ಕರಾವಳಿ

ಫುಲ್ಲರ್ಸ್ ಅರ್ಥ್ (ಮುಲ್ತಾನಿ ಮಿಟ್ಟಿ) ಯಲ್ಲಿರುವ ಸೌಂದರ್ಯದ ಗುಟ್ಟು.

Pinterest LinkedIn Tumblr

ಹಿಂದಿನ ಜೇವನದಲ್ಲಿ ಹೆಚ್ಚಾಗಿ ಹೊರಗಿನ ಕೆಲಸಕ್ಕೆ ಎಂದು ಹೋಗುತ್ತಾರೆ. ಆದರೆ ಅಲ್ಲಿನ ವಾತಾವರಣ. ಧೂಳು. ಗಾಳಿ. ನೀರು.ಹೊಗೆ. ಇವುಗಳಿಂದ ಮುಖದ ಅಂದ ಕೆಡುತ್ತದೆ.
ಈ ಮುಖದ ಅಂದಕ್ಕೆ ಕೆಮಿಕಲ್ ಮಿಶ್ರಣವಾದ ಹಲವಾರು ಬಗೆಯ ಕ್ರೀಮ್ ಗಳನ್ನು ಹೆಚ್ಚಾಗಿ ಬಳಸುತ್ತ ಮತ್ತೆ ಅಂದ ಅಳುಮಾಡಿಕೊಳ್ಳುತ್ತಿದೆವೆ. ಆದ್ದರಿಂದ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಕ್ರೀಮ್ ಗಳನ್ನು ಬಿಟ್ಟು ನೈಸರ್ಗಿಕವಾಗಿ ಪಡೆಯಬಹುದಾದ ಔಷಧಿಗಳನ್ನು ಬಳಸಿ ಅಂದ ಕಾಪಾಡಬಹುದು.

ಈ ಅಂದ ಕಾಪಾಡುವ ನೈಸರ್ಗಿಕ ಔಷಧಿಗಳಲ್ಲಿ ಒಂದಾಗಿರುವ ಮುಲ್ತಾನ ಮಿಟ್ಟಿ ಬಳಸಿ ಅಂದವನ್ನು ಕಾಪಾಡಬಹುದು.
ಫುಲ್ಲರ್ಸ್ ಅರ್ಥ್ ಎಂದು ಕರೆಯುವ ಈ ಮುಲ್ತಾನಿ ಮಿಟ್ಟಿಯಲ್ಲಿ ಮೆಗ್ನಿಸಿಯಂ ಕ್ಲೋರೇಡ್ ಎಂಬ ಅಂಶವಿದ್ದು ಇದು ಚರ್ಮದ ಕಲೆ. ಮೊಡವೆ. ಚರ್ಮದ ತುರಿಕೆಗಳೆಲ್ಲವನ್ನು ಗುಣಪಡಿಸುವ ಅಂಶವಿದ್ದು ಇದನ್ನು ವಿವಿಧ ರೀತಿಯ ಆಯುರ್ವೇದದ ಚರ್ಮದ ಕ್ರೀಮ್ ಗಳಲ್ಲಿ ಬಳಸುತ್ತಾರೆ.
ಮುಲ್ತಾನಿ ಮಿಟ್ಟಿ ಅಗ್ಗದ ವಸ್ತುವಾಗಿದೆ ಆದರೆ ಇದು ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬೀರುವುದಿಲ್ಲ. ಜೊತೆಗೆ ಇದನ್ನು ನೇರವಾಗಿ ಬಳಸಬಹುದು.

ಈ ಮುಲ್ತಾನಿ ಮಿಟ್ಟಿಯಿಂದ ಆಗುವ ಲಾಭಗಳು.
ಇದು ಮುಖದ ಮೇಲಿನ ರಂಧ್ರಗಳನ್ನು ಹೋಗಿಸಿ ರಂಧ್ರದಲ್ಲಿ ಅಡಗಿರುವ ಸೂಕ್ಷ್ಮ ಕಣಗಳನ್ನು ಹೊರ ಹಾಕುತ್ತದೆ.

ಮುಲ್ತಾನಿ ಮಿಟ್ಟಿಯಲ್ಲಿರುವ ಮೆಗ್ನಿಸಿಯಂ ಕ್ಲೋರೇಡ್ ಅಂಶ ಮುಖದ ಮೊಡವೆ. ಕಲೆಗಳನ್ನು ದೂರ ಮಾಡುತ್ತದೆ.

ಎಣ್ಣೆಯುಕ್ತ ಚರ್ಮವನ್ನು ಹೊಂದಿರುವವರಿಗೆ ಮುಲ್ತಾನಿ ಮಿಟ್ಟಿ ಒಂದು ಒಳ್ಳೆಯ ಔಷಧಿ ಇದು ಚರ್ಮದಲ್ಲಿ ಅಡಗಿರುವ ಎಣ್ಣೆಯನ್ನು ಹೊರಹಾಕಿ ಮೃದುವಾದ ಚರ್ಮವನ್ನು ಮಾಡುತ್ತದೆ. ಜೊತೆಗೆ ಯಾವುದೇ ರೀತಿಯ ಮೊಡವೆಗಳು ಬರದ ಹಾಗೆ ಕಾಪಾಡುತ್ತದೆ.

ಮುಖದ ಮೇಲೆ ಹೆಚ್ಚಾಗಿ ಕಾಣುವ ವಾಯ್ಟ್ ಹೆಡ್. ಮತ್ತು ಬ್ಲಾಕ್ ಹೆಡ್ ಗಳನ್ನು ಹೊರ ಹಾಕಲು ತುಂಬಾ ಸಹಾಯ ಮಾಡುತ್ತದೆ. ಮುಲ್ತಾನಿ ಮಿಟ್ಟಿಯನ್ನು ಫೇಸ್ ಪ್ಯಾಕ್ ಆಗಿ ಬಳಸಿ ಉತ್ತಮ ಬದಲಾವಣೆ ಕಾಣಬಹುದು.

ಮುಲ್ತಾನಿ ಮಿಟ್ಟಿಯನ್ನು ಫೇಸ್ ಪ್ಯಾಕ್. ಸೋಪು. ಫೇಸ್ ವಾಷ್ ರೀತಿಯಲ್ಲಿ ಬಳಸುತ್ತಾ ಬಂದರೆ ಮುಖದ ಕಂದು ಬಣ್ಣ ದೂರವಾಗಿ ಉತ್ತಮ ಬಣ್ಣ ಪಡೆಯಲು ಸಹಕಾರಿಯಾಗುತ್ತದೆ.

ಮುಲ್ತಾನಿ ಮಿಟ್ಟಿ ಒಣ ಚರ್ಮವನ್ನು ಮೃದು ಮಾಡುತ್ತದೆ.

ಎಲ್ಲರೂ ಬಯಸುವುದು ನಾವು ತುಂಬಾ ಚೆನ್ನಾಗಿ ಕಾಣಬೇಕು ಎಂದು. ಅದಕ್ಕಾಗಿಯೇ ತುಂಬಾ ರೀತಿಯ ಪ್ರಯೋಗಗಳನ್ನು ಮಾಡುತ್ತಾರೆ. ವಿಧವಿದ ಕ್ರೀಮ್ಗಳು. ಬ್ಯೂಟಿ ಪಾರ್ಲರ್ ಎಂದು ತುಂಬಾ ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಇನ್ನೂ ಮೇಲೆ ಅದನ್ನೆಲ್ಲ ಬಿಟ್ಟು ಈ ಮುಲ್ತಾನಿ ಮಿಟ್ಟಿಯನ್ನು ಉಪಯೋಗಿಸಿ ನಿಮ್ಮ ಅಂದವನ್ನು ಕಾಪಾಡಿಕೊಳ್ಳಿ.

Comments are closed.