ಆರೋಗ್ಯ

ಆಹಾರದಲ್ಲಿ ಹಾನಿಕಾರಕ ಪದಾರ್ಥಗಳನ್ನು ಕಂಡು ಹಿಡಿಯುವ ರೀತಿ ತಿಳಿಯಿರಿ.

Pinterest LinkedIn Tumblr

ದಿನವೂ ನೀವು ತಿನ್ನುತ್ತಿರುವ ಆಹಾರವನ್ನು ಗಮನಿಸುತ್ತಿದ್ದೀರಾ? ಇಲ್ಲವೆನ್ನುತ್ತೀರಾ? ಹಾಗಾದರೆ, ಜಾಗ್ರತೆ! ಯಾಕೆಂದರೆ ಅವುಗಳಲ್ಲಿ ನಿಮ್ಮ ದೇಹಕ್ಕೆ ಹಾನಿಯನ್ನುಂಟುಮಾಡುವ ವಿಷ ಪದಾರ್ಥಗಳು ಇರುವ ಸಾದ್ಯತೆಗಳಿವೆ. ಒಂದು ವೇಳೆ ಅಂತಹ ಪದಾರ್ಥಗಳನ್ನು ನಿಮಗರಿವಿಲ್ಲದೆ ತಿಂದರೆ, ಅಷ್ಟೇ ನೀವು ಅನಾರೋಗ್ಯದ ಪಾಲಾಗಬಹುದು. ಒಮ್ಮೊಮ್ಮೆ ಅವು ಮಾರಣಾಂತಿಕವೂ ಆಗಬಹುದು. ಒಂದುವೇಳೆ ಆಹಾರದಲ್ಲಿ ಹಾನಿಕಾರಕ ಪದಾರ್ಥಗಳಿದ್ದರೆ, ಕಂಡು ಹಿಡಿಯುವುದು ಹೇಗೆ? ಬನ್ನಿ ತಿಳಿಯೋಣ.

* ಖರೀದಿಸಿ ತಂದ ಆಲೂಗಡ್ಡೆಗಳು ಸಹಜ ಬಣ್ಣವನ್ನು ಹೊಂದಿರದೆ ಹಸಿರು ಬಣ್ಣದ ಆಲೂಗಡ್ಡೆಗಳು ನಿಮಗೆ ಕಂಡು ಬಂದರೆ, ಒಡನೆಯೇ ಅವುಗಳನ್ನು ಬಿಸಾಡಿ. ಯಾಕೆಂದರೆ ಅವು ವಿಷಪೂರಿತವಾಗಿರುತ್ತವೆ. ಇಂತಹ ಆಲೂಗಡ್ಡೆಗಳನ್ನು ಉಪಯೋಗಿಸಿದರೆ, ನರಮಂಡಲ ವ್ಯವಸ್ಥೆಗೆ ಸಂಬಂಧಿಸಿದ ತೊಂದರೆಗಳು ಉಂಟಾಗುತ್ತವೆ.
*ಕೋಳಿ ಮೊಟ್ಟೆಗಳನ್ನು ಒಡೆದಾಗ, ಅವುಗಳಲ್ಲಿರುವ ಬಿಳಿ ಹಾಗೂ ಹಳದಿ ಭಾಗಗಳು ಬೇರೆಯಾಗಿರದೆ ಒಟ್ಟಿಗಿವೆಯೇ? ಹಾಗಿದ್ದರೆ ಅವು ಆರೋಗ್ಯಕ್ಕೆ ಹಾನಿಕರ. ಅವುಗಳನ್ನು ಉಪಯೋಗಿಸಬೇಡಿ.
* ನಮ್ಮಲ್ಲಿ ಬಹಳಷ್ಟು ಜನ ಬ್ರೆಡ್ ಇಷ್ಟಪಡುತ್ತಾರೆ. ಯಾವಾಗಲೂ ತಾಜಾ ಬ್ರೆಡ್ಡನ್ನೇ ಉಪಯೋಗಿಸಬೇಕು. ಬೂಸಲು ಬಂದ ಬ್ರೆಡ್ಡನ್ನು ತಿನ್ನಲೇ ಬಾರದು. ಒಂದು ವೇಳೆ ಬೂಸಲು ಹಿಡಿದಿರುವ ಭಾಗವನ್ನು ತೆಗೆದುಹಾಕಿ ಉಳಿದ ಭಾಗವನ್ನು ತಿಂದರೂ ಹಾನಿಕರವೇ. ಇದರಿಂದ ಕ್ಯಾನ್ಸರ್ ಬರಬಹುದು.
*ಸಂಗ್ರಹಿಸಿಟ್ಟ ಒಣ ಆಹಾರ ಪದಾರ್ಥಗಳು, ಪಾಪ್ ಕಾರ್ನ್ ಮೊದಲಾದವುಗಳು ವಾಸನೆಯಿಂದ ಕೂಡಿದ್ದರೆ ಅವುಗಳನ್ನು ಬಿಸಾಡಬೇಕು. ಒಂದು ವೇಳೆ ತಿಂದರೆ ಅನಾರೋಗ್ಯವುಂಟಾಗುತ್ತದೆ.
* ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡುವ ಶೆಲ್ಫ್( ಫ್ರಿಜ್ ನಲ್ಲಿರುವ ಅಥವಾ ಹೊರಗಿನ)ಗಳನ್ನು ಕನಿಷ್ಟ ವಾರಕ್ಕೆ ಒಮ್ಮೆಯಾದರೂ ಶುಭ್ರಗೊಳಿಸಬೇಕು. ಇಲ್ಲವಾದಲ್ಲಿ ಅವುಗಳಿಗೆ ಅಂಟಿಕೊಂಡಿರುವ ಬ್ಯಾಕ್ಟೀರಿಯಾಗಳು ಇತರೆ ಆಹಾರ ಪದಾರ್ಥಗಳಿಗೂ ಹರಡಬಹುದು.

Comments are closed.