ಆರೋಗ್ಯ

ಆಹಾರ ರುಚಿಯಾಗಿರಲು ಸಾಸ್ ಗಳನ್ನು ಹೆಚ್ಚಾಗಿ ಬಳಸುತ್ತಿರಾ…ಆದರೆ ಇದನ್ನೊಮ್ಮೆ ಓದಿ…!

Pinterest LinkedIn Tumblr

ಎಲ್ಲರಿಗೂ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವ ಆಸೆ ಇರುತ್ತದೆ. ಅದಕ್ಕಾಗಿ ಅವರು ಹರ ಸಾಹಸ ಪಡುತ್ತಾರೆ. ಜಿಮ್. ವ್ಯಾಯಾಮ. ಆಹಾರ. ಹೀಗೆ ಹಲವಾರು ರೀತಿಯಿಂದ ತಮ್ಮ ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಾರೆ. ಅವರ ಆಹಾರ ಕ್ರಮಗಳಲ್ಲಿ ಸಾಸ್ ಗಳನ್ನು ಹೆಚ್ಚಾಗಿ ಬಳಸುತ್ತಾರೆ ಆದರೆ ಕೆಲವು ರೀತಿಯ ಸಾಸ್ ಗಳಲ್ಲೂ ಅವರ ತೂಕ ಹೆಚ್ಚುತ್ತದೆ ಎಂದು ಗೊತ್ತಿಲ್ಲ.

ಚೀಸ್ ಮತ್ತು ಕ್ರೀಮ್ ಗಳನ್ನು ಒಳಗೊಂಡಿರುವ ಸಾಸ್ ಗಳಲ್ಲಿ ತಮ್ಮ ತೂಕವನ್ನು ಹೆಚ್ಚು ಮಾಡುವ ಅಂಶಗಳು ಇರುತ್ತವೆ. ಆದರೆ ಕೆಲವು ಸಾಸ್ ಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಅವುಗಳನ್ನು ತಿಳಿಯೋಣ..

ಕೆಲವೊಂದು ಸಾಸ್‌ಗಳಲ್ಲಿ ನ್ಯೂಟ್ರಿಟೀವ್ ಮೌಲ್ಯ ಇರುತ್ತದೆ.ಜೊತೆಗೆ ಇದು ರುಚಿಯನ್ನು ಸಹ ಹೆಚ್ಚಿಸುತ್ತದೆ. ಪೇಸ್ಟೋ ಸಾಸ್ ಆಲೀವ್ ಆಯಿಲ್‌ ಕೆಲವೊಂದು ಕೊಬ್ಬಿನ ಅಂಶಗಳನ್ನು ಒಳಗೊಂಡಿರುವ ಪೇಸ್ಟೋ ಸಾಸ್ ನಟ್‌ಗಳ ಉತ್ತಮತೆಯನ್ನು ತನ್ನಲ್ಲಿ ಪಡೆದುಕೊಂಡಿದೆ.

ಸಿಲಂತ್ರೋ ಮತ್ತು ಬೇಸಿಲ್ ಗಿಡಮೂಲಿಕೆಗಳು ನಿಮ್ಮ ಕಿಡ್ನಿಯನ್ನು ಆರೋಗ್ಯವಾಗಿರಿಸುತ್ತವೆ. ಭಾರತೀಯ ಹುಳಿ ಚಟ್ನಿ ವಿನೇಗರ್‌ನಲ್ಲಿ ನೆನೆಸಿ ತಯಾರಿಸಲಾದ ಈ ಹುಳಿ ಚಟ್ನಿ ತನ್ನದೇ ವಿಶೇಷ ರುಚಿಯನ್ನು ಒಳಗೊಂಡಿದೆ. ನಮ್ಮ ರೋಗನಿರೋಧಕ ಶಕ್ತಿಯನ್ನು ವರ್ಧಿಸುವ ವಿಟಮಿನ್ ಸಿ ಅಂಶ ಇದರಲ್ಲಿ ಹೇರಳವಾಗಿದೆ.

ವಾಸ್ಬಿ ಸುಶಿ ಫುಡ್ ಅನ್ನು ರುಚಿಕರವನ್ನಾಗಿಸುವ ಜಪಾನಿ ಗಾರ್ನಿಶಿಂಗ್ ಕೋಂಡಿಮೆಂಟ್ ಆಗಿದೆ. ಇದು ಕ್ಯಾನ್ಸರ್ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.

ಸಾಲ್ಸಾ ಸಾಸ್ ಟೊಮೇಟೊಗಳಿಂದ ಉತ್ಪನ್ನವಾಗುವ ಕ್ಯಾನ್ಸರ್ ನಿರೋಧಕ ಆಂಟಿ – ಆಕ್ಸಿಡೆಂಟ್‌ಗಳು ಇದರಲ್ಲಿ ಇರುವುದರಿಂದ ಇದು ಆರೋಗ್ಯಕಾರಿಯಾಗಿದೆ.

ಗುಕಾಮೋಲ್ ಅವೋಕಾಡೋ ಮತ್ತು ಲೈಮ್‌ನಿಂದ ವಿಭಾಗಿಸಲಾದ ಗುಕಾಮೋಲ್ ಸಾಸ್ ನಲ್ಲಿ ವಿಟಮಿನ್ ಇ ಹೇರಳವಾಗಿದೆ.

ಪುದೀನಾ ಚಟ್ನಿ ನ್ಯೂಟ್ರಿಶಿಯನ್ ಅಂಶಗಳನ್ನು ಹೇರಳವಾಗಿ ಹೊಂದಿರುವ ಭಾರತೀಯ ಸಾಸ್ ಆಗಿದೆ.

ಟಬಾಸ್ಕೋ ಸಾಸ್ ಇದು ತುಂಬಾ ಖಾರವಾಗಿರುವುದರಿಂದ ಇದನ್ನು ಟೊಮೇಟೊ ಮತ್ತು ಚಿಲ್ಲಿ ಪೆಪ್ಪರ್ ಸಾಸ್‌ನೊಂದಿಗೆ ಸವಿಯಬಹುದು.

ಟೋಮೇಟೋ ಬೆಳ್ಳುಳ್ಳಿ ಚಟ್ನಿಯ ರುಚಿಯು ಉತ್ತಮವಾಗಿದ್ದು. ಇದು ನಮ್ಮ ಹೃದಯವನ್ನು ಆರೋಗ್ಯವಾಗಿರಿಸುತ್ತದೆ.

ತಡ್ಸಿಕಿ ಸಾಸ್ ಯೋಗರ್ಟ್ ಮತ್ತು ಆಲೀವ್ ಆಯಿಲ್‌ನ ಮಿಶ್ರಣದಿಂದ ತಯಾರಿಸಲಾದ ತಡ್ಸಿಕಿ ಸಾಸ್ ಒಮೇಗಾ – 3 ಆಸಿಡ್‌ನಿಂದ ನಿಮ್ಮ ಹೃದಯಕ್ಕೆ ಆರೋಗ್ಯಕಾರವಾಗಿದೆ.

ವರ್ಸಟರ್‌ಶೈರ್ ಸಾಸ್ ಇದು ಐರನ್ ಮತ್ತು ವಿಟಮಿನ್ ಬಿ6 ಅನ್ನು ಅಧಿಕ ಪ್ರಮಾಣದಲ್ಲಿ ಒಳಗೊಂಡಿರುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಾಗಾಗಿ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಈ ಸಾಸ್ ಗಳನ್ನು ಉಪಯೋಗಿಸಿ ಉಪಯೋಗ ಕಂಡುಕೊಳ್ಳಿ.

Comments are closed.