರ್‌ ಸೆಟ್ ಮಾಡುವುದು
ಆಲ್ಕೋಹಾಲ್‌ ಅಂಶವಿರುವ ಹೇರ್‌ಸ್ಪ್ರೇ ಕೂದಲನ್ನು ಮತ್ತಷ್ಟು ಡ್ರೈಯಾಗಿಸುತ್ತದೆ. ಅಲ್ಲದೆ ಕಲರಿಂಗ್‌ ಬೇಗನೆ ಫೇಡ್‌ ಆಗುವುದು.

ನಿಮಗೆ ಯಾವ ಕಲರ್‌ ಸೂಕ್ತ ಅನ್ನುವುದು ತಿಳಿದಿರಲಿ
ಓಂಬ್ರೆ, ಬಲಾಜ್‌ ಹಾಗೂ ಸಿಂಗಲ್‌ ಕಲರ್‌ ಹೇರ್ ಕಲರಿಂಗ್‌ನಲ್ಲಿ ನಿಮಗೆ ಯಾವುದು ಆಕರ್ಷಕವಾಗಿ ಕಾಣುವುದು ಎಂದು ಬ್ಯೂಟಿ ಎಕ್ಸ್‌ಪರ್ಟ್‌ ಸಲಹೆ ಪಡೆಯಿರಿ.

Comments are closed.