ಮನೋರಂಜನೆ

ಟಾಲಿವುಡ್‌ನಲ್ಲಿ ನಟಿಯರನ್ನು ಲೈಂಗಿಕ ಉದ್ದೇಶಕ್ಕೆ ಬಳಸಿಕೊಳ್ಳುವ ಕಾರ್ಯ ಹೇಗೆ ನಡೆಯುತ್ತೆ ಗೊತ್ತಾ..? ಅದಕ್ಕೆಂದೇ ಕೋಡ್ ವರ್ಡ್ಸ್ ಇದೆಯಂತೆ !

Pinterest LinkedIn Tumblr

ಟಾಲಿವುಡ್‌ನಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ (ನಟಿಯರನ್ನು ಲೈಂಗಿಕ ಉದ್ದೇಶಕ್ಕೆ ಬಳಸಿಕೊಳ್ಳುವುದು) ಕರಾಳ ದಂಧೆ ವಿರುದ್ಧ ನಟಿ ಶ್ರೀರೆಡ್ಡಿ ಸಿಡಿದೇಳುವ ಮೂಲಕ ಇಡೀ ಚಿತ್ರರಂಗ ಈಗ ಬೆಚ್ಚಿ ಬಿದ್ದಿದೆ. ಈ ಬಗ್ಗೆ ಹಲವಾರು ಮಂದಿ ಪ್ರತಿಕ್ರಿಯಿಸುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ನಟಿಸಿರುವ ಕನ್ನಡ ನಟಿಯರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ವಿಶೇಷ ಎಂದರೆ ನಟಿ ಶ್ರೀರೆಡ್ಡಿಯ ಅರೆನಗ್ನ ಪ್ರತಿಭಟನೆ ಬಗ್ಗೆ ತೆಲುಗಿನ ಖ್ಯಾತನಾಮರು ಯಾರೂ ತುಟಿ ಬಿಚ್ಚದಿರುವುದು. ಇನ್ನೊಂದು ಕಡೆ ಶ್ರೀರೆಡ್ಡಿ ಅರೆನಗ್ನ ಪ್ರತಿಭಟನೆ ಮಾಡಿದ ಮರುದಿನವೇ ಆಕೆ ಉಳಿದುಕೊಂಡಿರುವ ಬಾಡಿಗೆ ಮನೆ ಖಾಲಿ ಮಾಡುವಂತೆ ಮಾಲೀಕರು ಹೇಳಿದ್ದಾರೆ.

ತೆಲುಗು ಕಲಾವಿದರ ಸಂಘ ಮೂವಿ ಆರ್ಟಿಸ್ಟ್ಸ್ ಅಸೋಸಿಯೇಷನ್ (MAA) ಶ್ರೀರೆಡ್ಡಿ ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿದೆ. ಖ್ಯಾತ ನಿರ್ದೇಶಕರೊಬ್ಬರ ಬಗ್ಗೆ ಶ್ರೀರೆಡ್ಡಿ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದರು. ಇದನ್ನು ‘ಮಾ’ ಗಮನಕ್ಕೂ ತಂದಿದ್ದರು. ಆ ನಿರ್ದೇಶಕರಿಗೆ ಸಮನ್ಸ್ ಜಾರಿ ಮಾಡಿದ ಕಾರಣ ಪ್ರಕರಣವನ್ನು ಹಿಂಪಡೆದಿದ್ದರು.

ಕಾಸ್ಟಿಂಗ್ ಕೌಚ್ ವಿರುದ್ಧ ನಟಿ ಶ್ರೀರೆಡ್ಡಿ ಅರೆನಗ್ನ ಪ್ರತಿಭಟನೆ
‘ಆ ನಿರ್ದೇಶಕರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದ್ದೆವು ಆದರೆ ದೂರಿನ ದಾಖಲೆ ಇರಲಿಲ್ಲ’ ಎಂದಿದ್ದಾರೆ ಕಲಾವಿದರ ಸಂಘದ ನಟಿ ಹೇಮಾ. ಈ ರೀತಿಯ ದೂರುಗಳನ್ನು ಚಿತ್ರರಂಗದವರು ತಮ್ಮದೇ ರೀತಿಯಲ್ಲಿ ಬಗೆಹರಿಸಿಕೊಳ್ಳುತ್ತಾರೆ.

‘ನಟಿಯೊಬ್ಬರು ತನ್ನನ್ನು ಲೈಂಗಿಕ ದುರ್ಬಳಕೆ ಮುಂದಾಗಿದ್ದ ನಿರ್ದೇಶಕರೊಬ್ಬರ ಬಗ್ಗೆ ದೂರು ನೀಡಿದ್ದರು. ಅವರನ್ನು ಕರೆಸಿ ವಾಗ್ದಂಡನೆ ಮಾಡಿದೆವು. ಬಳಿಕ ಅವರು ಆ ನಟಿಯ ಪಾದ ಮುಟ್ಟಿ ಕ್ಷಮಿಸಿ ಎಂದು ಬೇಡಿಕೊಂಡರು’ ಎಂದಿದ್ದಾರೆ ‘ಮಾ’ ಅಧ್ಯಕ್ಷರಾದ ಶಿವಾಜಿರಾಜ.

ನಿಕೇಶಾ ಪಟೇಲ್ ಸಹ ಟಾಲಿವುಡ್‍ನಲ್ಲಿ ಕಾಸ್ಟಿಂಗ್ ಕೌಚ್ ನಡೆಯುತ್ತಿದೆ ಎಂದು ಕಳೆದ ವರ್ಷ ಆರೋಪಿಸಿದ್ದರು. ಹಾಲಿವುಡ್ ಮಟ್ಟದಲ್ಲಿ ಟಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಇದೆ. ನಾನೂ ಸಹ ಅದರ ಬಲಿಬಶು ಎಂದಿದ್ದರು. ಕೆಲ ವರ್ಷಗಳ ಹಿಂದೆ ನಟಿಯೊಬ್ಬರು ಟಾಲಿವುಡ್‌ನ ಜನಪ್ರಿಯ ನಿರ್ದೇಶಕರೊಬ್ಬರ ವಿರುದ್ಧ ದೂರಿದ್ದರು. ಬಳಿಕ ತೆಲುಗು ಚಿತ್ರಗಳಲ್ಲಿ ನಟಿಸುವುದನ್ನೇ ಬಿಟ್ಟುಬಿಟ್ಟರು.

ಇಷ್ಟಕ್ಕೂ ಕಾಸ್ಟಿಂಗ್ ಕೌಚ್ ಹೇಗೆ ನಡೆಯುತ್ತದೆ. ಇದಕ್ಕೆ ನಾನಾ ಕೋಡ್ ವರ್ಡ್ಸ್, ಬೇರೆಬೇರೆ ರೀತಿಯಲ್ಲಿ ವ್ಯವಹರಿಸಲಾಗುತ್ತದೆ. ಸ್ವಲ್ಪ ‘ಕೋಪರೇಟ್’ ಮಾಡಿ ಎನ್ನುವುದು. ಕಮಿಟ್‌ಮೆಂಟ್, ಪ್ಯಾಕೇಜ್ ಡೀಲ್ ಎಂಬ ಪದಗಳನ್ನು ಬಳಸಲಾಗುತ್ತಿದೆ.

ಕಮಿಟ್‌ಮೆಂಟ್, ಪ್ಯಾಕೇಜ್, ಕೋಆಪರೇಟ್ ಏನಿದರ ಅರ್ಥ?

ನಿರ್ಮಾಪಕ ಅಥವಾ ನಿರ್ದೇಶಕರು ಮುಂಬೈನಲ್ಲಿ ರೂಮ್ ಒಂದನ್ನು ಬುಕ್ ಮಾಡುತ್ತಾನೆ. ಅಲ್ಲೇ ಆಡಿಷನ್ಸ್ ನಡೆಯುತ್ತವೆ. ಅಲ್ಲಿ ಉದಯಯೋನ್ಮುಖ ನಟಿ ಫೋಟೋಗಳನ್ನು ಸ್ವೀಕರಿಸುವುದು, ಸಾಧ್ಯವಾದರೆ ಸ್ಕ್ರೀನ್ ಟೆಸ್ಟ್ ಮಾಡುವುದು ನಡೆಯುತ್ತದೆ.

ಆ ಹೋಟೆಲ್‍ನಲ್ಲೇ ‘ಪ್ಯಾಕೇಜ್’ ಡೀಲ್ ಬಗ್ಗೆ ಮಾತುಕತೆಯಾಗುತ್ತದೆ. ಇದನ್ನೇ ಟಾಲಿವುಡ್‍ನಲ್ಲಿ ‘ಕಮಿಟ್‌ಮೆಂಟ್’ ಎಂದು ಕರೆಯುತ್ತಾರೆ. ಹಾಗೆಂದರೆ ಲೈಂಗಿಕ ಉದ್ದೇಶಕಕ್ಕೂ ತಾನು ರೆಡಿ ಎಂದರ್ಥ. ಇದರಲ್ಲಿ ಯಾವುದೇ ಬಲವಂತ ಇರುವುದಿಲ್ಲ. ಅದು ಆ ನಟಿಯ ಇಚ್ಛೆಗೆ ಬಿಟ್ಟ ವಿಚಾರ. ಕೆಲವರು ಇದನ್ನು ಒಪ್ಪುತ್ತಾರೆ, ಇನ್ನೂ ಕೆಲವರು ಮುಖಕ್ಕೆ ಮಂಗಳಾರತಿ ಮಾಡಿ ಬರುತ್ತಾರೆ.

ಇದು ಕೇವಲ ಹೀರೋಯಿನ್‍ಗಳಿಗೆ ಮಾತ್ರ ಸೀಮಿತವಲ್ಲ. ಸಣ್ಣ ಪುಟ್ಟ ಪಾತ್ರಗಳು, ಪೋಷಕ ಪಾತ್ರಗಳನ್ನು ಅರಸಿ ಬರುವವರಿಗೂ ಈ ‘ಕಮಿಟ್‌ಮೆಂಟ್’ ಆಫರ್ ನೀಡಲಾಗುತ್ತದೆ. ‘ಪ್ಯಾಕೇಜ್’ ಡೀಲ್‌ನಲ್ಲಿ ಸಂಭಾವನೆ ಎಲ್ಲವೂ ಸೇರಿರುವ ಕಾರಣ ಕೆಲವರು ಅಂಗೀಕರಿಸುತ್ತಾರೆ. ಇನ್ನೂ ಕೆಲವರು ಬ್ರೇಕ್‍ಗಾಗಿ ಈ ಆಫರ್ ಒಪ್ಪುತ್ತಾರೆ.

Comments are closed.