ಕರಾವಳಿ

ಮಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ಡಿ.ವೇದವ್ಯಾಸ್ ಕಾಮತ್‌ರಿಂದ ನಗರದ ದೈವ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಮತಯಾಚನೆ ಆರಂಭ

Pinterest LinkedIn Tumblr

ಮಂಗಳೂರು, ಎಪ್ರಿಲ್.25 : ರಾಜ್ಯ ವಿಧಾನಸಭಾ ಚುನಾವಣೆಗೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿರುವ ಡಿ.ವೇದವ್ಯಾಸ್ ಕಾಮತ್ ಅವರು ಬಿಜೈ ಕಾಪಿಕಾಡ್, ಆನೆಗುಂಡಿ, ದೇರೆಬೈಲ್, ದಡ್ಡಲ್ ಕಾಡ್, ಅಶೋಕನಗರ ಪರಿಸರದಲ್ಲಿ ಮನೆಮನೆಗೆ ತೆರಳಿ ಮತ ಯಾಚಿಸಿದರು

ಮೊದಲಿಗೆ ಮಂಗಳೂರಿನ ಚಿಲಿಂಬಿಗುಡ್ಡೆಗೆ ಭೇಟಿ ನೀಡಿ ಶ್ರೀ ರಾಮಾಂಜನೇಯ ಯುವಕ ಮಂಡಲದಲ್ಲಿ ಪೂಜೆ ಸಲ್ಲಿಸಿ ಬಳಿಕ ಯುವಕ ಮಂಡಲದ ಮಿತ್ರರೊಡಗೂಡಿ ಸ್ಥಳೀಯ ಶ್ರೀ ಚಾಮುಂಡೇಶ್ವರಿ ದೈವಸ್ಥಾನ, ಬಿಜೈ ಕಾಪಿಕಾಡ್ ಶ್ರೀ ಗುರು ವೈದ್ಯನಾಥ ಬಬ್ಬು ಸ್ವಾಮಿ ದೈವಸ್ಥಾನ ಹಾಗೂ ಸುತ್ತಮುತ್ತಲಿನ ದೈವ ದೇವರುಗಳ ಸನ್ನಿಧಾನಕ್ಕೆ ತೆರಳಿ ಪಕ್ಷದ ಗೆಲುವು ಹಾಗೂ ಮಂಗಳೂರಿನ ಅಭಿವೃದ್ಧಿಗಾಗಿ ಪ್ರಾರ್ಥಿಸಿದರು.

ಬಳಿಕ ದೇರೆಬೈಲ್, ದಡ್ಡಲ್ ಕಾಡ್, ಅಶೋಕನಗರ, ಬಿಜೈ ಕಾಪಿಕಾಡ್, ಆನೆಗುಂಡಿ ಪರಿಸರದ ಮನೆಗಳಿಗೆ ತೆರಳಿ ಮತ ಯಾಚಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಗೆ ಬೆಂಬಲ ನೀಡುವಂತೆ ಅವರು ವಿನಂತಿಸಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರವು ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೇ ಸಮರ್ಥವಾಗಿ ದೇಶದ ಆಳ್ವಿಕೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ಜನತೆ ಮೋದಿಯವರನ್ನು ಬಲಪಡಿಸಲು ಬಿಜೆಪಿ ಜೊತೆ ಕೈಜೋಡಿಸಬೇಕು ಎಂದು ವಿನಂತಿಸಿದರು. ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಜನಪರ ನಿಲುವು, ಯೋಜನೆಗಳನ್ನು ವಿವರಿಸಿ ಕರ್ನಾಟಕದಿಂದ ಮೋದಿ ಸರ್ಕಾರಕ್ಕೆ ಅಭೂತಪೂರ್ವ ಬೆಂಬಲ ನೀಡಿ ಭಾರತೀಯ ಜನತಾ ಪಾರ್ಟಿಯನ್ನು ಗೆಲ್ಲಿಸಬೇಕೆಂದು ಡಿ.ವೇದವ್ಯಾಸ್ ಕಾಮತ್ ವಿನಂತಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಗುರುದತ್, ಹರೀಶ್ ಡಿ, ಪವನ್, ಶ್ಯಾಮ್ ಸುಂದರ್, ರಾಧಾಕೃಷ್ಣ, ನಾಗೇಂದ್ರ, ವಸಂತ್, ಶ್ರೀನಿವಾಸ ಪೈ, ಉಮಾನಾಥ್ ಅಮೀನ್ ಸುರೇಖ ಹೆಗ್ಡೆ, ಸುನಿತಾ, ಮೋಹಿನಿ, ಸುನಂದ, ವತ್ಸಲ, ಲೋಲಾಕ್ಷಿ, ಪ್ರೇಮಲತಾ, ಚಂದ್ರಾವತಿ, ಹರಿಣಿ ವಿಜೇಂದ್ರ, ಸುಕೇತ ಪ್ರಶಾಂತ್ ಆಳ್ವ, ಅಂಕಿತಾ ಕಾಮತ್, ಭಾರತಿ ಪ್ರಭು, ಸಾಗರ್, ಜಗದಿಶ್, ಭರತ ಶೆಟ್ಟಿ, ಅಶೋಕ್ , ಶಕಿಲಾ ಸುಧಾಕರ್, ಎನ್.ಎಸ್.ಶಾಸ್ತ್ರಿ, ಸುಷ್ಮಾ ಶೆಟ್ಟಿ, ಸಂಜಯ್ ಪ್ರಭು, ಅಜಯ್, ಗಿರೀಶ್ ಕೊಟ್ಟಾರಿ, ಪ್ರಶಾಂತ್ ಆಳ್ವ, ನಾರಾಯಣ, ದಯಾನಂದ, ಪಕ್ಷದ ಪ್ರಮುಖರಾದ ಆಶಾ, ಸುರೇಖ ಹೆಗ್ಡೆ, ಸುರೇಶ್ ಮುಂತಾದವರು ಉಪಸ್ಥಿತರಿದ್ದರು

Comments are closed.