ಕರಾವಳಿ

ಮಂಗಳೂರಿನಲ್ಲಿ ಶೂನ್ಯ ನೆರಳಿನ ದಿನದ ಪ್ರಾತ್ಯಕ್ಷಿಕೆ : ಏನಿದು ಶೂನ್ಯ ನೆರಳು..

Pinterest LinkedIn Tumblr

ಮಂಗಳೂರು ಏಪ್ರಿಲ್ 25 : ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ (ಏಪ್ರಿಲ್ 24) ಶೂನ್ಯ ನೆರಳಿನ ದಿನದ ವಿದ್ಯಮಾನದ ಬಗ್ಗೆ ವಿವರಣೆಯನ್ನು ಮತ್ತು ಅದಕ್ಕೆ ಸಂಬಂಧ ಪಟ್ಟ ಪ್ರಾತ್ಯಕ್ಷಿಕೆಗಳನ್ನು ಆಸಕ್ತ ಸಂದರ್ಶಕರಿಗೆ ಏರ್ಪಡಿಸಲಾಗಿತ್ತು.

ಸಂದರ್ಶಕರು ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿ ಸಂದೇಹಗಳಿಗೆ ವಿವರಣೆಯನ್ನು ಪಡೆದುಕೊಂಡರು. ಶೈಕ್ಷಣಿಕ ಸಹಾಯಕ ಶರಣಯ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ ಕೆ.ವಿ ರಾವ್ ಉಪಸ್ಥಿತರಿದ್ದರು.

ಏನಿದು ಶೂನ್ಯ ನೆರಳು :

ಕರ್ಕಾಟಕ ವೃತ್ತದೆಡೆಗೆ ಉತ್ತರಕ್ಕೆ ಚಲಿಸುತ್ತಿರುವ ಸೂರ್ಯ (ಏಪ್ರಿಲ್ 24 ರಂದು) ಮಂಗಳೂರಿನಲ್ಲಿ ಮಧ್ಯಾಹ್ನ ನೆತ್ತಿಯ ಮೇಲೆ ಹಾದು ಹೋಗುವ ಸಮಯದಲ್ಲಿ ನೆರಳು ಶೂನ್ಯವಾಗುತ್ತದೆ.

ಈ ವಿದ್ಯಮಾನವು ವರ್ಷದಲ್ಲಿ ಎರಡು ಬಾರಿ ನಡೆಯುತ್ತದೆ. ಸೂರ್ಯನು ಉತ್ತರಕ್ಕೆ ಚಲಿಸಿದಾಗ ಮತ್ತು ನಂತರ ದಕ್ಷಿಣಕ್ಕೆ ಬರುವಾಗ ಮಧ್ಯಾಹ್ನದ ಶೂನ್ಯ ನೆರಳಿನ ವಿದ್ಯಮಾನ ಸಂಭವಿಸುತ್ತದೆ. ಈ ಘಟನೆ ಸಂಭವಿಸುವ ದಿನಾಂಕಗಳು ಆಯಾ ಸ್ಥಳಗಳ ಅಕ್ಷಾಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಅವುಗಳನ್ನು ZSಆ ಂಠಿಠಿ ಮೂಲಕ ತಿಳಿದುಕೊಳ್ಳಬಹುದು.

ಭೂಮಿಯ ಭ್ರಮಣೆ ಅಕ್ಷವು 23.5 ಡಿಗ್ರಿ ವಾಲಿರುವುದರಿಂದ ಕರ್ಕಾಟಕ ಮತ್ತು ಮಕರ ಸಂಕ್ರಾತಿ ವೃತ್ತಗಳ ಒಳಭಾಗದಲ್ಲಿ ಈ ವಿದ್ಯಮಾನವು ವಿವಿಧ ಸ್ಥಳಗಳಲ್ಲಿ ಬೇರ ಬೇರೆ ದಿನಗಳಲ್ಲಿ ಸಂಭವಿಸುತ್ತದೆ. ಇದರ ಪ್ರಾತ್ಯಕ್ಷಿಕೆ ಯಾರು ಬೇಕಾದರೂ ಮಾಡಿ ನೋಡಬಹುದು.

Comments are closed.