ಆರೋಗ್ಯ

ಹೊಟ್ಟೆಯ ಕೊಬ್ಬು ಕರಗಲು ಸ್ನಾನಕ್ಕೆ ಹೋಗುವ ಮೊದಲು ಈ ರೀತಿ ಮಾಡಿ..?

Pinterest LinkedIn Tumblr

ಬದಲಾಗುತ್ತಿರುವ ಅಹಾರದ ಅಭ್ಯಾಸ. ಜಂಕ್, ಫಾಸ್ಟ್ ಫುಡ್ ಸಂಸ್ಕೃತಿಯಲ್ಲಿ ಹೆಚ್ಚಿನ ಮಂದಿಯನ್ನು ಈಗ ತೂಕದ ಸಮಸ್ಯೆ ಕಾಡುತ್ತಿದೆ. ಹೊಟ್ಟೆ ಬೆಳೆದು ನಾನಾ ತೊಂದರೆಗಳನ್ನು ಅನುಭವಿಸುವಂತಾಗಿದೆ. ಅನಾರೋಗ್ಯ ಸಮಸ್ಯೆಗಳು ಅಧಿಕವಾಗುತ್ತಿವೆ. ತೂಕ ಹೆಚ್ಚಾಗುವುದರಿಂದಲೇ ಇತರೆ ಸಮಸ್ಯೆಗಳು ಸಂಧಿನೋವು, ಮೊಳಕಾಲ ನೋವು ಪ್ರಾರಂಭವಾಗುತ್ತದೆ. ಶುಗರ್, ಹೃದ್ರೋಗಗಳು ಕಾಡುತ್ತವೆ. ಇವೆಲ್ಲವುಗಳಿಂದ ತಪ್ಪಿಸಿಕೊಂಡು ಆರೋಗ್ಯವಾಗಿ ಇರಬೇಕೆಂದರೆ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ ಮಾರ್ಗ. ಈ ಹಿನ್ನೆಲೆಯಲ್ಲಿ ತೂಕವನ್ನು ಕಡಿಮೆ ಮಾಡಿಕೊಳ್ಳಲು ಅನೇಕ ರೀತಿಯ ಪದ್ಧತಿಗಳಿವೆ. ನಾವೀಗ ತಿಳಿಸಲಿರುವುದು ಆರೋಗ್ಯವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳುವ ವಿಧಾನ. ಪ್ರತಿ ನಿತ್ಯ ಬೆಳಗ್ಗೆ ಸ್ನಾನ ಮಾಶುವ ಮೊದಲು ಎಳ್ಳೆಣ್ಣೆಯಿಂದ ಹೊಟ್ಟೆ ಮೇಲೆ ಮಸಾಜ್ ಮಾಡಿದರೆ ಸಾಕು. ಕ್ರಮವಾಗಿ ತೂಕ ಕಡಿಮೆಯಾಗುತ್ತಾರೆ. ಎಳ್ಳೆಣ್ಣೆಯನ್ನು ಈ ರೀತಿ ಉಪಯೋಗಿಸಿದರೆ ತೂಕ ಅದಷ್ಟಕ್ಕದೇ ಕಡಿಮೆಯಾಗಲು ಆರಂಭಿಸುತ್ತದೆ. ಇದು ಅದೆಷ್ಟೋ ದಿನಗಳಿಂದ ಬಳಸುತ್ತಿರುವ ಅತ್ಯಂತ ವಿಶಿಷ್ಟವಾದ ಪದ್ಧತಿ.

ಎಳ್ಳೆಣ್ಣೆಯನ್ನು ಹೇಗೆ ಬಳಸಬೇಕು…
1. ಬೆಳಗ್ಗೆ ಎದ್ದಕೂಡಲೆ ಎರಡು ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿಯಬೇಕು.
2. ಸ್ನಾನಕ್ಕೆ ಹೋಗುವ ಮೊದಲು ಹೊಟ್ಟೆಯ ಮೇಲೆ ಎಳ್ಳೆಣ್ಣೆಯಿಂದ 15 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಇದರಿಂದ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ. ಕೊಬ್ಬು ಕರಗಲು ಪ್ರಾರಂಭವಾಗುತ್ತದೆ.
3. ಎಳ್ಳೆಣ್ಣೆಯಲ್ಲಿ ಒಮೆಗಾ 3, 6 ಫ್ಯಾಟಿ ಆಸಿಡ್ಸ್ ಹೆಚ್ಚಾಗಿ ಇರುತ್ತವೆ. ಇವು ಬಿಪಿಯನ್ನು ಕಡಿಮೆ ಮಾಡುತ್ತವೆ. ದೇಹದಲ್ಲಿ ಸಂಗ್ರಹವಾಗಿರುವ ಕೊಲೆಸ್ಟರಾಲನ್ನು ಕಡಿಮೆ ಮಾಡುತ್ತವೆ.
4. ಮೇಲೆ ತಿಳಿಸಿದ ರೀತಿಯಲ್ಲಿ ಎಳ್ಳೆಣ್ಣೆಯನ್ನು ದೇಹದಲ್ಲಿ ಕೊಬ್ಬಿರುವ ಭಾಗದಲ್ಲಿ ಹಚ್ಚಿದರೆ ಹೆಚ್ಚಿನ ಪ್ರಮಾಣದ ಕೊಬ್ಬು ಕರಗುತ್ತದೆ.
5. ನಿತ್ಯ ಸ್ನಾನ ಮಾಡುವ ಮೊದಲು ಚಿಕ್ಕ ಮಕ್ಕಳಿಗೆ ಎಳ್ಳೆಣೆಯಿಂದ ಮಸಾಜ್ ಮಾಡಿದರೆ ಅವರ ದೇಹ ಚೆನ್ನಾಗಿ ಬೆಳವಣಿಗೆಯಾಗುತ್ತದೆ. ಮಿದುಳು ಚುರುಕಾಗಿ ಬದಲಾಗುತ್ತದೆ. ಚಿಕ್ಕಮಕ್ಕಳಲ್ಲಿ ಇರುವ ಕೊಬ್ಬು ಕರಗುತ್ತದೆ.. ಈ ಎಣ್ಣೆಯಲ್ಲಿ ಪೋಷಕಾಂಶಗಳೆಲ್ಲಾ ಮಕ್ಕಳಿಗೆ ಲಭಿಸುತ್ತವೆ.
6. ಕಾಪರ್, ಇತರೆ ಪವರ್‌ಫುಲ್ ಆಂಟಿ ಆಕ್ಸಿಡೆಂಟ್‌ಗಳು ಎಳ್ಳೆಣ್ಣೆಯಲ್ಲಿ ಇರುತ್ತವೆ. ಹಾಗಾಗಿ ಇವು ಸಂಧಿನೋವನ್ನು ಕಡಿಮೆ ಮಾಡುತ್ತವೆ. ಸ್ವಲ್ಪ ಎಳ್ಳೆಣ್ಣೆಯನ್ನು ತೆಗೆದುಕೊಂಡು ಸ್ವಲ್ಪ ಬಿಸಿ ಮಾಡಿ ಮೊಳಕಾಲ ಮೇಲೆ ಹಚ್ಚಿದರೆ ನೋವುಗಳು, ಊತ ಕಡಿಮೆಯಾಗುತ್ತದೆ.
7. ಎಳ್ಳೆಣ್ಣೆಯಲ್ಲಿ ಇರುವ ಪೋಷಕಾಂಶಗಳು ಮೂಳೆಗಳನ್ನು ಬಲಗೊಳಿಸುತ್ತವೆ. ರಕ್ತನಾಳಗಳನ್ನು ಸ್ವಚ್ಛಗೊಳಿಸುತ್ತವೆ. ಶ್ವಾಸಕೋಶ ಸಮಸ್ಯೆಗಳನ್ನು ದೂರ ಮಾಡುತ್ತವೆ.
8. ಮಧುಮೇಹ ರೋಗಿಗಳು ನಿತ್ಯ 2 ಟೇಬಲ್ ಸ್ಫೂನ್ ಪ್ರಮಾಣದಲ್ಲಿ ಎಳ್ಳೆಣ್ಣೆಯನ್ನು ತೆಗೆದುಕೊಂಡರೆ ಅವರ ದೇಹದಲ್ಲಿನ ರಕ್ತದಲ್ಲಿ ಇರುವ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಇದರಿಂದ ಸಕ್ಕರೆ ನಿಯಂತ್ರಣಕ್ಕೆ ಬರುತ್ತದೆ.
9. ಎಳ್ಳೆಣ್ಣೆಯಲ್ಲಿ ವಿಟಮಿನ್ ಇ, ಬಿಗಳು ಹೇರಳವಾಗಿ ಇರುತ್ತವೆ. ಇವು ಚರ್ಮವನ್ನು ರಕ್ಷಿಸುವುದಷ್ಟೇ ಅಲ್ಲ, ಎಲ್ಲಾ ರೀತಿಯ ಚರ್ಮ ಸಮಸ್ಯೆಗಳನ್ನು ದೂರ ಮಾಡುತ್ತವೆ. ಎಳ್ಳೆಣ್ಣೆಯನ್ನು ನಿತ್ಯ ಬಳಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಚರ್ಮ ಮೃದುವಾಗಿ ಬದಲಾಗುತ್ತದೆ.
10. ಎಳ್ಳೆಣ್ಣೆಯಿಂದ ತಲೆಗೆ ಮಸಾಜ್ ಮಾಡಿದರೆ ಕೂದಲು ಚೆನ್ನಾಗಿ ಬೆಳೆಯುತ್ತದೆ. ಕೂದಲು ಉದುರುವುದು ಕಡಿಮೆಯಾಗುತ್ತದೆ. ಹೊಟ್ಟಿನ ಸಮಸ್ಯೆ ಇರಲ್ಲ.

Comments are closed.