ಕರಾವಳಿ

ಬೆಂಜನಪದವು ರಾಜೇಶ್ ಪೂಜಾರಿ ಕೊಲೆ ಪ್ರಕರಣ : ಮೂವರು ಆರೋಪಿಗಳು ಖುಲಾಸೆ

Pinterest LinkedIn Tumblr

ಮಂಗಳೂರು, ಮಾರ್ಚ್. 24: ಬೆಂಜನಪದವು ಸಮೀಪ ನಾಲ್ಕು ವರ್ಷಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಭಜರಂಗದಳದ ಮುಖಂಡ ರಾಜೇಶ್ ಪೂಜಾರಿ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ರಾಜೇಶ್ ಪೂಜಾರಿ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳು ನಿರಪರಾಧಿಗಳು ಎಂದು ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದ್ದು, ಮಲ್ಲೂರು ನಿವಾಸಿಗಳಾದ ಇರ್ಷಾದ್ (23), ಇಮ್ರಾನ್ (21) ಹಾಗೂ ಹುಸೈನ್ (23) ಎಂಬವರನ್ನು ಕೊಲೆ ಆರೋಪದಿಂದ ಬಿಡುಗಡೆಗೊಳಿಸಿದೆ.

2014ರ ಮಾರ್ಚ್ ನಲ್ಲಿ ರಾಜೇಶ್ ಪೂಜಾರಿಯನ್ನು ಬೆಂಜನಪದವು ರಿಕ್ಷಾ ನಿಲ್ದಾಣದ ಬಳಿ ಬೆಳಗ್ಗೆ 6 ಗಂಟೆಯ ಸುಮಾರಿಗೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಬಳಿಕ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲೂರು ನಿವಾಸಿಗಳಾದ ಇರ್ಷಾದ್ (23), ಇಮ್ರಾನ್ (21) ಹಾಗೂ ಹುಸೈನ್ (23) ಎಂಬವರನ್ನು ಬಂಧಿಸಿದ್ದರು. ಈ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಅಮಾಯಕ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಡಿವೈಎಫ್‌ಐ ನೇತೃತ್ವದಲ್ಲಿ ಕಾನೂನು ಹೋರಾಟ ನಡೆಸಲಾಗಿತ್ತು

Comments are closed.