ಆರೋಗ್ಯ

ಪ್ರತೀದಿನ ಬೆಳಿಗ್ಗೆ ಈ ಪಾನೀಯವನ್ನು ಸೇವಿಸುವುದರಿಂದ ಆಗುವ ಪ್ರಯೋಜನ ಬಲ್ಲಿರಾ..?

Pinterest LinkedIn Tumblr

ಬೇಸಿಗೆ ಕಾಲ ಬಂದಿದೆ. ಈಗ ನಾವು ಬಹಳ ಜಾಗ್ರತೆಯಿಂದ ಇರಬೇಕು . ಇಲ್ಲದಿದ್ದಲ್ಲಿ ಸುಸ್ತು, ನಿಶ್ಯಕ್ತಿ, ಬಿಸಲಬೇಗೆ ಯಿಂದ ನರಳುವಂತಾಗುತ್ತದೆ. ಇವುಗಳು ಬಾರದಂತೆ ಜಾಗ್ರತೆ ಇಂದ ಇರಬೇಕು. ಒಂದು ಕಾಲದಲ್ಲಿ ಶರೀರದ ಉಷ್ಣತೆ ಹೆಚ್ಚಾದರೆ…ಕಾಮ ಕಸ್ತೂರಿ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಅದಕ್ಕೆ ಸಕ್ಕರೆ ಬೆರೆಸಿ ಕುಡಿಯುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸಕ್ಕರೆ ಬೆರೆಸದೆಯೂ ಕುಡಿಯುತ್ತಾರೆ. ಹೀಗೆ ಸಕ್ಕರೆ ಬೆರೆಸದೆ ಕುಡಿಯುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದೆಂದು ಆಯುರ್ವೇದ ಶಾಸ್ತ್ರದಲ್ಲಿ ಹೇಳಲಾಗಿದೆ. ಪ್ರತೀದಿನ ಬೆಳಿಗ್ಗೆ ಈ ಪಾನೀಯವನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು ಅನೇಕ. ಬನ್ನಿ ಆ ಪ್ರಯೋಜನಗಳು ಯಾವುವೆಂದು ತಿಳಿಯೋಣ…

1. ಕಾಮ ಕಸ್ತೂರಿ ಬೀಜಗಳ ಪಾನೀಯವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದಲ್ಲಿ ಶರೀರದ ಉಷ್ಣತೆ ಕಡಿಮೆಯಾಗುತ್ತದೆ. ಸಕ್ಕರೆ ಬೆರೆಸದೆ ಕುಡಿದರೆ, ಸಕ್ಕರೆ ಖಾಯಿಲೆ ಹತೋಟಿಗೆ ಬರುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕಡಿಮೆಯಾಗುತ್ತದೆ.

2. ಪದೇ ಪದೇ ಡೀಹೈಡ್ರೇಶನ್ ಗೆ ಒಳಗಾಗುತ್ತಿರುವವರು ಕಾಮ ಕಸ್ತೂರಿ ಬೀಜಗಳ ಪಾನೀಯವನ್ನು ಸೇವಿಸಿದಲ್ಲಿ ಶರೀರದಲ್ಲಿ ದ್ರವ ಪದಾರ್ಥಗಳ ಸಮತೋಲನ ಉಂಟಾಗುತ್ತದೆ. ವಾಕರಿಕೆ , ವಾಂತಿ ಬರುವಂತಿದ್ದರೆ, ಈ ಪಾನಿಯ ಕುಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಜೀರ್ಣ ಸಂಬಂಧಿ ಸಮಸ್ಯೆಗಳಾದ ಅಸಿಡಿಟಿ, ಅಜೀರ್ಣ, ಮಲಬದ್ಧತೆ ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತವೆ.

3. ಶರೀರದಲ್ಲಿರುವ ಮಲಿನ ಪದಾರ್ಥಗಳು ಹೊರದೂಡಲ್ಪಡುತ್ತವೆ. ರಕ್ತ ಶುದ್ಧಿಯಾಗುತ್ತದೆ. ಗಂಟಲಲ್ಲಿ ಉರಿ, ಕೆಮ್ಮು, ಅಸ್ತಮಾ, ತಲೆ ನೋವು, ಜ್ವರ ಮೊದಲಾದ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.

4. ಕಾಮ ಕಸ್ತೂರಿ ಬೀಜಗಳ ಪಾನೀಯ ಒಂದು ಲೋಟವನ್ನು ಮಕ್ಕಳಿಗೆ ಕುಡಿಸಿದಲ್ಲಿ, ಆರೋಗ್ಯವಂತರಾಗಿ ಸದಾ ಲವಲವಿಕೆಯಿಂದ ಇರುತ್ತಾರೆ. ಹಗಲಿಡೀ ನೀರಿನಲ್ಲಿ ನೆನೆಸಿದ ಬೀಜಗಳ ಪಾನೀಯವನ್ನು ರಾತ್ರಿ ಸೇವಿಸಿದರೆ… ಅಧಿಕ ಭಾರ ಕಡಿಮೆಯಾಗುತ್ತದೆ. ಈ ಪಾನೀಯ ನೈಸರ್ಗಿಕವಾದ ಆಂಟಿ ಬಯಾಟಿಕ್ ಆಗಿ ಕಾರ್ಯ ನಿರ್ವಹಿಸಿ ಸೋಂಕು ತಗುಲದಂತೆ ಕಾಪಾಡುತ್ತದೆ.

5. ನೀರಿನಲ್ಲಿ ಹಾಕಿದ ತಕ್ಷಣ ಬೀಜಗಳ ಸುತ್ತಲೂ ಜೆಲ್ ನಂತೆ ಆಗುವ ಈ ಬೀಜಗಳಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಫ್ಯಾಟಿ ಆಸಿಡ್ ಮತ್ತು ನಾರು ಪದಾರ್ಥ ಹೇರಳವಾಗಿದ್ದು, ಪೋಷಣೆ ನೀಡುತ್ತವೆ. ಕಾಮಕಸ್ತೂರಿ ಬೀಜಗಳ ಪಾನೀಯವನ್ನು ಮಹಿಳೆಯರು ಸೇವಿಸಿದರೆ, ಅವರಿಗೆ ಅಗತ್ಯವಾಗಿ ಬೇಕಾದ… ಫೋಲೇಟ್, ನಿಯಾಸಿನ್, ವಿಟಮಿನ್ ಇ ಮೊದಲಾದ ಪೋಷಕ ಪದಾರ್ಥಗಳು ಲಭಿಸುತ್ತವೆ.

6.ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿದ ಕಾಮ ಕಸ್ತೂರಿ ಬೀಜಗಳಿಗೆ ಶುಂಠಿ ರಸ ಸೇರಿಸಿ ಕುಡಿದಲ್ಲಿ ಶ್ವಾಸಕೋಶ ಸಮಸ್ಯೆಗಳು ನಿವಾರಣೆಯಾಗುತ್ತವೆ.

Comments are closed.