ಆರೋಗ್ಯ

ಬೇಸಿಗೆ ಸಮಯದಲ್ಲಿ ಪುದೀನಾ ನೀರು ಸೇವಿಸಿದರೆ ತುಂಬಾ ಒಳ್ಳೇದು

Pinterest LinkedIn Tumblr

ಹಿರಿಯರು ಹೇಳುವ ಪ್ರಕಾರ ಪುದೀನಾ ನೀರು ಸೇವಿಸಿದರೆ ಬೇಸಿಗೆ ಸಮಯದಲ್ಲಿ ತುಂಬಾ ಒಳ್ಳೇದು ಎನ್ನುವರು ಬೇಸಿಗೆಯಲ್ಲಿ ನಿಲ್ಲದ ಬಾಯಾರಿಕೆ, ಆಯಾಸ, ಸ್ನಾನ ಮಾಡಿದಂತೆ ಬೆವರು ಹರಿಯುವುದು ಇದು ಒಂದು ರೀತಿಯ ಅಸಹನೀಯ ಕಿರಿಕಿರಿಯನ್ನು ನಾವು ಅನುಭವಿಸುತ್ತೇವೆ. ಇಂತಹ ಉರಿ ಬಿಸಿಯಲ್ಲಿ ತಂಪಾಗಿ ದೇಹವನ್ನು ನೋಡಿಕೊಳ್ಳುವುದು ಹೇಗೇ ಏನೇ ಕುಡಿದರೂ 5 ರಿಂದ 10 ನಿಮಿಷ ಅಷ್ಟೇ ಮತ್ತೆ ಅದೇ ದೆಗೆ ಶುರುವಾಗುತ್ತದೆ. ಅಗದರೇ ಬೇಸಿಗೆಯಲ್ಲೂ ತಂಪಾಗಿ ಆಹ್ಲಾದಮಯವಾಗಿ ಇರುವುದು ಹೇಗೆಂದರೇ ಅದಕ್ಕೆ ಪರಿಹಾರ ಪುದೀನ ನೀರು ಕೈ ತೋಟದಲ್ಲಿ ಬೆಳೆಯುವ ಘಮ ಘಮ ವೆನ್ನುವ “ಪುದೀನ ಸೊಪ್ಪು” ಅಡಿಗೆ ಮನೇಲಿ ಮಾತ್ರ ಸೀಮಿತ ಆಗದೇ ಆರೋಗ್ಯಕ್ಕೂ ತುಂಬಾ ಒಳ್ಳೇದು.

ಏಷ್ಯಾದಲ್ಲಿ ಬೆಳೆದು ಪ್ರಪಂಚದಾದ್ಯಂತ ಬಳಾಕೆಯಾಗುತ್ತಾ ಇರೋ ಈ ಸೊಪ್ಪಲ್ಲಿ ಪ್ರೋಟೀನ್, ಐರನ್, ಕ್ಯಾಲ್ಷಿಯಂ, ಪೊಟ್ಯಾಷಿಯಂ, ಫಾಸ್ಫರಸ್,ಮಗ್ನೀಷಿಯಂ ಅಲ್ಲದೇ ವಿಟಮಿನ್ A ಹಾಗು C ಇರೋದ್ರೀಂದ ಆರೋಗ್ಯಕ್ಕೆ ಬಹಳ ಒಳ್ಳೇದು. ಆಹಾರ ಜೀರ್ಣ ಆಗೋಕೆ, ವಾಂತಿ ತಡಿಯಕ್ಕೆ, ಕ್ಯಾನ್ಸರ್ ಬರದೇ ಇರೋ ಹಾಗೆ ಕಾಪಾಡೋಕೆ, ಅಸ್ತಮಾ, ನೆಗಡಿ, ತಲೆನೋವು, ಕೆಮ್ಮು ಮತ್ತೆ ಬೇಧಿ ಇದೆಲ್ಲಕ್ಕೂ ರಾಮ ಬಾಣ. ಕಟ್ಟಿದ ಮೂಗಿಗೆ, ಗಂಟಲು ಅಥವಾ ಶ್ವಾಸಾಕೋಶದ ತೊಂದರೆಗೆ ಮತ್ತು ಅಲರ್ಜಿ ಆಗದ ಹಾಗೆ ನೋಡಿಕೊಳ್ಳುತ್ತೆ. ಇನ್ನು ಗರ್ಭಿಣಿಯರಲ್ಲಿ ಬೆಳಗಿನ ಹೊತ್ತು ವಾಂತಿ ಆಗದ ಹಾಗೆ ನೋಡಿಕೊಳ್ಳುತ್ತೆ. ಅಲ್ಸರ್ ನಿವಾರಿಸಿ ಲಿವರ್ ನ ಆರೋಗ್ಯ ಕಾಪಾಡುತ್ತೆ. ಚರ್ಮದ ಮೇಲೆ ಹಚ್ಚೋಕೆ ಹಸಿದು, ಒಣಗಿದ್ದು, ರುಬ್ಬಿದ್ದು ಅಥವಾ ಎಣ್ಣೆ ರೂಪದಲ್ಲಿ ಬಳಸಿ ಚರ್ಮದ ಕಾಂತಿ ಹೆಚ್ಚಿಸ ಬಹುದು. ಚರ್ಮದ ಸುಕ್ಕು, ಕಪ್ಪು ಕಲೆ, ಕಣ್ಣಿನ ಸುತ್ತ ಕಪ್ಪು ಬಣ್ಣ , ಮೊಡವೆ ಎಲ್ಲಕ್ಕೂ ಬಳಸಬಹುದು. ಹಾಗಾಗೀನೆ ಕ್ಲೆನ್ಸಿಂಗ್ ಲೋಷನ್ಗಳಲ್ಲಿ ಇದನ್ನ ಬಳಸ್ತಾರೆ. ಇದರಿಂದ ಹಲ್ಲುಜ್ಜಿದರೆ ಹಲ್ಲು ಬಿಳಿಯೂ ಆಗುತ್ತೆ, ಬಾಯ್ವಾಸನೆನೂ ದೂರ ಆಗುತ್ತೆ. ಹಲ್ಲು ಹಾಳಾಗದ ಹಾಗೆ ನೋಡಿಕೊಂಡು, ನಾಲಿಗೇನ ಸ್ವಚ್ಚಗೊಳಿಸುತ್ತೆ. ಬಾಯಲ್ಲಿ ಬ್ಯಾಕ್ಟೀರಿಯಾ ಬೆಳೆಯದ ಹಾಗೆ ನೋಡಿಕೊಳ್ಳುತ್ತೆ. ಅದಕ್ಕೇ ಟೂತ್ ಪೇಸ್ಟ್, ಚ್ಯುಯಿಂಗ್ ಗಮ್ ಗಳಲ್ಲಿ ಇದನ್ನ ಬಳಸ್ತಾರೆ.

ಪುದೀನ ಚಟ್ನಿ, ಪುದೀನ ಮೊಸರು ಬಜ್ಜಿ, ಪುದೀನ ರೈಸ್, ಜಲ್ ಜೀರಾ, ಪುದೀನ ಮಜ್ಜಿಗೆ ಮತ್ತಿನ್ನೂ ಏನೇನೋ ರುಚಿರುಚಿಯಾಗಿ ಮಾಡ್ಕೊಂಡು ತಿನ್ಬೋದು.

ಶೀತ ಆಗಿ ಗಂಟಲು ನೋವು ಬಂದಿದ್ದರೆ, ಅದಕ್ಕೆ ಪುದೀನ ರಸದ ಜೊತೆ ಉಪ್ಪು ಬೆರೆಸಿ ಗಾರ್ಗಲ್ ಮಾಡಿ ಕುಡಿಯಿರಿ. ದಿನಕ್ಕೆ ಎರಡರಿಂದ ಮೂರು ಸರ್ತಿ ಪುದೀನ ಟೀ ಕುಡಿದರೆ ಅಜೀರ್ಣ ಮತ್ತು ಶೀತ ಕಡಿಮೆ ಆಗುತ್ತೆ.

ಪುದೀನ ಜ್ಯೂಸ್ ಜೊತೆ ಅಷ್ಟೇಪ್ರಮಾಣ ಜೇನು ಹಾಕಿ ಕುಡಿಯೋದ್ರಿಂದ ಅಸಿಡಿಟಿ ಹಾಗು ವಾಂತಿ ಗುಣ ಆಗುತ್ತೆ.

ಊಟಕ್ಕೆಮುಂಚೆ ಮತ್ತು ಊಟ ಆದ್ಮೇಲೆ ಪುದೀನ ಎಲೆ ತಿನ್ನೋದ್ರಿಂದ ಬಾಯಿ ವಾಸನೆ ಬರಲ್ಲ.

ಪುದೀನ ಪೇಸ್ಟ್ ಗೆ ಅರಿಶಿಣ ಹಾಕಿ ಮುಖಕ್ಕೆ ಹಚ್ಚೋದ್ರಿಂದಮೊಡವೆ ಕಡಿಮೆ ಆಗುತ್ತೆ.

ಪುದೀನ ಜ್ಯೂಸ್ ಗೆ ಅರ್ಧ ಚಮಚ ಶುಂಠಿ, ಸ್ವಲ್ಪ ನಿಂಬೆರಸ ಮತ್ತುಜೇನು ಸೇರಿಸಿ 3 ದಿನ ಕುಡಿದರೆ, ವಾಂತಿ ಪೂರ್ತಿ ವಾಸಿ ಆಗುತ್ತೆ.

ಬಾಯಿಯ ದುರ್ವಾಸನೆ ದೂರಾಗುತ್ತದೆ. ಹಲ್ಲಗಳಿಗೆ ತಗಲುವ ಹುಳುಕನ್ನು ಹೋಗಲಾಡಿಸುತ್ತದೆ. ವಸಡುಗಳನ್ನು ಆರೋಗ್ಯವಾಗಿಸುತ್ತದೆ ಪುದಿನ. ಜೊತೆಗೆ ಬಾಯಲ್ಲಿ ಉಂಟಾಗುವ ಅಲ್ಸರ್ ಗೆ ಪುದಿನ ಉತ್ತಮ ಔಷಧಿ.

ಪುದಿನ ಎಲೆ ಆಸಿಡಿಟಿ ನಿವಾರಣೆಗೆ ಉತ್ತಮ ಮದ್ದು. ಪುದಿನ ಎಲೆಯನ್ನು ಗ್ರೀನ್ ಟೀ ಜೊತೆ ಮಿಕ್ಸ್ ಮಾಡಿ ಕುಡಿಯುವುದರಿಂದ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ಗ್ಯಾಸ್ಟ್ರಿಕ್ ನಿಂದ ಉಂಟಾಗುವ ಹೊಟ್ಟೆನೋವು, ವಾಂತಿಯನ್ನು ದೂರ ಮಾಡುತ್ತದೆ ಇನ್ನು ಪುದಿನ ಶೀತ ಹಾಗೂ ಕೆಮ್ಮಿನಿಂದ ಬಳಲುವ ಮಕ್ಕಳಿಗೆ ತುಂಬಾ ಉಪಯುಕ್ತ.

ಪುದಿನ ಎಲೆ ಜಜ್ಜಿ ರಸ ತೆಗೆದು ಅದಕ್ಕೆ ಸ್ವಲ್ಪ ಶುಂಠಿ ಮತ್ತು ತುಳಸಿ ರಸ ಹಾಗೂ ಜೇನುತುಪ್ಪ ಸೇರಿಸಿ ಮಕ್ಕಳಿಗೆ ನೀಡಿದರೆ ಕಫ ನಿವಾರಣೆಯಾಗಿ ಶೀತ ಗುಣಮುಖವಾಗುತ್ತದೆ. ಅಸ್ತಮಾದಿಂದ ಬಳಲುತ್ತಿರುವವರು ಪುದಿನ ಎಲೆಗಳನ್ನು ನಿಯಮಿತವಾಗಿ ಸೇವಿಸಿದರೆ ಉಸಿರಾಟದ ಸಮಸ್ಯೆ ಕಡಿಮೆಯಾಗುತ್ತದೆ.

ಪುದಿನ ಎಲೆಯಲ್ಲಿ ಕ್ಯಾಲ್ಸಿಯಂ, ಪ್ರಾಸ್ಪರಸ್ ಮತ್ತು ವಿಟಮಿನ್ ಸಿ, ಡಿ, ಇ ಹಾಗೂ ವಿಟಮಿನ್ ಬಿ ಇರುವುದರಿಂದ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಅಲರ್ಜಿ, ನಿಶಕ್ತಿಯಿಂದ ದೂರವಿಡುತ್ತದೆ. ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ನೋವನ್ನು ಪುದಿನ ಉಪಶಮನ ಮಾಡುತ್ತದೆ.

ತೂಕನಷ್ಟವನ್ನು ಹೊ೦ದುವ ನಿಮ್ಮ ಗುರಿಸಾಧನೆಗೆ ಸಾಥ್ ನೀಡುವಲ್ಲಿ ಪುದಿನಾವು ಬಹು ಪ್ರಮುಖ ಪಾತ್ರವಹಿಸುತ್ತದೆ. ಪುದಿನಾಕ್ಕೆ ನಿಮ್ಮ ಜೀರ್ಣಾ೦ಗವ್ಯವಸ್ಥೆಯನ್ನು ಉದ್ದೀಪನಗೊಳಿಸುವ ಸಾಮರ್ಥ್ಯವಿದೆಯಾದ್ದರಿ೦ದ, ನಿಮ್ಮ ಶರೀರಕ್ಕೆ ಹೆಚ್ಚಿನ ಪೋಷಕಾ೦ಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ.

ನಿಮ್ಮ ಶರೀರವು ಕೊಬ್ಬಿನಾ೦ಶವನ್ನು ಪರಿಣಾಮಕಾರಿಯಾಗಿ ಚಯಾಪಚಯಕ್ರಿಯೆಗೊಳಪಡಿಸಲು ಸಮರ್ಥವಾದಾಗ, ನೀವು ಸುಲಭವಾಗಿ ದೇಹ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಶ್ವಾಸಕೋಶಗಳನ್ನು ಶುಚಿಗೊಳಿಸಿಕೊಳ್ಳಲು ಪುದಿನಾವು ನೆರವಾಗಬಲ್ಲದು.

ನಿಮ್ಮ ಗ೦ಟಲು ಅಥವಾ ಮೂಗು ಕಟ್ಟಿಕೊ೦ಡ೦ತಿದ್ದಲ್ಲಿ, ನೀವು ಪುದಿನಾವನ್ನು ಮನೆಮದ್ದಿನ ರೂಪದಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಬಹುದು. ಪುದಿನವು ಒ೦ದು ಉತ್ತಮ ಉತ್ತೇಜಕವೆ೦ಬುದು ನಮಗೆಲ್ಲಾ ತಿಳಿದಿರುವ ಸ೦ಗತಿಯೇ ಆಗಿದೆ. ಪುದಿನದ ಸುಗ೦ಧಕ್ಕೆ ನಿಮ್ಮ ಇ೦ದ್ರಿಯಗಳನ್ನು ಉದ್ದೀಪಿಸುವ ಸಾಮರ್ಥ್ಯವಿದ್ದು, ತನ್ಮೂಲಕ ಅದು ನಿಮ್ಮನ್ನು ಚಟುವಟಿಕೆಯಿ೦ದಿರಿಸುತ್ತದೆ ಅಸ್ತಮಾವನ್ನು ತಡೆಗಟ್ಟಲು ಅದ್ಭುತ ನೈಸರ್ಗಿಕ ಶಾಮಕವಾಗಿರುವ ಪುದೀನಾ ಯಾವುದೇ ರೀತಿಯ ಕಟ್ಟುವಿಕೆಯಿಂದ ನಿಮಗೆ ತ್ವರಿತ ಆರಾಮವನ್ನು ಒದಗಿಸುತ್ತದೆ.

ಅಂತೆಯೇ ಪುದೀನಾ ಚಹಾವನ್ನು ಕೂಡ ಸಿದ್ಧಪಡಿಸಿ ನಿಮಗೆ ಸೇವಿಸಬಹುದು. ರೋಗನಿರೋಧಕ ಶಕ್ತಿ ವರ್ಧನೆ ರೋಗಗಳಿಗೆ ಬೇಸಿಗೆ ತಾಣವಾಗಿದೆ. ಜಂಕ್ ಫುಡ್ಸ್, ರಸ್ತೆಬದಿಯ ಹಣ್ಣಿನ ರಸ ಮತ್ತು ತಂಪು ಪಾನೀಯಗಳು ರೋಗಗಳನ್ನು ಹೆಚ್ಚಾಗಿಸುತ್ತವೆ. ಬೆಳಗ್ಗಿನ ಹೊತ್ತು ಒಂದು ಲೋಟದಷ್ಟು ಪುದೀನಾ ರಸವನ್ನು ಸೇವಿಸುವುದು ನಿಮ್ಮ ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ ಮತ್ತು ರಕ್ಷಣಾ ಕವಚವನ್ನು ಏರ್ಪಡಿಸುತ್ತದೆ.

ವಿಟಮಿನ್‌ಗಳು ಮತ್ತು ಮಿನರಲ್‌ಗಳು ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ ಮತ್ತು ಯಾವುದೇ ರೀತಿಯ ಸೋಂಕನ್ನು ಹೋಗಲಾಡಿಸುತ್ತದೆ. ಖಿನ್ನತೆ ಮತ್ತು ಒತ್ತಡದ ವಿರುದ್ಧ ಹೋರಾಡಲು ಬೇಸಿಗೆಯಲ್ಲಿ ಪುದೀನಾ ರಸವನ್ನು ಸೇವಿಸುವುದರ ಕುರಿತಾದ ಆರೋಗ್ಯ ಪ್ರಯೋಜನಗಳನ್ನು ಎದುರು ನೋಡುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ಪ್ರಯೋಜನ. ನಿಮ್ಮ ಮೂಡ್ ಅನ್ನು ಸರಿಪಡಿಸುವ ಅದ್ಭುತ ಶಕ್ತಿಯನ್ನು ಪುದೀನಾ ಹೊಂದಿದೆ. ಪುದೀನಾ ಎಲೆಗಳೊಂದಿಗೆ ನೀರನ್ನು ಕುದಿಸಿಕೊಳ್ಳಿ ಮತ್ತು ಆವಿಯನ್ನು ತೆಗೆದುಕೊಳ್ಳಿ. ನಿಮ್ಮನ್ನು ಒತ್ತಡರಹಿತವಾಗಿರಿಸುವ ಸಿರೊಟಿನ್ ಹಾರ್ಮೊನು ಅನ್ನು ಇದು ಬಿಡುಗಡೆ ಮಾಡುತ್ತದೆ. ದಂತ ಮತ್ತು ಹಲ್ಲುಗಳ ಸಮಸ್ಯೆಯನ್ನು ನಿವಾರಣೆಗೆ ಮಾಡುತ್ತದೆ ಈ ಪುದೀನ

Comments are closed.