ಆರೋಗ್ಯ

ವ್ಯಾಯಾಮದ ನಂತರ ಈ ಪ್ರೊಟೀನ್‌ಯುಕ್ತ ಆಹಾರ ಸೇವಿಸಿ

Pinterest LinkedIn Tumblr


ಸದೃಢ ದೇಹಕ್ಕಾಗಿ ವ್ಯಾಯಾಮದಷ್ಟೇ ಮುಖ್ಯ, ವ್ಯಾಯಾಮದ ನಂತರ ನಾವು ತೆಗೆದುಕೊಳ್ಳುವ ಆಹಾರ. ವ್ಯಾಯಾಮ ಮಾಡಿದ ಬಳಿಕ ತುಂಬಾ ಹಸಿವು ಇರುತ್ತದೆ, ಈ ಹಸಿವು ಕಮ್ಮಿ ಮಾಡಲು ಹಾಗೂ ದೇಹದ ಆರೋಗ್ಯ ಹೆಚ್ಚಿಸಲು ಈ ಪ್ರೊಟೀನ್‌ಯುಕ್ತ ಆಹಾರ ಸೇವನೆ ಒಳ್ಳೆಯದು.

ನೀವು ಜಿಮ್‌ನಲ್ಲಿ ಬೆವರಿಳಿಸಿದ ನಂತರ ನಿಮಗೆ ಅವಶ್ಯಕವಾಗಿ ಬೇಕಾದ ಆಹಾರವಿದು:

ಮೊಳಕೆ ಹೆಸರು ಕಾಳು ಚಾಟ್‌: ಒಂದು ಬಟ್ಟಲು ಆರೋಗ್ಯಕರ ಮೊಳಕೆ ಕಾಳುಗಳು, ಅದರೊಂದಿಗೆ ತಾಜಾ ಈರುಳ್ಳಿ, ಟೊಮೆಟೋ, ಸೌತೆಕಾಯಿ ಮತ್ತು ನಿಂಬೆ ರಸ ಹಾಗೂ ಉಪ್ಪು ನಿಮ್ಮ ವ್ಯಾಯಾಮ ಅವಧಿಯ ನಂತರ ಸೇವಿಸುವ ಅತ್ಯುತ್ತಮ ಆಹಾರ. ಮೊಳಕೆ ಕಾಳುಗಳಲ್ಲಿ ಪ್ರೊಟೀನ್‌ ಹೇರಳವಾಗಿರುತ್ತವೆ.

ಬಾದಾಮಿ ಮತ್ತು ಸೋಯಾ ಹಾಲು: ಒಂದು ಮಿಕ್ಸರ್‌ ಜಾರಿನಲ್ಲಿ, ಸಿಪ್ಪೆ ಸುಲಿದ ಬಾದಾಮಿಗಳನ್ನು ತೆಗೆದುಕೊಳ್ಳಿ. ಸೋಯಾ ಹಾಲು, ಜೇನು ಹಾಗೂ ಬಾಳೆಹಣ್ಣನ್ನು ಅದರಲ್ಲಿ ಬೆರೆಸಿ. ಅಗತ್ಯವಿರುವ ವಿಟಮಿನ್‌ಗಳು, ಪ್ರೊಟೀನುಗಳು ಮತ್ತು ಫೈಬರ್‌ಗಳ ಪಾನೀಯ ಪಡೆಯಲು ಹುರಿದ ಬಾದಾಮಿಯ ಚೂರುಗಳೊಂದಿಗೆ ಅಲಂಕರಿಸಿ ಹಾಗೂ ಚೆನ್ನಾಗಿ ಮಿಶ್ರಣ ಮಾಡಿ.

ಹಣ್ಣುಗಳೊಂದಿಗೆ ಯೋಗರ್ಟ್‌: 1 ಕಪ್‌ ಕಡಿಮೆ ಕೊಬ್ಬಿರುವ ಯೋಗರ್ಟ್‌ಗೆ ಬ್ಲೂಬೆರ್ರಿ ಬೆರೆಸಿ ಸೇವಿಸಿ.

ಬಾದಾಮಿ: ಬಾದಾಮಿಯನ್ನು ನೆನೆ ಹಾಕಿ ತಿನ್ನಿ. ಬಾದಾಮಿಯು ವಿಟಮಿನ್‌ ಇ, ಫೈಬರ್‌, ಪ್ರೊಟೀನ್‌ ಹೊಂದಿದೆ.

Comments are closed.