ಆರೋಗ್ಯ

ಹಲವು ರೋಗಗಳಿಗೆ ರಾಮಬಾಣ ಈ ಹಣ್ಣು

Pinterest LinkedIn Tumblr

ಅಂಜೂರ ಮೊರೇಸೀ ಕುಟುಂಬಕ್ಕೆ ಸೇರಿದ ಮರ. ಇದರ ಹಣ್ಣುಗಳನ್ನು ತಿನ್ನಲು ಉಪಯೋಗಿಸುತ್ತಾರೆ. ಫೈಕಸ್ ಕ್ಯಾರಿಕ ಎಂಬುದು ಇದರ ವೈಜ್ಞಾನಿಕ ನಾಮ. ಇದರ ಹಣ್ಣಿನಲ್ಲಿ ಕಬ್ಬಿಣ. ತಾಮ್ರ. ರಂಜಕ. ಸೋಡಿಯಂ. ಮತ್ತು ಎ,ಬಿ,ಸಿ,ಡಿ ವಿಟಮಿನ್‍ಗಳು ಹೇರಳವಾಗಿವೆ.

ಈ ಹಣ್ಣನ್ನು ಸೇವನೆ ಮಾಡಿದರೆ ಯಾವುದೇ ರೋಗಗಳು ಹತ್ತಿರ ಸುಳಿಯುವುದಿಲ್ಲ. ಅದರಲ್ಲೂ ಮಕ್ಕಳು ಇಲ್ಲದವರು ಇದರ ಸೇವನೆ ಮಾಡಿದರೆ ಮಕ್ಕಳಾಗುವ ಸಾಧ್ಯತೆಗಳಿವೇ

1.ಅಂಜೂರದಲ್ಲಿರುವ ಮೆಗ್ನಿಷಿಯಂ, ಮ್ಯಾಂಗನೀಸ್, ಜಿಂಕ್, ಖನಿಜಗಳು ಸಂತಾನ ಸಾಫಲ್ಯತೆಯನ್ನು ಹೆಚ್ಚಿಸುವುದಕ್ಕೆ ಸಹಕರಿಸುತ್ತವೆ.
2.ಅಂಜೂರದಲ್ಲಿ ಹೇರಳವಾಗಿರುವ ಪೊಟಾಷಿಯಂ, ಸೋಡಿಯಂ ರಕ್ತದೊತ್ತಡವನ್ನು ಕಡಿಮೆ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
3.ಅಂಜೂರ ಹಣ್ಣುಗಳನ್ನು ಸೇವನೆ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಒತ್ತಡಗಳು ನಿವಾರಣೆಯಾಗಿ ದೇಹಕ್ಕೆ ಹೊಸ ಚೈತನ್ಯವನ್ನು ಕೊಡುತ್ತದೆ.
4.ಅಂಜೂರದಲ್ಲಿ ಇರುವ ಫೈಬರ್ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
5.ಅಂಜೂರದ ಹಣ್ಣನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಹಣ್ಣು ತಿಂದು ಆ ನೀರು ಕುಡಿದರೆ ಮೂಲವ್ಯಾಧಿ ಸಮಸ್ಯೆ ದೂರ ಆಗುತ್ತದೆ.
6.ಅಂಜೂರದಲ್ಲಿ ನಾರಿನಂಶ ಮತ್ತು ಖನಿಜಾಂಶಗಳು ಹೆಚ್ಚು ಇರುವುದರಿಂದ ಥೈರಾಯ್ಡ್ ಸಮಸ್ಯೆಯಿಂದ ದೂರ ಆಗಬಹುದು.
ಎಲ್ಲರನ್ನು ಕಾಡುವ ಹೈ ಬಿ ಪಿ ಗೆ ಅಂಜೂರ ಹಣ್ಣು ಒಳ್ಳೆಯ ಮೆಡಿಸಿಯಾನ್.
7.ಅಂಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೂಡಿದು ಬಿಸಿ ನೀರು ಕುಡಿದರೆ ಮೊಡವೆಗಳು ನಿವಾರಣೆ ಆಗುತ್ತವೆ.ಮುಖವು ಕಾಂತಿಯುಕ್ತವಾಗುತ್ತದೆ.
8.ಮಹಿಳೆಯರಲ್ಲಿ ಕಾಡುವ ರಕ್ತ ಹೀನತೆ ಸಮಸ್ಯೆಯನ್ನು ದೂರ ಮಾಡುತ್ತದೆ.
9.ಈ ಅಂಜೂರದ ಹಣ್ಣಿನಲ್ಲಿ ಎಷ್ಟೆಲ್ಲ ಲಾಭಗಳಿವೆ ಅಲ್ಲವಾ ನೀವು ಇದನ್ನು ಸೇವಿಸಿ ಲಾಭ ಪಡೆದುಕೊಳ್ಳಿ.

Comments are closed.