ಕರಾವಳಿ

ಹೆಚ್ಚುವರಿ ಭದ್ರತೆ ಕೋರಿ ಗೃಹ ಇಲಾಖೆಗೆ ಪತ್ರ ಬರೆದ ಸಚಿವ ಪ್ರಮೋದ್ ಮಧ್ವರಾಜ್

Pinterest LinkedIn Tumblr

ಉಡುಪಿ: ಸಚಿವ ಪ್ರಮೋದ್ ಮಧ್ವರಾಜ್ ಹೆಚ್ಚುವರಿ ಭದ್ರತೆ ಕೋರಿ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನಲೆಯಲ್ಲಿ ಕ್ಷೇತ್ರಾದ್ಯಂತ ಪ್ರಚಾರ ಸಭೆಗಳು ಇರುತ್ತದೆ. ಈ ಸಂದರ್ಭದಲ್ಲಿ ಹೆಚ್ಚುವರಿ ಭದ್ರತೆ ನೀಡಬೇಕೆಂದು ಕೋರಿದ್ದೇನೆ.

ಸಂಭವನೀಯ ಅನಾಹುತ ತಪ್ಪಿಸಲು ಹೆಚ್ಚುವರಿ ಭದ್ರತೆ ಕೋರಿ ಪತ್ರ ಬರೆದಿದ್ದೇನೆ. ಅವಘಡ ಆಗದಿರಲಿ ಎಂದು ಮುನ್ನಚ್ಚರಿಕಾ ದೃಷ್ಟಿಯಿಂದ ಪತ್ರ ಬರೆಯಲಾಗಿದೆ. ಆದರೆ ಗೃಹ ಇಲಾಖೆಯಲ್ಲಿ ಏನು ಬೆಳವಣಿಗೆಯಾಗಿದೆಯೆಂದು ಗೊತ್ತಿಲ್ಲ ಗೃಹ ಇಲಾಖೆಯಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಭದ್ರತೆ ಕೊಡೋದು ಬಿಡೋದು ಸರ್ಕಾರಕ್ಕೆ ಬಿಟ್ಟದ್ದು ಎಂದರು.

ಯಾವ ಕಾರಣಕ್ಕೆ ಭದ್ರತೆ ಬೇಕು ಅಂತ ಸಚಿವರು ಪತ್ರದಲ್ಲಿ ಯಾವುದೇ ಕಾರಣ ಕೊಟ್ಟಿಲ್ಲ. ಮುನ್ನಚ್ಚೆರಿಕೆಗೆ ಎಂದಷ್ಟೇ ಬರೆದಿದ್ದಾರೆ ಎನ್ನಲಾಗಿದೆ.

Comments are closed.