ಆರೋಗ್ಯ

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಈ ಪಾಯಸದ ಸೇವನೆ ಆರೋಗ್ಯ ಉತ್ತಮ.

Pinterest LinkedIn Tumblr

ರುಚಿಕರವಾದ ಗಸಗಸೆ ಪಾಯಸ:
ಶುಭ ಸಮಾರಂಭಗಳಲ್ಲಿ ಮಾಡಲಾಗುವ ಗಸಗಸೆ ಪಾಯಸವು ಬೇಸಿಗೆಯಲ್ಲಿ ತಂಪು ಹಾಗೂ ಆರೋಗ್ಯಕ್ಕೆ ಹಿತಕರವಾಗಿದ್ದು ಬಾಯಿಗೂ ರುಚಿಕರವಾಗಿರುತ್ತದೆ.
ಬೇಕಾಗಿರುವ ಸಾಮಾಗ್ರಿಗಳು :
1) ಗಸಗಸೆ – 3 ಚಮಚ
2) ಬೆಲ್ಲ – ¼ kg ಹದಕ್ಕೆ ತಕ್ಕಂತೆ
3) ತೆಂಗಿನತುರಿ – 1 ಕಪ್
4) ಏಲಕ್ಕಿ – 2
5) ನೀರು – 5 ಗ್ಲಾಸ್

ಮೊದಲು ಬಾಣಲೆಯಲ್ಲಿ ಗಸಗಸೆಯನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಬೇಕು ನಂತರ ಉರಿಯನ್ನು ಆರಿಸಿ, ಗಸಗಸೆಯನ್ನು ಆರಲು ಇಡಿ. ಪಾತ್ರೆಯೊಂದರಲ್ಲಿ ಬೆಲ್ಲವನ್ನು ಹಾಕಿರಿ ಇದಕ್ಕೆ ಕಾಲು ಗ್ಲಾಸ್ ನೀರನ್ನು ಸೇರಿಸಿ ಚೆನ್ನಾಗಿ ಕದಡಿ ಬೆಲ್ಲ ಸಂಪೂರ್ಣವಾಗಿ ಕರಗಿಸಬೇಕು.

ಹುರಿದ ಗಸಗಸೆಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ, ಅದೇರೀತಿ ತೆಂಗಿನ ತುರಿ ಮತ್ತು ಏಲಕ್ಕಿಯನ್ನು ಸೇರಿಸಿ ರುಬ್ಬಿಕೊಳ್ಳಬೇಕು. ಇದು ಮೃದುವಾದ ಪೇಸ್ಟ್‌ನಂತೆ ಆಗಲು ಕಾಲು ಕಪ್‍ನಷ್ಟು ನೀರನೊಂದಿಗೆ ರುಬ್ಬಬಹುದು.

ಬೆಲ್ಲ ಕರಗಿದ ಮೇಲೆ ರುಬ್ಬಿಕೊಂಡ ತೆಂಗಿನ ತುರಿ ಹಾಗೂ ಗಸಗಸೆಯನ್ನು ಸೇರಿಸಿ. ಇವೆಲ್ಲವನ್ನು ಸೇರಿಸಿದ ಮೇಲೆ 2-3 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ ತಳ ಹಿಡಿಯುವುದನ್ನು ತಡೆಯಲು ಆಗಾಗ ಕೈಯಾಡಿಸುತ್ತಲೇ ಇರಿ. ಸವಿಯಲು ನೀಡುವ ಮುನ್ನ ಒಮ್ಮೆ ಬಿಸಿಮಾಡಿ ಕೊಡಿ.

ಈ ಮೇಲೇ ತಿಳಿಸಿದ ಪ್ರಮಾಣದಲ್ಲಿ ಮಾಡಿದ ಗಸಗಸೆ ಪಾಯಸವು 4 ಮಂದಿಗೆ ಆಗುವಂಥದ್ದು.

ಸೂಚನೆ: ಪಾಯಸದ ಪರಿಮಳ ಹಾಗೂ ರುಚಿಯನ್ನು ಹೆಚ್ಚಿಸಲು ಹಾಲನ್ನು ಬೆರೆಸಬಹುದು ಹಾಗು ಒಣ ಹಣ್ಣುಗಳನ್ನು ಹುರಿದು ಪಾಯಸಕ್ಕೆ ಸೆರಿಸಬಹುದು. ಗಸಗಸೆ ಪಾಯಸವು ನಮ್ಮ ದೇಹಕ್ಕೆ ಔಷಧಿಯಂತೆ ಕಾರ್ಯ ನಿರ್ವಹಿಸುವುದಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.

Comments are closed.