ಆರೋಗ್ಯ

ಅತ್ಯಂತ ಅಪಾಯಕಾರಿಯಲ್ಲದಿದ್ದರೂ ಕೆಲವು ವಿಚಾರಗಳಿಂದ ಇದು ಅಪಾಯಕಾರಿಯೇ ಸರಿ…..!

Pinterest LinkedIn Tumblr

ಬ್ರಿಟಿಷ್ ಆಡಳಿತದ ಸಂದರ್ಭ ಬ್ರೆಡ್ ದೇಶದಲ್ಲಿ ಪ್ರಸಿದ್ಧವಾಯಿತು. ಇಂದಿನ ದಿನಗಳಲ್ಲಿ ಬಿಝಿ ಶೆಡ್ಯೂಲ್ ಗಳ ನಡುವೆ ಪಟ್ಟಣದ ಜನರಿಗೆ ಬ್ರೆಡ್ ಆಹಾರವಾಗಿಬಿಟ್ಟಿದೆ. ಆದರೆ ತಿನ್ನಲು ರುಚಿಕರವಾಗಿರುವ, ಸುಲಭದಲ್ಲಿ ಲಭ್ಯವಾಗುವ ಬ್ರೆಡ್ ಗಳು ಎಷ್ಟೊಂದು ಅಪಾಯಕಾರಿ ಎಂಬುದು ಬಹುತೇಕ ಜನರಿಗೆ ಗೊತ್ತಿಲ್ಲ. ಬ್ರೆಡ್ ಗಳು ಅತ್ಯಂತ ಅಪಾಯಕಾರಿಯಲ್ಲದಿದ್ದರೂ ಕೆಲವು ವಿಚಾರಗಳಿಂದ ಅವು ಅಪಾಯಕಾರಿಯೇ ಸರಿ.

ಕೆಮಿಕಲ್ ಗಳು: ಭಾರತದಲ್ಲಿ ತಯಾರಿಸಲಾಗುವ ಹೆಚ್ಚಿನ ಬ್ರೆಡ್ ಗಳಿಗೆ ಪೊಟಾಶಿಯಂ ಬ್ರೊಮೇಟ್ ಅನ್ನು ಬಳಸಲಾಗುತ್ತದೆ. ಇದು ಮಾನವನ ಆರೋಗ್ಯಕ್ಕೆ ಅಪಾಯಕಾರಿಯೂ ಹೌದು.

ಲೋಳೆ ಸ್ವಭಾವ: ಮೆದುವಾಗಿರುವ ಬ್ರೆಡ್ ಗಳು ನೀರು ತಾಕುತ್ತಲೇ ಲೋಳೆಯಾಗಿ ಮಾರ್ಪಾಡಾಗುತ್ತದೆ. ಹೊಟ್ಟೆಯೊಳಗೆ ಸೇರಿದ ನಂತರ ಅದು ಲೋಳೆಯಾಗಿ ಪರಿವರ್ತಿತವಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಗೆ ಅಪಾಯಕಾರಿ.

ತೂಕ ಹೆಚ್ಚಳ: ಬ್ರೆಡ್ ಗಳನ್ನು ತಿನ್ನುವುದರಿಂದ ತೂಕ ಹೆಚ್ಚುತ್ತದೆ. ಒಂದು ವೇಳೆ ನೀವು ಹೆಚ್ಚು ಬ್ರೆಡ್ ಗಳನ್ನು ತಿನ್ನುವವರಾಗಿದ್ದರೆ ಉಪ್ಪು, ಸಕ್ಕರೆಯ ಪ್ರಭಾವದಿಂದ ನಿಮ್ಮ ತೂಕ ಹೆಚ್ಚಬಹುದು.

ಅಜೀರ್ಣ ಸಮಸ್ಯೆ: ಬ್ರೆಡ್ ಗಳ ಕರಗುವಿಕೆ ನಿಧಾನವಾಗಿರುವುದರಿಂದ ಜೀರ್ಣಾಂಗ ಕೆಲಸ ಸರಿಯಾಗುವುದಿಲ್ಲ. ಹಾಗಾಗಿ ಅಜೀರ್ಣಕ್ಕೊಳಗಾಗಬಹುದು.

ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಳ: ಅತಿಯಾಗಿ ಬ್ರೆಡ್ ಸೇವನೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಲೂ ಕಾರಣವಾಗಬಹುದು,

ಮೈದ: ಬ್ರೆಡ್ ಗೆ ಹೆಚ್ಚು ಬಳಕೆ ಮಾಡುವುದು ಮೈದ ಹಿಟ್ಟು ಈ ವಿಷಕಾರಿ ಮೈದ ವಸ್ತುವನ್ನ ತಿನ್ನುವುದರಿಂದ ನಮಗೆ ಗೊತ್ತಿಲ್ಲದ ಹಾಗೇ ನಾವು ವಿಷವನ್ನು ತಿನ್ನುವ ಹಾಗೇ ಆಗಿದೆ. ಮೈದಾ ಸೇವಿಸಿದ ಕೂಡಲೇ ಸಕ್ಕರೆ ಅಂಶದಲ್ಲಿ ಏರುಪೇರು ಆಗುತ್ತದೆ ಇದು ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಸದೂತದ ಸ್ರವಿಸುವಿಕೆಗೆ ಅಡ್ಡಿ ಉಂಟು ಮಾಡುತ್ತದೆ. ಇದರಿಂದ ಸಿಟ್ಟು ಅಸಹನೆ ಜಾಸ್ತಿಯಾಗುತ್ತದೆ. ಮೈದಾದಲ್ಲಿ ನಾರಿನ ಅಂಶ ಸಂಪೂರ್ಣವಾಗಿ ತೆಗೆದಿರುವುದರಿಂದ ದೇಹದಲ್ಲಿ ಹೆಚ್ಚು ಕೊಬ್ಬು ಸಂಗ್ರಹವಾಗುತ್ತದೆ. ಇದರಿಂದ ದೇಹದ ತೂಕ ಹೆಚ್ಚಗುತ್ತದೆ.

Comments are closed.