ಗಲ್ಫ್

ಕುವೈತ್‌’ನಲ್ಲಿ ಎರಡು ಬಸ್‌ಗಳ ನಡುವೆ ಭೀಕರ ಅಪಘಾತ; ಏಳು ಭಾರತೀಯರು ಸೇರಿ 15 ಮಂದಿ ದುರ್ಮರಣ

Pinterest LinkedIn Tumblr

ಕುವೈತ್‌: ಎರಡು ಬಸ್‌ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಮಂದಿ ಭಾರತೀಯರು ಸೇರಿ 15 ಮಂದಿ ತೈಲ ಕಾರ್ಮಿಕರು ಮೃತಪಟ್ಟಿರುವ ಘಟನೆ ಭಾನುವಾರ ದಕ್ಷಿಣ ಕುವೈತ್‌ನಲ್ಲಿ ನಡೆದಿದೆ.

ಘಟನೆಯಲ್ಲಿ ಏಳು ಭಾರತೀಯರು, ಐದು ಮಂದಿ ಈಜಿಪ್ಟ್‌ ಮತ್ತು ಮೂವರು ಪಾಕಿಸ್ತಾನ ಮೂಲದವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಕುವೈತ್‌ ಅಯಿಲ್‌ ಕಂಪೆನಿಯ ಅಧಿಕಾರಿ ಮೊಹಮ್ಮದ್‌ ಅಲ್‌–ಬಸ್ರಿ ತಿಳಿಸಿದ್ದಾರೆ.

ಅವಘಡದಲ್ಲಿ ಹಲವರು ಗಾಯಗೊಂಡಿದ್ದು, ಒಬ್ಬ ಭಾರತೀಯನ ಸ್ಥಿತಿ ಗಂಭೀರವಾಗಿದೆ.

ಮೃತರು ಕುವೈತ್‌ ಅಯಿಲ್‌ ಕಂಪೆನಿ(ಕೆಓಸಿ)ಯ ಖಾಸಗಿ ಉಪಗುತ್ತಿಗೆದಾರ ಬೋರ್ಗನ್ ಡ್ರಿಲ್ಲಿಂಗ್‌ನ ನೌಕರರಾಗಿದ್ದರು ಕೆಲಸ ಮಾಡುತ್ತಿದ್ದರು ಎಂದು ಅಗ್ನಿಶಾಮಕ ಇಲಾಖೆಯ ವಕ್ತಾರ ಕರ್ನಲ್‌ ಖಲೀಲ್‌ ಅಲ್‌ ಅಮೀರ್‌ ತಿಳಿಸಿದ್ದಾರೆ.

ತೈಲ ಸಮೃದ್ಧ ರಾಷ್ಟ್ರವಾಗಿರುವ ಕುವೈತ್‌, ವಲಸೆ ಕಾರ್ಮಿಕರ ಹಕ್ಕುಗಳು ಮತ್ತು ಅವರ ಸ್ಥಿತಿಗತಿಗಳ ಕುರಿತಾದ ತನ್ನ ನೀತಿಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದೆ.

Comments are closed.