ಕರಾವಳಿ

ಆಚಾರ ವಿಚಾರಗಳ ಹಿಂದೆ ಅಡಗಿರುವ ವೈಜ್ಞಾನಿಕ ಸತ್ಯ ಅಸತ್ಯತೆಗಳು…ಬಲ್ಲಿರಾ..?

Pinterest LinkedIn Tumblr

ಭಾರತ ದೇಶ ಅನೇಕ ಕುಲ,ಮತ,ವಿಶ್ವಾಸಗಳ ನಿಲಯ. ಯಾವುದೇ ದೇಶದಲ್ಲಿರದ ಆಚಾರ ವಿಚಾರಗಳು, ಸಂಪ್ರದಾಯಗಳು ಇಲ್ಲಿವೆ. ಸಾವಿರಾರು ವರ್ಷಗಳಿಂದ ಜನರು ಇವುಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಇಂದಿನ ಜನರು ಅವುಗಳನ್ನು ಮೂಢನಂಬಿಕೆಗಳೆಂದು ತಳ್ಳಿಹಾಕುತ್ತಿದ್ದಾರೆ. ಕೆಲವರು ಮಾತ್ರ ಇಂದಿಗೂ ಅವುಗಳನ್ನು ತಪ್ಪದೇ ಆಚರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೂಢ ನಂಬಿಕೆಗಳೆಂದು ಮುದ್ರೆ ಹಾಕಿಸಿಕೊಂಡಿರುವ ಕೆಲವು ಆಚರಣೆಗಳು ಹಾಗೂ ಅವುಗಳ ಹಿಂದೆ ಅಡಗಿರುವ ಸತ್ಯಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

* ಮಹಿಳೆಯರು ಬಳೆಗಳನ್ನು ಧರಿಸುವುದು…
ಪುರಾತನ ಕಾಲದಲ್ಲಿ ಕೇವಲ ಗಂಡಸರು ಮಾತ್ರ ಹೊರಗೆ ಹೋಗಿ ಶಾರೀರಿಕ ಶ್ರಮದಿಂದ ಕೂಡಿದ ಕೆಲಸಗಳನ್ನು ಮಾಡುತ್ತಿದ್ದರು. ಇದರಿಂದಾಗಿ ಅವರು ಸದಾಕಾಲ ಆರೋಗ್ಯದಿಂದ ಇರುತ್ತಿದರು. ಆದರೆ, ಮಹಿಳೆಯರು ಮನೆಯಲ್ಲಿದ್ದುಕೊಂಡೇ ಶ್ರಮವಹಿಸಿ ಕೆಲಸಮಾಡುತ್ತಾರೆ. ಆದುದರಿಂದ ಅವರು ಬಳೆಗಳನ್ನು ಧರಿಸುತ್ತಿದ್ದರು. ಬಳೆಗಳನ್ನು ಧರಿಸುವುದರಿಂದ ಆರೋಗ್ಯ ಸಮಸ್ಯೆಗಳು ಬರುವುದಿಲ್ಲವಂತೆ. ಬಳೆಗಳು ಯಾವಾಗಲೂ ಕೈಗಳನ್ನು ಸ್ಪರ್ಶಿಸುವುದರಿಂದ ರಕ್ತದೊತ್ತಡ ಹತೋಟಿಯಲ್ಲಿರುತ್ತದಂತೆ. ಹಾಗೂ ಮಹಿಳೆಯರ ಶರೀರದಿಂದ ಬಿಡುಗಡೆಯಾಗುವ ನೆಗೆಟಿವ್ ಎನರ್ಜಿ ಯನ್ನು ತಟಸ್ಥಗೊಳಿಸಲು ಬಳೆಗಳನ್ನು ಧರಿಸುತ್ತಾರಂತೆ.

* ಮಕ್ಕಳಿಗೆ ಕಿವಿಗಳನ್ನು ಚುಚ್ಚುಸುವುದು…
ಸಣ್ಣ ಮಕ್ಕಳಿಗೆ ಕಿವಿಗಳನ್ನು ಚುಚ್ಚುತ್ತಾರೆ. ಪ್ರಮುಖವಾಗಿ ಹೆಣ್ಣು ಮಕ್ಕಳಿಗೆ ಕಿವಿಗಳನ್ನು ಚುಚ್ಚಿಸಿದರೂ ,ಗಂಡು ಮಕ್ಕಳೂ ಸಹ ಕಿವಿಗಳನ್ನು ಚುಚ್ಚಿಸಿಕೊಳ್ಳುತ್ತಾರೆ. ಆಕ್ಯುಪ್ರೆಷರ್ ನಿಂದಾಗಿ , ಮಕ್ಕಳಿಗೆ ಬರಬಹುದಾದಂತಹ ಕೆಲವು ರೋಗಗಳು ದೂರವಾಗುತ್ತವಂತೆ.

*ಅರಳಿ ಮರವನ್ನು ಪೂಜಿಸುವುದು…
ಹಿಂದೂಗಳಲ್ಲಿ ಅಧಿಕ ಮಂದಿ ಅರಳಿ ಮರವನ್ನು ಪೂಜಿಸುತ್ತಾರೆ. ಅರಳಿ ಮರಗಳು ಹೆಚ್ಚಾಗಿ ದೇವಾಲಯಗಳಲ್ಲಿರುತ್ತವೆ. ಮಾಮೂಲಾಗಿ ಮರಗಳೆಲ್ಲವೂ ಹಗಲು ಹೊತ್ತು ಆಮ್ಲಜನಕವನ್ನು ಬಿಡುಗಡೆಗೊಳಿಸುತ್ತವೆ. ಆದರೆ, ಈ ಮರ ಮಾತ್ರ ರಾತ್ರಿಯವೇಳೆ ಆಮ್ಲಜನಕವನ್ನು ಬಿಡುಗಡೆಗೊಳಿಸುತ್ತದೆ. ಹಾಗಾಗಿ ಅರಳಿ ಮರವನ್ನು ಜನರು ಪೂಜಿಸುತ್ತಾರೆ.

* ಕಾಲುಂಗುರ ಧರಿಸುವುದು…
ಹಿಂದು ಸಂಪ್ರದಾಯದ ಪ್ರಕಾರ ಮದುವೆಯಾದ ಮಹಿಳೆಯರು ಕಾಲುಂಗುರಗಳನ್ನು ಧರಿಸುತ್ತಾರೆ. ಹೀಗೆ ಧರಿಸುವುದರಿಂದ ಆ ಭಾಗದಲ್ಲಿ ಉಂಟಾಗುವ ಘರ್ಷಣೆಯಿಂದಾಗಿ ಹೃದಯ ಹಾಗೂ ಗರ್ಭಾಶಯಗಳಿಗೆ ರಕ್ತ ಪ್ರಸಾರ ಹೆಚ್ಚುತ್ತದಂತೆ. ಋತುಸ್ತ್ರಾವವೂ ಕ್ರಮಬದ್ಧವಾಗಿರುತ್ತದೆ. ಬೆಳ್ಳಿ ಕಾಲುಂಗುರಗಳನ್ನು ಧರಿಸುವುದರಿಂದ ಪ್ರಕೃತಿಯಲ್ಲಿರುವ ಧನಾತ್ಮಕ ಶಕ್ತಿ ಶರೀರದೊಳಗೆ ಪ್ರವೇಶಿಸುತ್ತದೆ.

* ದೇವಾಲಯಗಳಲ್ಲಿ ಗಂಟೆಗಳು…
ದೇವಾಲಯಗಳಲ್ಲಿರುವ ಗಂಟೆಗಳನ್ನು ಏಳುಸಲ ಭಾರಿಸಿದರೆ, ನಮ್ಮ ದೇಹದಲ್ಲಿರುವ ಏಳು ಚಕ್ರಗಳು ಉತ್ತೇಜನಗೊಳ್ಳುತ್ತವೆ. ಅಷ್ಟೇ ಅಲ್ಲದೆ ಮಿದುಳಿನ ಎಡ ಹಾಗೂ ಬಲ ಭಾಗದ ಕಾರ್ಯ ಒಂದಾಗಿ ಮನಸ್ಸಿಗೆ ಪ್ರಶಾಂತತೆ ಲಭಿಸುತ್ತದೆ. ಏಕಾಗ್ರತೆ ಹೆಚ್ಚುತ್ತದೆ. ಗಂಟೆಗಳ ಶಬ್ದದಿಂದ ಆ ಪ್ರದೇಶದಲ್ಲಿರಬಹುದಾದ ಸೂಕ್ಷ್ಮ ಕ್ರಿಮಿಗಳು ನಾಶವಾಗುತ್ತವೆ.

* ಉತ್ತರ ದಿಕ್ಕಿಗೆ ತಲೆಯಿಟ್ಟು ನಿದ್ರಿಸಬಾರದು…
ಭೂಮಿಗೆ ಆಕಸ್ಕಾಂತ ಕ್ಷೇತ್ರ ಇರುವಂತೆ ನಮ್ಮ ಶರೀರಕ್ಕೂ ಆಯಸ್ಕಾಂತ ಕ್ಷೇತ್ರವಿರುತ್ತದೆ. ಒಂದು ವೇಳೆ ಉತ್ತರ ದಿಕ್ಕಿಗೆ ತಲೆಹಾಕಿ ಮಲಗಿದರೆ, ನಮ್ಮ ರಕ್ತದಲ್ಲಿರುವ ಕಬ್ಬಿಣಾಂಶ ಮಿದುಳಿಗೆ ಪ್ರವೇಶಿಸಿ ಅಧಿಕ ರಕ್ದೊತ್ತಡ, ಹೃದಯ ಸಂಬಂಧಿ ಖಾಯಿಲೆಗಳು ಬರುತ್ತವಂತೆ. ತಲೆನೋವು, ಆಲ್ಜಿಮರ್ಸ್ , ಪಾರ್ಕಿನ್ಸನ್ಸ್ ಖಾಯಿಲೆ ಮೊದಲಾದವುಗಳು ಬರುತ್ತವಂತೆ. ಆದುದರಿಂದ ಎಂದಿಗೂ ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಬಾರದು.

* ಹಣೆಗೆ ಕುಂಕುಮ ಧಾರಣೆ…
ಹಣೆಗೆ ಕುಂಕುಮವನ್ನು ಇಡುವುದರಿಂದ ಅಲ್ಲಿರುವ ನರಗಳು ಉತ್ತೇಜನಗೊಂಡು ಪಿಟ್ಯೂಟರಿ ಗ್ರಂಥಿಯನ್ನು ಸಕ್ರಿಯಗೊಳಿಸುತ್ತದೆ. ಇದರಿಂದಾಗಿ ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ ಗಳು ಕಡಿಮೆಯಾಗುತ್ತವಂತೆ. ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ.

* ಎರಡೂ ಕೈಗಳಿಂದ ನಮಸ್ಕರಿಸುವುದು…
ಎದುರಿಗೆ ಬಂದವರಿಗೆ ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸಿದರೆ ನಮ್ಮ ನೆನಪು ಅವರಲ್ಲಿ ಯಾವಾಗಲೂ ಉಳಿಯುತ್ತದೆ. ಹೇಗೆಂದರೆ, ಎರಡೂ ಕೈಗಳನ್ನು ಜೋಡಿಸಿದಾಗ, ಬೆರಳುಗಳ ತುದಿಗಳು ಒಂದಕ್ಕೊಂದು ತಾಗುವುದರಿಂದ ಉಂಟಾಗುವ ಒತ್ತಡವು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದಂತೆ. ಇದರೊಂದಿಗೆ ಮಿದುಳಿನ ಕಾರ್ಯ ಕ್ಷಮತೆಯೂ ಹೆಚ್ಚುತ್ತದೆ.

* ಮೆಹಂದಿ ಹಾಕಿಕೊಳ್ಳುವುದು…
ಕೈಗಳಿಗೆ ಹಾಗೂ ಕಾಲುಗಳಿಗೆ ಗೋರಂಟಿ ಎಲೆಗಳ ಪೇಸ್ಟ್ ಹಚ್ಚುವುದರಿಂದ ನರಗಳು ಶಮನಗೊಳ್ಳುತ್ತವೆ. ಶರೀರಕ್ಕೆ ಹಾಯೆನಿಸಿ ತಂಪಾಗುತ್ತದೆ. ಗೋರಂಟಿ ಎಲೆಗಳ ಪೇಸ್ಟ್ ಹಚ್ಚುವುದರಿಂದ ತಲೆನೋವು, ಜ್ವರ, ಒತ್ತಡ ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತವೆ.

* ನೆಲದಮೇಲೆ ಕುಳಿತು ಊಟ ಮಾಡುವುದು…
ನೆಲದಮೇಲೆ ಕುಳಿತು ಊಟಮಾಡುವಾಗ ಪದ್ಮಾಸನವನ್ನು ಹಾಕಿಕೊಂಡಿರುತ್ತೇವೆ. ಇದರಿಂದಾಗಿ ಜೀರ್ಣಕ್ರಿಯೆ ಉತ್ತಮಗೊಂಡು ಜೀರ್ಣಾಂಗಗಳ ಸಮಸ್ಯೆಗಳು ದೂರವಾಗುತ್ತವೆ.

* ಮೊದಲು ಖಾರ ನಂತರ ಸಿಹಿ ಪದಾರ್ಥಗಳನ್ನು ತಿನ್ನುವುದು…
ಊಟಮಾಡುವಾಗ ಮೊದಲಿಗೆ ಖಾರವಾದ ಪದಾರ್ಥಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಹಾಕಾರಿಯಾಗುವ ಆಮ್ಲಗಳು ಉತ್ಪತ್ತಿಯಾಗುತ್ತವೆ. ಇದರಿಂದಾಗಿ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಆದರೆ, ಊಟಕ್ಕೂ ಮುನ್ನ ಸಿಹಿ ಪದಾರ್ಥಗಳನ್ನು ಸೇವಿಸಿದಲ್ಲಿ ಜೀರ್ಣಕ್ರಿಯೆ ಸಕ್ರಮವಾಗಿರದೆ, ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.

* ನದಿಗಳಿಗೆ ನಾಣ್ಯಗಳನ್ನು ಹಾಕುವುದು…
ಒಂದು ಕಾಲದಲ್ಲಿ ತಾಮ್ರದ ನಾಣ್ಯಗಳು ಚಲಾವಣೆಯಲ್ಲಿ ಇದ್ದವು. ತಾಮ್ರಕ್ಕೆ ನೀರನ್ನು ಶುದ್ಧಿಗೊಳಿಸುವ ಗುಣವಿರುವುದರಿಂದ, ನದಿಗಳಲ್ಲಿ ತಾಮ್ರದ ನಾಣ್ಯಗಳನ್ನು ಹಾಕಿದಲ್ಲಿ ನದಿಯ ನೀರು ಶುದ್ಧವಾಗುತ್ತದೆ. ಈ ನೀರನ್ನು ಕುಡಿಯುವವರ ಇಷ್ಟೋ ಖಾಯಿಲೆಗಳು ದೂರವಾಗುತ್ತವೆ.

* ಉಪವಾಸವಿರುವುದು…
ಹಿಂದೂಗಳಲ್ಲಿ ಬಹಳಷ್ಟು ಮಂದಿ ವಾರದಲ್ಲಿ ಯಾವುದಾದರು ಒಂದು ದಿನ ದೇವರ ಹೆಸರಲ್ಲಿ ಉಪವಾಸವಿರುತ್ತಾರೆ. ಆಯುರ್ವೇದದ ಪ್ರಕಾರ ಉಪವಾಸವಿರುವುದು ಒಳ್ಳೆಯದಂತೆ. ಉಪವಾಸವಿದ್ದ ಸಮಯದಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಸಂಪೂರ್ಣ ವಿಶ್ರಾಂತಿ ಲಭಿಸಿ, ದೇಹದಲ್ಲಿರುವ ಕಲ್ಮಷಗಳು ಹೊರದೂಡಲ್ಪಡುತ್ತವೆ. ಇದರಿಂದಾಗಿ ದೇಹ ತನಗೆ ತಾನೇ ಸರಿಪಡಿಸಿಕೊಳ್ಳುತ್ತದಂತೆ. ಉಪವಾಸವಿರುವುದರಿಂದ ಸಕ್ಕರೆ ಖಾಯಿಲೆ,ಹೃದಯ ಸಂಬಂಧಿ ಖಾಯಿಲೆ, ಕ್ಯಾನ್ಸರ್, ಬಾಕ್ಟೀರಿಯಾಗಳಿಂದ ಉಂಟಾಗಬಹುದಾದ ಸೊಂಕುಗಳು ಬರುವುದಿಲ್ಲವಂತೆ.

Comments are closed.