ಕ್ರೀಡೆ

ತನಿಷ್ಕಾ ಜೊತೆ ಮದುವೆಯಾಗುತ್ತಿಲ್ಲ, ನಾವಿಬ್ಬರು ಒಳ್ಳೆಯ ಗೆಳೆಯರು: ಸ್ಪಷ್ಟನೆ ನೀಡಿದ ಕ್ರಿಕೆಟಿಗ ಚಾಹಲ್‌

Pinterest LinkedIn Tumblr

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕನ್ನಡದ ನಟಿ ಜೊತೆಗಿನ ತಮ್ಮ ಮದುವೆ ಸುದ್ದಿಗೆ ಪ್ರತಿಕ್ರಿಯಿಸಿರುವ ಕ್ರಿಕೆಟಿಗ ಯಜುವೇಂದ್ರ ಚಾಹಲ್‌, ನಾನು ತನಿಷ್ಕಾರನ್ನು ವಿವಾಹವಾಗುತ್ತಿಲ್ಲ ಎನ್ನುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಕನ್ನಡದಲ್ಲಿ ಫಸ್ಟ್‌ ರ‍್ಯಾಂಕ್ ರಾಜು, ಉಪ್ಪಿಟ್ಟು ಚಿತ್ರಗಳಲ್ಲಿ ನಟಿಸಿರುವ ತನಿಷ್ಕಾ ಕಪೂರ್‌ ಹಾಗೂ ಭಾರತ ಕ್ರಿಕೆಟ್‌ ತಂಡದ ಭರವಸೆಯ ಸ್ಪಿನ್ನರ್‌ ಚಾಹಲ್‌ ಜೊತೆಯಾಗಿ ಓಡಾಡುತ್ತಿದ್ದು, ಈ ಇಬ್ಬರೂ ಸದ್ಯದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿದೆ.

ಚಾಹಲ್‌ ಐಪಿಎಲ್‌ನಲ್ಲಿ ಬೆಂಗಳೂರು ತಂಡ ಆರ್‌ಸಿಬಿ ಪರ ಆಡುತ್ತಿರುವುದರಿಂದ ಈ ಸುದ್ದಿ ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲ ಕೆರಳಿಸಿತ್ತು.

ಸುದ್ದಿ ಕುರಿತು ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿರುವ ಚಾಹಲ್‌, ‘ಅಂತಹದ್ದೇನೂ ಇಲ್ಲ. ನಾನು ಮತ್ತು ತನಿಷ್ಕಾ ಒಳ್ಳೆಯ ಸ್ನೇಹಿತರು. ಮಾಧ್ಯಮಗಳು ಹಾಗೂ ಅಭಿಮಾನಿಗಳು ಈ ಸುದ್ದಿಯನ್ನು ಹರಡದಂತೆ ಮನವಿ ಮಾಡುತ್ತೇನೆ. ನನ್ನ ಮದುವೆ ಕುರಿತು ಇಂತಹ ಆಧಾರರಹಿತ ಸುದ್ದಿಗಳನ್ನು ದಯವಿಟ್ಟು ಹರಡಬೇಡಿ. ಇಂತಹ ಸುದ್ದಿಗಳನ್ನು ಹರಡುವ ಮೊದಲು ಪರಿಶೀಲಿಸಿ’ ಎಂದು ಬರೆದುಕೊಂಡಿದ್ದಾರೆ.

Comments are closed.