ಕರಾವಳಿ

ಕುಂದಬಾರಂದಾಡಿ: ಹೊಳೆಯಲ್ಲಿ ಬಿದ್ದ ತೆಂಗಿನ ಕಾಯಿ ತೆಗಿಯಲು ಹೋದಾತ ನೀರುಪಾಲು

Pinterest LinkedIn Tumblr

ಕುಂದಾಪುರ: ಹೊಳೆಯಲ್ಲಿ ಬಿದ್ದ ತೆಂಗಿನ ಕಾಯಿ ತೆಗೆಯಲು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕುಂದಬಾರಂದಾಡಿ ಎಂಬಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ರಂಜಿತ್ ಭಂಡಾರಿ(25) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ದೈವಿ.

ರಂಜಿತ್ ಭಂಡಾರಿ ಹಬ್ಬಕ್ಕೆಂದು ಊರಿಗೆ ಬಂದಿದ್ದು ಭಾನುವಾರ ಸಂಜೆ ಸುಮಾರಿಗೆ ಮನೆ ಸಮೀಪದ ತೋಟದ ಹಾದಿಯಲ್ಲಿ ನಡೆದು ಸಾಗುತ್ತಿದ್ದು ಈ ವೇಳೆ ತೋಟದಲ್ಲಿನ ತೆಂಗಿನ ಕಾಯಿ ನೀರಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಆ ತೆಂಗಿನ ಕಾಯಿಯನ್ನು ತೆಗೆಯಲು ಹೋದಾಗ ಆಕಸ್ಮಿಕವಾಗಿ ನೀರ್‍ಇನಲ್ಲಿ ಬಿದ್ದ ರಂಜಿತ್ ಚಕ್ರ ನದಿ ನೀರಿನ ಕೆಸರಿನಲ್ಲಿ ಹೂತು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಗಂಗೊಳ್ಳಿ 24*7 ಆಂಬುಲೆನ್ಸ್ ಮೂಲಕ ಶವವನ್ನು ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.