ಆರೋಗ್ಯ

ನಿಮ್ಮ ಸೆಕ್ಸ್​ ಲೈಫ್​ ಸಾಮಾರ್ಥ್ಯ ಹೆಚ್ಚಿಸಲು ಮಾತ್ರೆಗಳು ಬೇಕಿಲ್ಲ…! ಇಲ್ಲಿದೆ ಟಿಪ್ಸ್….

Pinterest LinkedIn Tumblr

ಮದುವೆಯಾದ ಹಲವು ಪುರುಷರು ತಮ್ಮ ಸಂಗಾತಿಯನ್ನ ಲೈಂಗಿಕವಾಗಿ ಸಂತೃಪ್ತಿಯಿಂದ ಇಡುವುದು ಇಂದು ಬಹಳ ಕಷ್ಟಕಾರಿಯಾಗಿ ಪರಿಣಮಿಸುತ್ತಿದೆ. ಬದಲಾದ ಜೀವನ ಶೈಲಿ, ಆಹಾರ, ಕುಡಿತ, ಸಿಗರೇಟ್ ಮುಂತಾದ ಹ್ಯಾಬಿಟ್​ಗಳು ಕೂಡ ಪುರುಷರ ಲೈಂಗಿಕ ಸಾಮರ್ಥ್ಯವನ್ನು ಕುಗ್ಗಿಸುತ್ತಿದೆ. ಹೀಗಾಗಿ, ಪುರುಷರನ್ನು ಲೈಂಗಿಕ ಸಾಮಾರ್ಥ್ಯ ಹೆಚ್ಚಿಸಲು ಮಾರುಕಟ್ಟೆಯಲ್ಲಿ ಅನೇಕ ಮಾತ್ರೆಗಳು ಕೂಡ ದೊರೆಯುತ್ತವೆ. ಆದ್ರೆ ನೆನಪಿರಲಿ ನಿಮ್ಮ ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ಅತಿ ಸರಳ ಹಾದಿಗಳು ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿಯೇ ಇವೆ.

ಸದಾ ಚಟುವಟಿಕೆಯಿಂದಿರಿ
ಸದಾ ಚಟುವಟಿಕೆಯಿಂದ ಇರುವುದು ಹಾಗೂ ನಿಯಮಿತ ವ್ಯಾಯಾಮದಿಂದ ನಿಮ್ಮ ಲೈಂಗಿಕ ಸಾಮಾರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಪ್ರತಿದಿನ ಕನಿಷ್ಟ ಅರ್ಧಗಂಟೆ ವ್ಯಾಯಾಮದಿಂದ ನಿಮ್ಮ ಮಧುರ ರಾತ್ರಿಗಳು ದೀರ್ಘವಾಗಲಿವೆ. ಯೋಗ, ಪ್ರಾಣಾಯಾಮ, ಸರಳ ಜಿಮ್ ವ್ಯಾಯಾಮ, ಓಟ, ವಾಕಿಂಗ್ ಇವು ನಿಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ನಿಮ್ಮ ಆಯುಷ್ಯ ಹಾಗೂ ಲೈಂಗಿಕ ಆರೋಗ್ಯ ಎರಡನ್ನೂ ದೀರ್ಘಗೊಳಿಸುತ್ತೆ.

ಇವುಗಳನ್ನು ಸೇವಿಸಿ..!

ಈರುಳ್ಳಿ, ಬೆಳ್ಳುಳ್ಳಿ ರಕ್ತ ಪರಿಚಲನೆಗೆ ತುಂಬಾ ಸಹಾಯಕಾರಿ. ಲೈಂಗಿಕ ಸಾಮರ್ಥ್ಯ ರಕ್ತ ಪರಿಚಲನೆಯ ಮೇಲೆ ಅವಲಂಬಿಸಿದ್ದರಿಂದ ಈ ತರಕಾರಿಗಳು ನಿಮ್ಮ ಸರಸ ಸಾಮರ್ಥ್ಯವನ್ನ ಹೆಚ್ಚಿಸಲಿವೆ. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಂ ಕಂಟೆಂಟ್​ ಇರುವುದರಿಂದ ಬಾಳೆಹಣ್ಣು ಸೇವನೆ ಕೂಡ ಲೈಂಗಿಕ ಸಾಮರ್ಥ್ಯ ವೃದ್ಧಿಸಲು ಸಹಕಾರಿ.

ಒತ್ತಡದ ಜೀವನಶೈಲಿ ಅಪಾಯಕಾರಿ:ನಿಮ್ಮ ನಿತ್ಯ ಜೀವನದಲ್ಲಿ ಅತಿ ಒತ್ತಡವಿದ್ದಲ್ಲಿ ಕಡಿಮೆ ಮಾಡಿಕೊಳ್ಳಿ. ತೀವ್ರ ಒತ್ತಡದ ಜೀವನದಿಂದ ನಿಮ್ಮ ಹೃದಯ ಬಡಿತ ಹಾಗೂ ರಕ್ತದೊತ್ತಡದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಇದು ನಿಮ್ಮ ಲೈಂಗಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತದೆ.

ಇವುಗಳಿಂದ ದೂರವಿರಿ

ಕುಡಿತ ಮತ್ತು ಧೂಮಪಾನ ಚಟಗಳಿಂದ ನಿಮ್ಮ ಲೈಂಗಿಕ ಸಾಮರ್ಥ್ಯ ಕುಸಿಯುವ ಸಾಧ್ಯತೆಯಿದೆ ಹೀಗಾಗಿ ಇಂತಹ ದುಷ್ಚಟಗಳಿಂದ ದೂರವಿರಿ. ಇನ್ನು ಎಳೆ ಬಿಸಿಲು ಕಾಯಿಸುವುದರಿಂದ ಕೂಡ ನಿಮ್ಮ ದೇಹದಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಾಗುತ್ತದೆ.

Comments are closed.