ಆರೋಗ್ಯ

ಏಲಕ್ಕಿ ನೀರು ಕುಡಿಯುವುದರ ಪ್ರಯೋಜನ ಬಲ್ಲಿರಾ..?

Pinterest LinkedIn Tumblr

ನಮ್ಮ ಆರೋಗ್ಯ ಬೇರೆಲ್ಲೋ ಇಲ್ಲ… ಅದು ನಮ್ಮ ಅಡುಗೆ ಮನೆಯಲ್ಲೇ ಇರುತ್ತದೆ. ಕೆಲವರ ಆರೋಗ್ಯದ ಬಗ್ಗೆ ತಿಳಿದುಕೊಂಡರೆ ಇದು ನಿಜ ಎನ್ನದೆ ವಿಧಿಯಿಲ್ಲ. ಏಲಕ್ಕಿ ನೀರು ಕುಡಿಯುವುದರಿಂದ  ಆರೋಗ್ಯ ಹೇಗೆ ಉತ್ತಮಗೊಂಡಿತು ಎಂಬುದನ್ನು ಈಗ ನೋಡೋಣ.

ಚಳಿಗಾಲದಲ್ಲಿ ಸ್ವಲ್ಪ ಕಷ್ಟ! ಚಳಿಗಾಲದಲ್ಲಿ ನೀರು ಕುಡಿಯಲು ಅಷ್ಟಾಗಿ ಯಾರೂ ಬಯಸಲ್ಲ. ಬೆಂಗಳೂರಿನಲ್ಲಿ ಚಳಿ ಇನ್ನೂ ಜಾಸ್ತಿ. ಮೈಮೇಲೆ ದಪ್ಪಗಿನ ಬಟ್ಟೆ ಹಾಕಿಕೊಂಡು, ಬಿಸಿಬಿಸಿ ತಿಂಡಿ, ಕಾಫಿ ಕುಡಿಯದಿದ್ದರೆ ಮನಸ್ಸಿಗೆ ಹಿತವೆನಿಸಲ್ಲ. ಇನ್ನು ಕುಡಿಯುವ ನೀರಿನ ಬಗ್ಗೆ ಗಮನವೇ ಇರಲ್ಲ. ಇದೇ ಪ್ರಭಾವದಿಂದ ಕಣ್ಣೆಲ್ಲಾ ಒಣಗಿ, ಚರ್ಮ ಹೊಳಪನ್ನು ಕಳೆದುಕೊಳ್ಳುತ್ತದೆ. ಆ ಕಾರಣಕ್ಕೆ ಒಮ್ಮೊಮ್ಮೆ ತಲೆಸುತ್ತುವುದು ಕೂಡ ಆಗುತ್ತದೆ.

ಸೌಂದರ್ಯ ರಹಸ್ಯ ಅಂದರೆ ಇದೇ! ನೀರು ಕುಡಿಯದೆ ಅನಾರೋಗ್ಯ ಪಾಲಾದಾಗ ನೀರಿನ ಬೆಲೆ ಗೊತ್ತಾಗುತ್ತದೆ. ಆದರೆ ಒಂದು ಸಣ್ಣ ಟ್ವಿಸ್ಟ್. ಸ್ವಲ್ಪ ಏಲಕ್ಕಿ ಪುಡಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರಸಿಕೊಂಡು ಕುಡಿದರೆ ಇನ್ನೂ ಆರೋಗ್ಯಕರ ಬರಿ ನೀರು ಕುಡಿದರೆ ರುಚಿ ಇರಲ್ಲ…ಹಾಗಾಗಿ ಏಲಕ್ಕಿ ಹಾಕಿ.. ಖಾಲಿ ಹೊಟ್ಟೆಯಲ್ಲಿ ಒಂದು ಲೀಟರ್ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಏಲಕ್ಕಿ ಹಾಕಿಕೊಂಡು ಕುಡಿಯಬೇಕು.

ಇದರಿಂದ ಮೂರು ಬದಲಾವಣೆಗಳನ್ನು ಗಮನಿಸಬಹುದು. ಅದೇನೆಂದರೆ..
1. ಜೀರ್ಣ ಕ್ರಿಯೆ ಉತ್ತಮಗೋಳ್ಳುವುದು… ಎನರ್ಜಿ ಲೆವೆಲ್ಸ್ ಬೆಳೆವುದು. ಕಚೇರಿ, ಮನೆ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದ ಕಾರಣ ಸುಸ್ತಾಗುತ್ತಿದ್ದವರಿಗೆ.ಏಲಕ್ಕಿ ನೀರು ಕುಡಿಯುವುದನ್ನು ಆರಂಭಿಸಿದ ಮೇಲೆ ಅವರಲ್ಲಿ ಆ ಸಮಸ್ಯೆ ಕಾಣಿಸಿಕೊಳ್ಳಲಿಲ್ಲ. ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೆ ಗೆಲುವಾಗಿರುತ್ತಿತ್ತು.

2. ತೂಕ ಕಡಿಮೆಯಾಗಿದ್ದು
14 ದಿನಗಳಲ್ಲಿ 1 ಕೆಜಿ ತೂಕ ಕಡಿಮೆಯಾಗುತ್ತೆ. ನಿತ್ಯ ಚೆನ್ನಾಗಿ ನೀರು ಕುಡಿಯುತ್ತಿದ್ದ ಕಾರಣ ಬೇರೆ ಸಮಯದಲ್ಲಿ ಅದೂ ಇದೂ ತಿನ್ನಬೇಕು ಎಂದು ಅನ್ನಿದಲ್ಲ. ನಿತ್ಯ ಮೂರು ಸಲ ಭೋಜನ, ಒಂದು ಸಲ ಸ್ನ್ಯಾಕ್ಸ್‌ಗೆ ಸೀಮಿತವಾಗಿದ್ದರು.

3. ಚರ್ಮಾ ಫ್ರೆಶ್ ಆಗಿರುತ್ತಿತ್ತು
ಏಲಕ್ಕಿ, ನೀರಿನಲ್ಲಿರುವ ಅನೇಕ ಸದ್ಗುಣಗಳನ್ನು ಚರ್ಮವನ್ನು 14 ದಿನಗಳಲ್ಲೇ ಕಾಂತಿಯುತವಾಗಿ ಮಾಡತ್ತೆ. ಈ ವ್ಯತ್ಯಾಸವನ್ನು ಸ್ಪಷ್ಟವಾಗಿ ಗಮನಿಸಬಹುದು. ಹಾಗಿದ್ದರೆ ನೀವೂ ಟ್ರೈ ಮಾಡಿ ಈ ಚಾಲೆಂಜ್! ಆಗ ನೋಡಿ ನಿಮ್ಮ ಆರೋಗ್ಯದಲ್ಲಿ ಏನೆಲ್ಲಾ ಬದಲಾಗುತ್ತದೆ ಅಂತ.

Comments are closed.