ಕರಾವಳಿ

ಕಾಮನ್‌ವೆಲ್ತ್ ಗೇಮ್ಸ್; ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಕುಂದಾಪುರದ ಗುರುರಾಜ್

Pinterest LinkedIn Tumblr

ಗೋಲ್ಡ್‌ಕೋಸ್ಟ್‌: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ಕನ್ನಡಿಗನ ಮೂಲಕ ಭಾರತಕ್ಕೆ ಮೊದಲ ಪದಕ ಲಭಿಸಿದೆ. ಭಾರ ಎತ್ತುವುದರಲ್ಲಿ ಕುಂದಾಪುರದ ಗುರುರಾಜ್‌ ಬೆಳ್ಳಿ ಪದಕ ಜಯಿಸಿದ್ದಾರೆ.

28 ರ ಹರೆಯದ ಗುರುರಾಜ್‌ 56 ಕೆಜಿ ವಿಭಾಗದಲ್ಲಿ ಮೊದಲು 111 ಕೆಜಿ ಭಾರ ಎತ್ತಿ ಬಳಿಕ 138 ಕೆಜಿ ಎತ್ತಿದರು. ಮಲೇಷ್ಯಾದ ಮಹಮದ್‌ ಇಜಾರ್‌ ಒಟ್ಟು 261 ಕೆಜಿ ಎತ್ತುವ ಮೂಲಕ ಚಿನ್ನದ ಪದಕ ತನ್ನದಾಗಿಸಿಕೊಂಡರು.

ಶ್ರೀಲಂಕಾದ ಚತುರಂಗ ಲಕ್ಮಲ್‌ ಅವರು 248 ಕೆಜಿ ಎತ್ತುವ ಮೂಲಕ ಕಂಚಿನ ಪದಕ ಗೆದ್ದರು. ಕುಂದಾಪುರದ ಲಾರಿ ಚಾಲಕನ ಮಗನಾಗಿರುವ ಗುರುರಾಜ್‌ ಮೊದಲು ಕುಸ್ತಿ ಪಟುವಾಗಿದ್ದರು.

Comments are closed.