ಕರ್ನಾಟಕ

ಎಲೆಕ್ಷನ್‌ ವೇಳೆ ಗೂಬೆಗೆ ಡಿಮ್ಯಾಂಡ್‌;ಹಕ್ಕಿ ಸಹಿತ ಇಬ್ಬರು ಅರೆಸ್ಟ್‌!

Pinterest LinkedIn Tumblr


ಕೊಳ್ಳೆಗಾಲ: ತಾಲೂಕಿನಲ್ಲಿ ಚುನಾವಣೆ ವೇಳೆ ಹಲವರು ಗೂಬೆಗಳನ್ನು ಹಿಡಿಯುವುದರಲ್ಲಿ ಮಗ್ನರಾಗಿದ್ದಾರೆ. ಇದಕ್ಕೆ ಕಾರಣವಾಗಿರುವುದು ರಾಜಕಾರಣಿಗಳಿಂದ ಹಕ್ಕಿಗೆ ಭಾರೀ ಬೇಡಿಕೆ ಬಂದಿರುವುದು.

ಬುಧವಾರ ಕಲ್ಲಗುಂಡಿಯಲ್ಲಿ ಗೂಗೆ ಸಹಿತ ಇಬ್ಬರನ್ನು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧಿತರು ಮಾದೇಶ ಮತ್ತು ರಂಗಸ್ವಾಮಿ ಎಂದು ತಿಳಿದು ಬಂದಿದೆ. ಗೂಬೆ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಬಲೆಗೆ ಬಿದ್ದಿದ್ದಾರೆ. ಕಳೆದ ತಿಂಗಳಿನಲ್ಲಿ ಇಬ್ಬರು ಗೂಬೆ ಸಹಿತ ಸಿಕ್ಕಿ ಬಿದ್ದಿದ್ದರು.

ಕೆಲ ರಾಜಕಾರಣಿಗಳು ಗೆಲುವಿಗಾಗಿ ವಾಮಮಾರ್ಗ ಹಿಡಿದಿದ್ದು, ಗೂಬೆ ಖರೀದಿಸಿದರೆ ಗೆಲುವ ಖಚಿತ ಎನ್ನುವ ಜೋತಿಷಿಗಳ ಸಲಹೆಯಂತೆ ಹಕ್ಕಿ ಖರೀದಿಸಲು ಮುಂದಾಗುತ್ತಿದ್ದಾರೆ.

-ಉದಯವಾಣಿ

Comments are closed.