ಆರೋಗ್ಯ

ಅಕ್ಕಿಯಲ್ಲಿರುವಂತಹ ಆರೋಗ್ಯಕರ ಅಂಶಗಳನ್ನ ಬಲ್ಲಿರಾ …!

Pinterest LinkedIn Tumblr

ಕುಚ್ಚಲಕ್ಕಿಯು ಹೊಂದಿರುವ ಆರೋಗ್ಯದ ಗುಣಗಳು. ಕುಚ್ಚಲಕ್ಕಿಯು ನಾವು ಸೇವಿಸುವ ಆಹಾರಗಳಲ್ಲಿಯೇ ಅತ್ಯಂತ ಪೌಷ್ಠಿಕವಾದ ಆಹಾರವಾಗಿದೆ ಸಂಸ್ಕರಣೆಯ ಮೂಲಕ ಅಕ್ಕಿಯ ಭತ್ತದಿಂದ ಕೇವಲ ಹೊರ ಸಿಪ್ಪೆಯನ್ನು ತೆಗೆದ ನಂತರ ಸಿಗುವ ಅಕ್ಕಿಯನ್ನು ಕುಚ್ಚಲಕ್ಕಿ ಅಥವಾ ಕಂದು ಬಣ್ಣದ ಅಕ್ಕಿ ಅಥವಾ ಸಾಮಾನ್ಯವಾಗಿ ಆಂಗ್ಲದಲ್ಲಿ ಬ್ರೌನ್ ರೈಸ್ ಎಂದು ಕರೆಯುತ್ತಾರೆ. ಇದು ತನ್ನ ನಾರಿನಂಶ ಮತ್ತು ಪೌಷ್ಟಿಕಾಂಶವನ್ನು ಉಳಿಸಿಕೊಂಡಿರುತ್ತದೆ.

ಕುಚ್ಚಲಕ್ಕಿಯನ್ನು ಮತ್ತೆ ಮಿಲ್ನಲ್ಲಿ ಸಂಸ್ಕರಿಸಿದಾಗ ಅದರ ಹೆಚ್ಚಿನ ನಾರಿನಂಶ ಮತ್ತು ಪೌಷ್ಟಿಕಾಂಶಗಳು ನಾಶವಾಗಿ ಕೇವಲ ಬಿಳಿ ಅಕ್ಕಿಯಾಗಿ ಮಾತ್ರ ಉಳಿಯುತ್ತದೆ. ಇದನ್ನು ಸಂಸ್ಕರಣೆಮಾಡುತ್ತ ಉಳಿದ ಪದರವಾದ ಅಲೆಯುರೊನ್ (ಇದರಲ್ಲಿಯೂ ಅವಶಕವಾದ ಎಣ್ಣೆಗಳಿರುತ್ತದೆ) ಕೂಡ ತೆಗೆಯಲಾಗುತ್ತದೆ.

10 ವರ್ಷಗಳ ತನಕ ಇಡಬಹುದಾದ ಬಿಳಿ ಅಕ್ಕಿಗೆ ಹೋಲಿಸಿದರೆ, ಕುಚ್ಚಲಕ್ಕಿ ಹೆಚ್ಚೆಂದರೆ ಕೇವಲ 6-8 ತಿಂಗಳುಗಳು ಮಾತ್ರ ಇಡಬಹುದು, ಏಕೆಂದರೆ ಇದರಲ್ಲಿರುವ ಎಣ್ಣೆಯು ಅಕ್ಕಿಯನ್ನು ಹಾಳುಮಾಡುತ್ತದೆ.

ಕುಚ್ಚಲಕ್ಕಿಯಲ್ಲಿ ನಮ್ಮ ದೈನಂದಿನ ಅಗತ್ಯಕ್ಕೆ ಬೇಕಾದಂತಹ ಶೇ.80% ರಷ್ಟು ಮ್ಯಾಂಗನೀಸ್ ಇರುತ್ತದೆ. ಇದರ ಜೊತೆಗೆ ಇದರಲ್ಲಿ ಕಾರ್ಬೋಹೈಡ್ರೇಟ್ಸ್ ಮತ್ತು ಪ್ರೋಟಿನ್ ಇರುತ್ತದೆ. ಬಾಸುಮತಿ, ಜಾಸ್ಮೀನ್ ಮತ್ತು ಸುಶಿ ಅಕ್ಕಿಗಳು ಸಹ ಕಂದು ಬಣ್ಣದಲ್ಲಿ ಬರುತ್ತವೆ.

ಹಾಗಾಗಿ ಯಾರು ಬೇಕಾದರು ಬಿಳಿ ಅಕ್ಕಿಯಿಂದ ಈ ಕಂದು ಬಣ್ಣದ ಕುಚ್ಚಲಕ್ಕಿಗೆ ಪರಿವರ್ತನೆ ಹೊಂದಲು ಸುಲಭವಾಗುತ್ತದೆ. ಅಲ್ಲದೆ ಕುಚ್ಚಲಕ್ಕಿಯಿಂದ ಯಾವ ತಿಂಡಿ ಬೇಕಾದರು ಸಹ ಮಾಡಲು ಇದರಿಂದ ಸುಲಭವಾಗುತ್ತದೆ. ಆದರೆ ಒಂದೆ ವ್ಯತ್ಯಾಸವೆಂದರೆ ಅನ್ನ ಅಥವಾ ತಿಂಡಿಯ ಬಣ್ಣ ಕಂದು ಬಣ್ಣದಲ್ಲಿ ಇರುತ್ತದೆ.

ಕುಚ್ಚಲಕ್ಕಿಯಲ್ಲಿರುವ ಆರೋಗ್ಯದ ಅಂಶಗಳನ್ನು ನೋಡೋಣ..

ಕುಚ್ಚಲಕ್ಕಿ ಯಲ್ಲಿ ಸೆಲೆನಿಯಮ್ ಅಂಶವು ಸಮೃದ್ಧವಾಗಿದ್ದು ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಉರಿಊತದ ಸಮಸ್ಯೆಗಳು ಮತ್ತು ಸಂಧಿವಾತ ಇತ್ಯಾದಿ ಸಮಸ್ಯೆಗಳು ಬರುವ ಅಪಾಯಗಳನ್ನು ತಡೆಗಟ್ಟುತ್ತದೆ.

ಒಂದು ಕಪ್ ಕುಚ್ಚಲಕ್ಕಿಯಲ್ಲಿ ಒಂದು ದಿನಕ್ಕೆ ಅಗತ್ಯವಿರುವ ಶೇಕಡಾ 80% ಮ್ಯಾಂಗನೀಸ್ ಒಳಗೊಂಡಿರುತ್ತದೆ. ಈ ಖನಿಜವು ಮಾನವ ದೇಹದಲ್ಲಿ ಒಳ್ಳೆಯ ಕೊಬ್ಬನ್ನು ಉತ್ಪತ್ತಿಮಾಡಲು ಅಗತ್ಯಕರ ಕೊಬ್ಬಿನಾಮ್ಲಗಳನ್ನು ರಚಿಸುತ್ತದೆ. ಅಷ್ಟೇ ಅಲ್ಲದೆ ಇದು ನರಮಂಡಲ ಮತ್ತು ಸಂತಾನೋತ್ಪತ್ತಿಯ ಕಾರ್ಯದಲ್ಲೂ ಸಹಾಯಮಾಡುತ್ತದೆ.

ಕುಚ್ಚಲಕ್ಕಿಯಲ್ಲಿ ನೈಸರ್ಗಿಕ ಎಣ್ಣೆ ಹೃದಯ ಸ್ನೇಹಿ ಎಣ್ಣೆ ಯಾಗಿದ್ದು ಇದು ದೇಹದಲ್ಲಿ ಕೆಟ್ಟ ಕೊಬ್ಬುಗಳಾದ LDL ಕೊಲೆಸ್ಟರಾಲ್ ಕಡಿಮೆ ಮಾಡುತ್ತದೆ.

ಕುಚ್ಚಲಕ್ಕಿಯ ಜನಪ್ರಿಯ ಪ್ರಯೋಜನವೆಂದರೆ ತೂಕ ಇಳಿಸಲು ಇದು ಸಹಕಾರಿ. ಇದರಲ್ಲಿರುವ ಕೊಬ್ಬನ್ನು ಕರಗಿಸುವ ಗುಣಗಳು ಮತ್ತು ಯಥೇಚ್ಛವಾದ ನಾರಿನಂಶವು ನಮ್ಮ ದೇಹದಲ್ಲಿನ ಕೊಬ್ಬನ್ನು ಕರಗಿಸುತ್ತದೆ. ಜೊತೆಗೆ ಇದನ್ನು ಸೇವಿಸಿದರೆ ಜೀರ್ಣಿಸಿಕೊಳ್ಳಲು ಸ್ವಲ್ಪ ಹೆಚ್ಚಿನ ಸಮಯ ಬೇಕಾಗುತ್ತದೆ. ಇದರಿಂದಾಗಿ ಹೊಟ್ಟೆ ಹಸಿವಾಗುವ ಅನುಭವವಾಗುವುದು ತಡವಾಗುತ್ತದೆ. ಹಾಗಾಗಿ ನಮ್ಮ ತಿನ್ನುವ ಚಪಲಕ್ಕೆ ಇದರಿಂದ ಕಡಿವಾಣ ಬೀಳುತ್ತದೆ.

ಕುಚ್ಚಲಕ್ಕಿಯು ಒಂದು ವಿಧವಾದ ಹೋಲ್ ಗ್ರೇನ್ ಆಗಿದ್ದು, ಸಂಸ್ಕರಣೆಯ ಹಂತದಲ್ಲಿ ಯಾವುದೇ ಬಗೆಯ ಪೋಷಕಾಂಶದ ಕೊರತೆಯ ಭಯ ಇದಕ್ಕೆ ತಟ್ಟುವುದಿಲ್ಲ. ಇದರ ಈ ಪರಿಪೂರ್ಣ ಗುಣವು ರಕ್ತನಾಳಗಳನ್ನು ಸದೃಢಗೊಳಿಸುವ ಮೂಲಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಹಾಗು ಹೃದ್ರೋಗವನ್ನು ತಡೆಯುತ್ತದೆ.

ಹಲವಾರು ಅಧ್ಯಯನಗಳ ಪ್ರಕಾರ ಕುಚ್ಚಲಕ್ಕಿಯು ಅತ್ಯುತ್ತಮವಾದ ಅಂಟಿ-ಆಕ್ಸಿಡೆಂಟ್ ಗುಣಗಳನ್ನು ತನ್ನಲ್ಲಿ ಒಳಗೊಂಡಿದೆ. ಇದರಲ್ಲಿರುವ ಫೈಟೊನ್ಯೂಟ್ರಿಯೆಂಟ್‍ಗಳ ಸಲುವಾಗಿ ಇದರಲ್ಲಿ ಈ ಗುಣಗಳು ಬಂದಿವೆ, ಹೀಗಾಗಿ ಇದೊಂದು ಪರಿಪೂರ್ಣ ಧಾನ್ಯವಾಗಿದೆ. ಕುಚ್ಚಲಕ್ಕಿಯಲ್ಲಿರುವ ಅಂಟಿ ಆಕ್ಸಿಡೆಂಟ್‍ಗಳು ಹಲವಾರು ರೋಗರುಜಿನಗಳನ್ನು ತಡೆಯುವುದರ ಜೊತೆಗೆ, ವಯಸ್ಸಾಗುವುದನ್ನು ಸಹ ತಡೆಯುತ್ತದೆ.

ನಮಗೆಲ್ಲರಿಗೂ ತಿಳಿದಿರುವಂತೆ ಆಂಟಿ-ಆಕ್ಸಿಡೆಂಟ್ ಗಳು ಹೆಚ್ಚಾಗಿ ಬ್ಲೂ ಬೆರ್ರಿಗಳು, ಸ್ಟ್ರಾಬೆರ್ರಿಗಳು ಮತ್ತು ಇತರೆ ಹಣ್ಣು ಮತ್ತು ತರಕಾರಿಗಳಲ್ಲಿ ಇವೆ ಎಂದು. ಆದರೆ ಕುಚ್ಚಲಕ್ಕಿಯಲ್ಲೂ ನಾವು ಅಷ್ಟೇ ಪ್ರಮಾಣದ ಆಂಟಿ-ಆಕ್ಸಿಡೆಂಟ್ಗಳನ್ನು ಕಾಣಬಹುದು.

ಕುಚ್ಚಲಕ್ಕಿಯನ್ನು ಹೆಚ್ಚಾಗಿ ಬಳಸುವುದರಿಂದ ಕರುಳು ಕ್ಯಾನ್ಸರ್ಪ್ರಕರಣಗಳು ಕಡಿಮೆಯಾಗಿದೆ. ಇದಕ್ಕೆ ಕಾರಣ ಅದರಲ್ಲಿರುವ ಹೆಚ್ಚು ನಾರಿನಂಶ ಆಗಿದೆ. ಈ ನಾರು ಕ್ಯಾನ್ಸರ್ಕಾರಕ ಕೋಶಗಳೊಂದಿಗೆ ಅಂಟಿಕೊಂಡು ದೇಹದಿಂದ ಹೊರಹಾಕಿ ನಮ್ಮ ಕರುಳುಗಳನ್ನು ಆರೋಗ್ಯವಾಗಿರಿಸುತ್ತದೆ. ಇದರಲ್ಲಿರುವ ಇನ್ನು ಹಲವು ಅಂಶಗಳು ಜೀರ್ಣಕ್ರಿಯೆಗೆ ಸಹಾಯಮಾಡಿ ಮಲಬದ್ಧತೆ ಆಗದಿರುವಂತೆ ನೋಡಿಕೊಳ್ಳುತ್ತದೆ ಮತ್ತು ನಿಯಮಿತವಾದ ಕರುಳುಗಳ ಚಲನೆಗೆ ಉತ್ತೇಜಿಸುತ್ತದೆ.

ಕುಚ್ಚಲಕ್ಕಿಯಲ್ಲಿ ಮ್ಯಗ್ನಿಶಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ನಮ್ಮ ದೇಹದಲ್ಲಿ ಗ್ಲೂಕೋಸ್ ಮತ್ತು ಇನ್ಸುಲಿನ್ ಸ್ರವಿಕೆಯಲ್ಲಿ ಪಾಲ್ಗೊಳ್ಳುವ ಸುಮಾರು 300 ಕಿಣ್ವಗಳನ್ನು ಉತ್ಪತಿ ಮಾಡಲು ಸಹಕರಿಸುತ್ತದೆ. ಕಾರ್ಬೋಹೈಡ್ರೇಟ್‍ಗಳ ಸಮೃದ್ಧ ಆಗರವಾಗಿರುವ ಈ ಕುಚ್ಚಲಕ್ಕಿಯು ನಮ್ಮ ದೇಹಕ್ಕೆ ಅಗತ್ಯವಾದ ಪರಿಪೂರ್ಣ ಆಹಾರವನ್ನು ಒದಗಿಸುತ್ತದೆ. ಇದು ಇತರೆ ಅಕ್ಕಿ ಮತ್ತು ಧಾನ್ಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.

ಕುಚ್ಚಲಕ್ಕಿಯಲ್ಲಿ ಮೆಗ್ನಿಶಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಕ್ಯಾಲ್ಸಿಯಂ ಅನ್ನು ಸಮತೋಲನದಲ್ಲಿಡುವ ಮೂಲಕ ನರಗಳಿಗೆ ಮತ್ತು ಸ್ನಾಯುಗಳಿಗೆ ಆಕರ್ಷಕ ರೂಪವನ್ನು ತಂದು ನೀಡುತ್ತದೆ. ಮ್ಯಗ್ನಿಶಿಯಂ ಮತ್ತು ಕ್ಯಾಲ್ಸಿಯಂ ಎರಡೂ ಮೂಳೆಗಳ ಆರೋಗ್ಯಕ್ಕೆ ಅತ್ಯಾವಶ್ಯಕವಾಗಿರುವ ವಸ್ತುಗಳು. ನಮ್ಮ ದೇಹದಲ್ಲಿನ ಮೂರನೆಯ ಎರಡು ಭಾಗದಷ್ಟು ಮ್ಯಗ್ನಿಶಿಯಂ ಮೂಳೆಗಳಲ್ಲಿಯೇ ಅಡಕಗೊಂಡಿರುತ್ತವೆ.

ಕುಚ್ಚಲಕ್ಕಿಯ ಸರಿ ಮಾಡುವುದು ಅಥವಾ ಕುಚ್ಚಲಕ್ಕಿಯ ಅನ್ನ ಕೂಡ ಶಿಶುವಿಗೆ ತುಂಬಾ ಆರೋಗ್ಯಕರ ಮತ್ತು ಶ್ರೇಷ್ಠ ಆಹಾರವಾಗಿದೆ. ಇದರಲ್ಲಿ ಅತಿ ಹೆಚ್ಚು ಪೌಷ್ಟಿಕಾಂಶಗಳು ಮತ್ತು ನಾರು ಇವೆ. ಇದು ಬಿಳಿ ಅಕ್ಕಿಯಲ್ಲಿ ತಯಾರಿಸಿದ ಸರಿಗಿಂತಲೂ ಅತ್ತ್ಯುತ್ತಮವಾಗಿದ್ದು ಬೆಳೆಯುವ ಮಕ್ಕಳು ಮತ್ತು ಶಿಶುಗಳ ಉತ್ತಮ ಆಹಾರವೆಂದು ಪರಿಗಣಿಸಲಾಗಿದೆ.

ಕ್ಯಾಂಡಿಡಾ ಈಸ್ಟ್ ಸೋಂಕು ಚಿಕಿತ್ಸೆಗಳಿಗೆ ಕುಚ್ಚಲಕ್ಕಿ ಪರಿಪೂರ್ಣವಾಗಿದ್ದು, ಹೆಚ್ಚಿನ ಗ್ಲೈಸಿಮಿಕ್ ಮತ್ತು ಸಕ್ಕರೆ / ಪಿಷ್ಟ ಆಹಾರಗಳು ನಿಷೇಧಿಸಲಾಗಿರುವ ಕ್ಯಾಂಡಿಡಾ ಚಿಕಿತ್ಸೆಯ ರೀತಿಗಳನ್ನು ಇದು ಸರಿದೂಗಿಸುತ್ತದೆ.

ಕುಚ್ಚಲಕ್ಕಿಯ ನೈಸರ್ಗಿಕ ಜೀರ್ಣಕ್ರಿಯೆಯ ಜೊತೆ ಅದರ ಹೆಚ್ಚಿನ ನಾರಿನಂಶ ಸೇರಿ ಕ್ಯಾಂಡಿಡಾ ಜೀವಿಗಳ ಬೆಳವಣಿಗೆಯಿಂದ ಆಗಿರುವ ಸೂಕ್ಷ್ಮ ಜೀರ್ಣಾಂಗದ ಗಾಯವನ್ನು/ಸೋಂಕನ್ನು ಗುಣಮಾಡಲು ಸಹಾಯ ಮಾಡುತ್ತದೆ.

ನೋಡಿದರಲ್ಲ ಕುಚ್ಚಲಕ್ಕಿಯು ಎಷ್ಟೆಲ್ಲ ಆರೋಗ್ಯದಾಯಕ ಅಂಶಗಳನ್ನು ಒಳಗೊಂಡಿದೆ ಅದಕ್ಕಾಗಿ ಕುಚ್ಚಲಕ್ಕಿಯನ್ನು ಸೇವಿಸಲು ಅಭ್ಯಾಸ ಮಾಡಿಕೊಳ್ಳಿ.

ಕೃಪೆ : ಕನ್ನಡ.ಕಾಮ್

Comments are closed.