ಆರೋಗ್ಯ

ಯೋಗದಿಂದ ಮೈಗ್ರೇನ್ನನ್ನು ಶಾಶ್ವತವಾಗಿ ಹೊಡೆದು ಓಡಿಸಲು ಸಾಧ್ಯ

Pinterest LinkedIn Tumblr

ಇತ್ತೀಚಿನ ಕೆಲಸ .ಒತ್ತಡ. ಸುತ್ತಾಟ. ಜವಾಬ್ದಾರಿ. ಇವುಗಳೆಲ್ಲವನ್ನು ನಿಭಾಯಿಸುವ ಒಳಗೆ ತಲೆನೋವು ಬಂದು ಸೇರುತ್ತದೆ.

ಅದರಲ್ಲೂ ಇತ್ತೀಚೆಗೆ ಮೈಗ್ರೇನ್ ತಲೆನೋವು ಸಾಮಾನ್ಯವಾಗಿ ಬಿಟ್ಟಿದೆ. ಇದು ಬಂದು ಸೇರಿದರೆ ಅವತ್ತಿನ ಕೆಲಸ ಕಾರ್ಯಗಳಿಗೆ ಫುಲ್ ಸ್ಟಾಪ್ ಇಟ್ಟಂತೆ.ಇದಕ್ಕೆ ಯಾವ ರೀತಿಯ ಔಷಧಿ ತೆಗೆದುಕೊಂಡರು ಕ್ಷಣಿಕ ಮಾತ್ರ. ಮತ್ತೆ ಅದೇ ನೋವು ಬರುತ್ತದೆ. ಆದರೆ ಈ ಮೈಗ್ರೇನ್ ತಲೆನೋವನ್ನು ಶಾಶ್ವತವಾಗಿ ಹೊಡೆದು ಓಡಿಸಬಹುದು ಹೇಗೆಂದು ಚಿಂತಿಸುತ್ತಿದ್ದಿರ.

ನಮ್ಮ ಹಿರಿಯರು ನಮಗಾಗಿ ಕೊಟ್ಟಿರುವ ಉಡುಗೊರೆ ಯೋಗಾಸನ. ಇತ್ತೀಚಿನ ದಿನಗಳಲ್ಲಿ ಈ ಯೋಗಾಸನವನ್ನು ಚಿಕ್ಕ ಮಕ್ಕಳಿಂದಲೇ ಕಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಈ ಯೋಗಸನವು ಪೂರ್ಣವಾಗಿ ನಮ್ಮ ದೇಹ. ಮನಸ್ಸು ಎಲ್ಲವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ಒಂದು ಸಾದನವೆಂದು ಸಹ ಹೇಳಬಹುದು.ಪ್ರತಿನಿತ್ಯ ಯೋಗಾಸನವನ್ನು ಮಾಡುವುದರಿಂದ ನಾವು ದೈಹಿಕವಾಗಿ ಮಾನಸಿಕವಾಗಿ ಎಲ್ಲ ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆದು ಆರಾಮದಾಯಕ ಜೀವನವನ್ನು ನೆಡೆಸಬಹುದು. ಪ್ರತಿನಿತ್ಯದ ಕೆಲವು ಯೋಗಸನದಿಂದ ನಮಗೆ ಬರುವ ಮೈಗ್ರೇನ್ ತಲೆನೋವನ್ನು ಹೋಗಲಾಡಿಸಬಹುದು.

ಹಾಗಾದರೆ ಯಾವ ಯೋಗದಿಂದ ಎಂಬುದನ್ನು ನೋಡೋಣ .

ನೇರವಾಗಿ ನಿಂತು ಮುಂದಕ್ಕೆ ಬಗ್ಗುವ ಈ ಯೋಗಾಸನವು ತಲೆಗೆ ರಕ್ತಚಲನೆಯನ್ನು ಹೆಚ್ಚಿಸಿ, ಸೈನಸ್ಗಳನ್ನೂ ಖಾಲಿಗೊಳಿಸುತ್ತದೆ. ನರವ್ಯವಸ್ಥೆಯನ್ನು ಈ ಯೋಗಾಸನವು ಪುನಶ್ಚೇತಗೊಳಿಸುವುದರೊಡನೆ ದೇಹದ ಒತ್ತಡವನ್ನೂ ನಿವಾರಿಸುತ್ತದೆ.

ಸೇತು ಬಂದಾಸನ. ಇದನ್ನು ಮಾಡುವುದರಿಂದ ನಮ್ಮ ರಕ್ತದ ಚಲನೆಯು ಮೆದುಳಿಗೆ ವೇಗವಾಗಿ ಚಲಿಸುತ್ತದೆ.ಹಾಗಾಗಿ ನಮ್ಮ ರಕ್ತದ ಒತ್ತಡವು ಹತೋಟಿಯಲ್ಲಿ ಇರುತ್ತದೆ.ನಮ್ಮ ಮನಸ್ಸು ಎಲ್ಲ ಒತ್ತಡಗಳಿಂದ ದೂರವಾಗಿ ಶಾಂತ ಸ್ವರೂಪವಾಗಿ ಮನಸ್ಸು ವಿಶ್ರಾಂತಿ ಪಡೆಯಲು ತುಂಬಾ ಸಹಾಯವಾಗುತ್ತದೆ.

ಬಾಲಾಸನ ಇದನ್ನು ಮಗುವಿನ ಭಂಗಿ ಎಂದು ಸಹ ಕರೆಯುತ್ತಾರೆ. ನಮ್ಮ ಮೊಣಕಾಲುಗಳ ಮೇಲೆ ವಜ್ರಸನದಿಂದ ಕುಳಿತು ನಿಧಾನವಾಗಿ ಉಸಿರಾಡುತ್ತ ನಮ್ಮ ದೇಹವನ್ನು ಮುಂದೆ ಬಾಗಿಸಿ ತಲೆಯನ್ನು ನೆಲಕ್ಕೆ ಬಾಗಿಸಬೇಕು. ಇಗೆ ಮಾಡುವುದರಿಂದ ನಮ್ಮ ದೇಹಕ್ಕೆ ರಿಲ್ಯಾಕ್ಸ್ ಸಿಗುತ್ತದೆ. ನಮ್ಮ ಒತ್ತಡದಿಂದ ದೂರಬಂದು ಮನಸ್ಸನ್ನು ಶಾಂತಚಿತ್ತವಾಗಿ ಇಟ್ಟುಕೊಳ್ಳಬಹುದು. ನಮ್ಮ ಮೂಳೆಗಳು ಫ್ರೀ ಆಗುತ್ತವೆ.

ಮಾರ್ಜರಿ ಆಸನ ಇದನ್ನು ಬೆಕ್ಕಿನ ಭಂಗಿ ಎಂದು ಸಹ ಹೇಳುತ್ತಾರೆ. ಈ ಆಸನವನ್ನು ಮಾಡುವುದರಿಂದ ನಮ್ಮ ದೇಹದ ರಕ್ತ ಚಲನೆ ಹೆಚ್ಚಾಗಿ. ಮನಸ್ಸು ಹಗುರವಾಗುತ್ತದೆ. ಯಾವುದೇ ರೀತಿಯ ಉಸಿರಾಟದ ಸಮಸ್ಯೆ ಇರುವುದಿಲ್ಲ.

ಪಶ್ಚಿಮೋತ್ತನಾಸನ ಇದು ಮಾಡುವುದು ಹೇಗೆಂದರೇ ನಮ್ಮ ಎರಡು ಕಾಲುಗಳನ್ನು ಚಾಚಿ ಅದರ ಮೇಲೆ ದೇಹವನ್ನು ಭಾಗಿಸುವುದು. ಇದು ನಮ್ಮ ಎಲ್ಲ ಒತ್ತಡಗಳನ್ನು ಕಳೆದು ಮನಸ್ಸಿಗೆ ನೆಮ್ಮದಿ ಉಂಟುಮಾಡುತ್ತದೆ.

ಅಧೋಮುಖ ಶ್ವಾನಸನ. ಇದನ್ನು ನಾಯಿಯ ಭಂಗಿ ಎಂದು ಹೇಳುತ್ತಾರೆ.ಇದು ನಮ್ಮ ಮೆದುಳಿಗೆ ರಕ್ತ ಸಂಚಾರವನ್ನು ಸುಲಭಗೊಳ್ಳಿಸಿ ತಮ್ಮ ಎಲ್ಲ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಪದ್ಮಾಸನ ಇದು ನಮ್ಮ ವಿಶ್ರಾಂತಿಗೆ ಹೆಸರು ವಾಸಿಯಾಗಿರುವ ಆಸನ ಇದು ನಮಗೆ ನೆಮ್ಮದಿ ಕೊಟ್ಟು ನಮ್ಮ ತಲೆನೋವನ್ನು ನಿವಾರಿಸುತ್ತದೆ.

ಯೋಗಾಭ್ಯಾಸಗಳನ್ನು ಮಾಡಿ ಮುಗಿಸಿದ ನಂತರ ಕೊನೆಯದಾಗಿ ಮಾಡುವ ಯೋಗಾಸನವೇ ಶವಾಸನ. ಈ ಆಸನದಿಂದ ದೇಹವು ಆಳವಾದ, ಧ್ಯಾನಸ್ಥ ಸ್ಥಿತಿಯೊಳಗೆ ಹೊಕ್ಕುತ್ತದೆ. ಈ ಆಸನದಿಂದಾಗಿ ದೇಹದಲ್ಲಿರುವ ಒತ್ತಡದ ನಿವಾರಣೆಯಾಗಿ, ದೇಹವು ಪುನಶ್ಚೇತವಾಗುತ್ತದೆ.

ಈ ಎಲ್ಲ ಆಸನಗಳು ನಮ್ಮ ಮನಸ್ಸಿನ ಎಲ್ಲ ರೀತಿಯ ಕೆಲಸ. ಒತ್ತಡ. ಗಳಿಂದ ನಮ್ಮನ್ನು ದೂರ ಮಾಡಿ ನಮ್ಮ ಮನಸ್ಸಿಗೆ ಶಾಂತಿಯನ್ನು ತಂದುಕೊಡುತ್ತವೆ.ಆಗು ನಮ್ಮ ಮೈಗ್ರೇನ್ ತಲೆ ನೋವು ನಮ್ಮ ಹತ್ತಿರ ಸುಳಿಯದ ಹಾಗೇ ನೋಡಿಕೊಳ್ಳುತ್ತದೆ.

Comments are closed.