ಆರೋಗ್ಯ

ಇದನ್ನ ತಿನ್ನಲು ಕಷ್ಟ, ಆದರೇ ಟೀ ಮಾಡಿಕೊಂಡು ಕುಡಿದರೆ ಸಿಗುವ ಲಾಭ ಬಲ್ಲಿರಾ…!

Pinterest LinkedIn Tumblr

ಎಲ್ಲರ ಅಡುಗೆ ಮನೆಯಲ್ಲೂ ಇರುವ ವಸ್ತು ಬೆಳ್ಳುಳ್ಳಿ ಇದನ್ನು ಅಡುಗೆಗೆ ಬಳಸುತ್ತಾರೆ. ಆದರೆ ಅಡುಗೆ ಮಾಡಿ ಊಟ ಮಾಡುವಾಗ ಬೆಳ್ಳುಳ್ಳಿ ಪಕ್ಕಕ್ಕೆ ಇಟ್ಟು ಹೊರಗಡೆ ಎಸೆಯುತ್ತಾರೆ. ಆದರೆ ಈ ಬೆಳ್ಳುಳ್ಳಿ ಎಷ್ಟು ಆರೋಗ್ಯದ ಅಂಶಗಳನ್ನು ಒಳಗೊಂಡಿದೆ ಎಂಬುದು ನಿಮಗೆ ಗೊತ್ತಿಲ್ಲ. ಕೆಲವರಿಗೆ ಅದರ ಮಹತ್ವ ಗೊತ್ತಿದ್ದರು ಬೆಳ್ಳುಳ್ಳಿ ರುಚಿಯೇ ವಿಭಿನ್ನವಾಗಿ ಇರುತ್ತದೆ ತಿನ್ನಲು ಕಷ್ಟ ಎನ್ನುವವರು ಹೆಚ್ಚು ಮಂದಿ. ಆದರೆ ಬೆಳ್ಳುಳ್ಳಿಯನ್ನು ತಿನ್ನಲು ಕಷ್ಟ ಎನ್ನುವವರು ಬೆಳ್ಳುಳ್ಳಿಯಲ್ಲಿ ಟೀ ಮಾಡಿಕೊಂಡು ಕುಡಿಯಬಹುದು.

ಬೆಳ್ಳುಳ್ಳಿ ಟೀ ಮಾಡುವುದು ಹೇಗೇ?
ಒಂದು ಲೋಟ ನೀರನ್ನು ಕುದಿಸಿ ಇದಕ್ಕೆ ಬೆಳ್ಳುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ ಬೆರೆಸಿ. ಶುಂಠಿಯ ತುರಿಯನ್ನು ಜಜ್ಜಿ ನೀರಿಗೆ ಸೇರಿಸಿ. ನೀರು ಕುದಿಯಲು ಪ್ರಾರಂಭಿಸಿದ ಬಳಿಕ ಸುಮಾರು ಹದಿನೈದು ನಿಮಿಷದವರೆಗೆ ಮಧ್ಯಮ ಉರಿಯಲ್ಲಿ ಕುದಿಸಿ ಬಳಿಕ ಉರಿ ಆರಿಸಿ 10 ನಿಮಿಷ ಹಾಗೇ ಬಿಡಿ. ಬಳಿಕ ಜೇನು ಮತ್ತು ಲಿಂಬೆರಸ ಸೇರಿಸಿ ಕುಡಿಯಿರಿ.

ಇದನ್ನು ಕುಡಿಯುವುದರಿಂದ ಏನು ಲಾಭ ಇದೆ ನೋಡೋಣ.
ಬೆಳ್ಳುಳ್ಳಿಯಲ್ಲಿ ಆಂಟಿ ಆಕ್ಸಿಡೆಂಟುಗಳು ಯಥೇಚ್ಛವಾಗಿದ್ದು ಉತ್ತಮ ಪ್ರತಿಜೀವಕ ಗುಣಗಳನ್ನೂ ಹೊಂದಿದೆ.ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವ ಮೂಲಕ ಇದು ಜೀರ್ಣರಸಗಳ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ ಆರೋಗ್ಯ ಕಾಪಾಡುತ್ತದೆ.

ಬೆಳ್ಳುಳ್ಳಿ ಟೀಯಲ್ಲಿ ಕೊಬ್ಬನ್ನು ಕರಗಿಸುವ ಗುಣವಿರುವ ಕಾರಣ ತೂಕದಲ್ಲಿ ಇಳಿಕೆಯಾಗುತ್ತದೆ ಹಾಗೂ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ.

ಬೆಳ್ಳುಳ್ಳಿ ಟೀ ಹೃದಯದ ಆರೋಗ್ಯಕ್ಕೂ ಉತ್ತಮವಾಗಿದೆ. ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತಎ ಹಾಗೂ ಪೆಡಸಾಗಿದ್ದ ರಕ್ತನಾಳಗಳು ಸಡಿಲಗೊಳ್ಳುತ್ತವೆ.

ಬೆಳ್ಳುಳ್ಳಿ ಟೀ ಕುಡಿಯುವ ಮೂಲಕ ದಿನದ ಅಗತ್ಯದ ವಿಟಮಿನ್ ಎ, ಸಿ. ಬಿ1 ಮತ್ತು ಬಿ2 ಲಭ್ಯವಾಗುತ್ತವೆ. ಅಲ್ಲದೆ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ವೃದ್ದಾಪ್ಯವನ್ನು ದೂರಾಗಿಸುತ್ತವೆ.

ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ ಹಾಗೂ ಪ್ರತಿಜೀವಕ ಗುಣ ಹಲವಾರು ಸೋಂಕುಗಳಿಂದ ರಕ್ಷಣೆ ನೀಡುತ್ತದೆ.

ದೇಹದ ಒಳಗಣ ಸೋಂಕು, ಶಿಲೀಂಧ್ರಗಳ ಬೆಳವಣಿಗೆಗೆ ಕಡಿವಾಣ, ವೈರಸ್ಸು ಮತ್ತು ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.

ಬೆಳ್ಳುಳ್ಳಿ ಟೀ ಕುಡಿದರೆ ಎಷ್ಟೆಲ್ಲ ರೀತಿಯಾಗಿ ಆರೋಗ್ಯ ಕಾಪಾಡಿಕೊಳ್ಳಬಹುದು ಅಲ್ಲವೇ ಇನ್ನು ಮೇಲೆ ನೀವು ಪ್ರಯತ್ನಿಸಿ ಆದರೆ ಮಿತಿ ಇರಲಿ.

Comments are closed.