ಆರೋಗ್ಯ

ಕಡಿಮೆ ಆಮ್ಲೀಯತೆಯ ಸಾಮಾನ್ಯ ರೋಗಲಕ್ಷಣಗಳು

Pinterest LinkedIn Tumblr

ದೇಹವು ಜೀವಂತವಾಗಿರಲು ಆಹಾರ ಬೇಕು. ಅದು ಬೆಳೆಯಲು, ನಷ್ಟವಾಗುವ ಜೀವಕಣಗಳು ಪುನರುಜ್ಜೀವನಗೊಳ್ಳಲು ಸೂಕ್ತ ಆಹಾರ ಸೇವನೆ ಮೂಲಕ ಅವಕ್ಕೆ ಬೇಕಾದ ಅಂಶಗಳನ್ನು ದೇಹದ ವಿವಿಧ ಭಾಗಗಳಿಗೆ ಕೊಡಬೇಕಾಗುವುದು. ಈ ಆಹಾರವನ್ನು ಬೇಕಾದ ರೂಪಕ್ಕೆ ಪರಿವರ್ತಿಸಿ ಕೊಡುವ ಅಂಗಗಳ ಸಮುದಾಯಕ್ಕೆ ಜೀರ್ಣಕ್ರಿಯೆ ಎನ್ನುತ್ತಾರೆ.

ಬೇಕಾದ ವಸ್ತುಗಳನ್ನು ಉಪಯೋಗಿಸಿಕೊಂಡು ಬೇಡವಾದ ಕಶ್ಮಲಗಳನ್ನು ಹರಹಾಕುವುದೂ ಕೂಡ ಈ ವ್ಯವಸ್ಥೆಗೆ ಸೇರಿದೆ. ಈ ಎಲ್ಲಾ ಕೆಲಸಗಳು ,ಅಲ್ಲಲ್ಲಿ ಬೇರೆ ಬೇರೆ ರೂಪತಾಳಿ ನಾನಾಬಗೆ ಕೆಲಸ ಮಾಡುವ ದೀರ್ಘ ನಳಿಕೆಯ ಮೂಲಕ ನಡೆಯುತ್ತವೆ. ಇದರ ಆರಂಭ ನಮ್ಮ ಬಾಯಿ. ಅದರ ಕೊನೆಯೇ ಗುದದ್ವಾರ.

ಆದರೆ ಈ ಜೀರ್ಣಕ್ರಿಯೆ ಎಂಬುದು ಸರಿಯಾಗಿ ನೆಡಿಯಲಿಲ್ಲ ಅಂದರೆ ಅದು ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ . ನಮ್ಮ ಮೂತ್ರವು ಪಿಂಕ್ ಅಥವಾ ಕೆಂಪು ಬಣ್ಣಕ್ಕೆ ತಿರುಗಿದರೆ ಲೋ ಸ್ಟಮಕ್ ಆಸಿಡ್ ಅಥವಾ ಹೊಟ್ಟೆಯಲ್ಲಿ ಕಡಿಮೆ ಆಮ್ಲಿಯತೆ ಇರುವುದು ಎಂದರ್ಥ ಇದು ಜೀರ್ಣಕ್ರಿಯೆಯ ಮೊದಲ ಹಂತ.ಆಮ್ಲಿಯತೆ ಪ್ರಾಮಾಣ ಕಡಿಮೆಯಾದರೆ ಹಲವಾರು ಸಮಸ್ಯೆಗಳು ನಮ್ಮ ಆರೋಗ್ಯದ ಮೇಲೆ ಉಂಟಾಗುತ್ತವೆ ಆಹಾರದಲ್ಲಿರುವ ಮೂಲ ಅಂಶಗಳನ್ನು ಗ್ರಹಿಸುವಲ್ಲಿ ಆಮ್ಲಿಯತೆ ವಿಫಲಗೊಳ್ಳುತ್ತದೆ. ಆಗ ಜೀರ್ಣಕ್ರಿಯೆ ಸಮಸ್ಯೆ ನಮ್ಮನ್ನುಕಾಡುತ್ತದೆ.

ಜೀರ್ಣಕ್ರಿಯೆ ಸುಧಾರಿಸುವ ಉತ್ತಮ ಆಹಾರಗಳು ನಮ್ಮ ಹೊಟ್ಡೆಯಲ್ಲಿ ಆಮ್ಲೀಯತೆ ಸಾಕಷ್ಟಿಲ್ಲದಿದ್ದರೆ, ಪ್ರೋಟೀನ್‌ಗಳು ಸೂಕ್ತವಾಗಿ ಕರಗುವುದಿಲ್ಲ, ಹಾಗೂ ಸಣ್ಣ ಕರುಳಲ್ಲಿ ಅವುಗಳು ತೊಂದರೆಯನ್ನುಂಟು ಮಾಡಿ ರಕ್ತಪ್ರವಾಹದಲ್ಲಿ ಪೂರ್ಣವಾಗಿ ಹೀರಲ್ಪಡುತ್ತವೆ. ಆರೋಗ್ಯ ಸಮಸ್ಯೆಗಳನ್ನು ಹೆಚ್ಚು ಮಾಡುವ ಮಿನರಲ್ ಕೊರತೆಗೆ ಲೋ ಸ್ಟಮಕ್ ಆಸಿಟ್ ಹೊಟ್ಟೆಯ ಕಡಿಮೆ ಆಮ್ಲೀಯತೆ ಕಾರಣವಾಗುತ್ತದೆ.

ನಿಮ್ಮ ದೇಹದ ಆರೋಗ್ಯಕ್ಕೆ ಬೇಕಾಗಿರುವುದು ಸೂಕ್ತ ಹಾಗೂ ಪ್ರಮಾಣಬದ್ಧವಾದ ಹೊಟ್ಟೆಯ ಆಮ್ಲೀಯ ಮಟ್ಟವಾಗಿದೆ.

ಕಡಿಮೆ ಆಮ್ಲೀಯತೆಯ ಸಾಮಾನ್ಯ ರೋಗಲಕ್ಷಣಗಳೆಂದರೆ
ವಿಪರೀತ ಬೆಲ್ಚಿಂಗ್ ಅಥವಾ ವಾಯು ನಿರ್ದಿಷ್ಟವಾಗಿ ಊಟದ ನಂತರ, ಮಲ ಅವ್ಯವಸ್ಥೆ, ಹೊಟ್ಟೆ ಊದುವುದು, ಎದೆಯುರಿ. ಒಣ ತ್ವಚೆ, ಕಬ್ಬಿಣದ ಕೊರತೆ, ಮಲದಲ್ಲಿ ಕರಗದ ಆಹಾರಗಳು, ತೀವ್ರ ಬಳಲಿಕೆ ಇತ್ಯಾದಿ. ಆಹಾರದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆಯಾಗುವುದು ನೈಸರ್ಗಿಕವಾಗಿ ಹೊಟ್ಟೆಯ ಆಮ್ಲೀಯತೆಯನ್ನು ಸುಧಾರಿಸುವ ಉತ್ತಮ ವಿಧಾನವಾಗಿದೆ, ಹೆಚ್ಚು ಪ್ರಕ್ರಿಯಿಸಿದ ಆಹಾರಗಳು ಅಂದರೆ ಫಾಸ್ಟ್ ಫುಡ್‌ಗಳನ್ನು ನಿರ್ಲಕ್ಷಿಸಬೇಕು ಮತ್ತು ಪೋಷಕಾಂಶವುಳ್ಳ ಆಹಾರ ಹಾಗೂ ಪಾನೀಯವನ್ನು ನಿಮ್ಮ ಆಹಾರದಲ್ಲಿ ತೆಗೆದುಕೊಳ್ಳಿ.

ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವುದು ಮತ್ತು ಸುಧಾರಿಸುವುದು ಒಳ್ಳೆಯದು.
ನೈಸರ್ಗಿಕ ಕ್ಷಾರೀಯ/ಇಲೆಕ್ಟ್ರೋಲೈಟ್ ಅಂಶವನ್ನು ದೇಹಕ್ಕೆ ತೆಗೆದುಕೊಳ್ಳುವುದು, ಅಂದರೆ ಕೋರಲ್ ಕ್ಯಾಲ್ಶಿಯಂ, ಹೊಟ್ಟೆ ಹಾಗೂ ದೇಹವನ್ನು ಬಲಯುತಗೊಳಿಸುವಲ್ಲಿ ಸಹಕಾರಿಯಾಗಿವೆ,
ಬೇಯಿಸಿದ ತರಕಾರಿ ಮತ್ತು ಹಣ್ಣುಗಳನ್ನು ತಿನ್ನಬೇಕು ಮತ್ತು ಬಿಸಿಯಾದ ಸೂಪ್, ಹುರುಳಿಕಾಯಿ ಅಥವಾ ಧಾನ್ಯದ ತಿನಿಸುಗಳನ್ನು ಸೇವಿಸಬೇಕು.
ನಾವು ಪ್ರತಿಬಾರಿ ಬಾಯಿಗೆ ಹಾಕಿದ ಆಹಾರವನ್ನು 30 ಬಾರಿ ಜಗಿಯಬೇಕು. ಅದನ್ನು ಸಣ್ಣ ಚೂರುಗಳಾಗಿ ಅಗಿದು ಆಹಾರದ ಪಚನಕ್ಕೆ ಜೊಲ್ಲುರಸ ವೃದ್ಧಿಗೆ ಅವಕಾಶ ಕಲ್ಪಿಸುತ್ತದೆ.
ಬಿಸಿ ನೀರು ದೇಹ ವಿಷಕಾರಿ ವಸ್ತು ಹೊರಹಾಕಿ ಜೀರ್ಣ ಶಕ್ತಿ ನಿರ್ಮಾಣ ಮಾಡುತ್ತದೆ. ಬಿಸಿನೀರಿನಲ್ಲಿ ಕೆಲವು ಶುಂಠಿ ಬೇರುಗಳನ್ನು ಹಾಕಿ ಶುಂಠಿ ಬೇರಿನ ಚಹಾ ಸೇವನೆಯಿಂದ ಜೀರ್ಣಕ್ರಿಯೆಯನ್ನು ಉದ್ದೀಪನಗೊಳಿಸುತ್ತದೆ.
ಹೆಚ್ಚು ಹೆಚ್ಚು ನೀರನ್ನು ಕುಡಿಯಿರಿ ಇದರಿಂದ ಜೀರ್ಣಕ್ರಿಯೆ ಸುಲಭವಾಗಿ ಆಗುತ್ತದೆ.
ನಾರಿನ ಅಂಶ ಇರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಿ.
ಕೊಬ್ಬಿನಂಶ ಇರುವ ಆಹಾರಗಳಿಂದ ದೂರವಿರಿ. ವಿಟಮಿನ್ ಸಿ ಇರುವ ಆಹಾರ ಸೇವಿಸಿ. ಪ್ರತಿದಿನ ವ್ಯಾಯಾಮ ಮಾಡಿ.
ಇವುಗಳನ್ನು ಪಾಲಿಸಿ ಜೀರ್ಣಕ್ರಿಯೆ ಸಮಸ್ಯೆ ಹೋಗಿಸಿ.

Comments are closed.