ಕರಾವಳಿ

ಶಿಶುಗಳಿಗೆ ರಿಫ್ಲೆಕ್ಸೋಲಾಜಿ ಮಸಾಜ್‌ ಮಾಡಿ, ಅಳು ನಿಲ್ಲಿಸಿ…?

Pinterest LinkedIn Tumblr

ರಿಫ್ಲೆಕ್ಸೋಲಾಜಿ ಎನ್ನುವುದು ಒಂದು ಪುರಾತನ ಕಲೆ. ಇದರಲ್ಲಿ ಮಾನವನ ದೇಹದಲ್ಲಿ ಇರುವ ಪ್ರೆಷರ್ ಪಾಯಿಂಟ್ ಗಳ ಮೂಲಕ ದೇಹದ ನೋವನ್ನು ಕಡಿಮೆ ಮಾಡಲಾಗುತ್ತದೆ ಮತ್ತು ಇದು ಸಂಪೂರ್ಣವಾಗಿ ನೈಸರ್ಗಿಕವಾದದ್ದು ಕೂಡ. ಈಗ ಜನರು ಪುನಃ ತಮ್ಮ ಮಕ್ಕಳಿಗೆ ನೆರವಾಗಲು ರಿಫ್ಲೆಕ್ಸೋಲಾಜಿ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಈಗಷ್ಟೇ ಜಗತ್ತಿಗೆ ತೆರೆದುಕೊಳ್ಳುತ್ತಿರುವ ನವಜಾತ ಶಿಶುಗಳಿಗೆ ನೆರವಾಗಲು.

ನಾವು ನಿಮ್ಮ ಮಗುವಿನ ನೋವು ಕಡಿಮೆ ಮಾಡಲು ಕೆಳಗಡೆ 6 ವಿಧಾನಗಳನ್ನ ತಿಳಿಸಿದ್ದೇವೆ. ರಿಫ್ಲೆಕ್ಸೋಲಾಜಿ ಪ್ರಕಾರ ನೀವು ಮಗುವಿಗೆ ಮಸಾಜ್ ಮಾಡುವ ಮುನ್ನ, ಮಗುವಿನ ಪಾದವನ್ನ ಉಜ್ಜುವ ಮೂಲಕ ಅಥವಾ ಬಿಸಿ ನೀರಿನ ಸ್ನಾನ ಮಾಡಿಸುವ ಮೂಲಕ ಅದರ ದೇಹದಲ್ಲಿ ರಕ್ತ ಸಂಚಾರವನ್ನ ಉತ್ತೇಜಿಸಬೇಕು.

೧. ತಲೆ ಮತ್ತು ಹಲ್ಲು ನೋವು
ಶಿಶುಗಳಿಗೆ ಆಗಿಂದಾಗ ತಲೆ ಮತ್ತು ಹಲ್ಲು ನೋವು ಉಂಟಾಗುತ್ತಿರುತ್ತದೆ. ಒಂದು ವೇಳೆ ನಿಮ್ಮ ಮಗುವಿನಲ್ಲಿ ಈ ನೋವು ಕಾಣಿಸಿಕೊಂಡರೆ, ಮಗುವಿನ ಪಾದದ ಬೆರಳುಗಳ ತುದಿಯನ್ನ ಒತ್ತಿ ಮಸಾಜ್ ಮಾಡಿ. ಇದು ಅವರು ಮಲಗಿದ್ದಾಗಲೂ ಮಾಡಬಹುದು.

೨. ಸೈನಸ್ ನೋವು (ಮೂಗಿನ ಅಕ್ಕ ಪಕ್ಕದಲ್ಲಿ ಮತ್ತು ಹುಬ್ಬುಗಳ ನಡುವಿನ ಜಾಗಗಳಲ್ಲಿ ನೋವು)
ಸೈನಸ್ ನೋವು ವಯಸ್ಕರರಿಗೆನೇ ಇರಿಸು ಮುರಿಸು ಉಂಟು ಮಾಡುತ್ತದೆ, ಅಂತದ್ದರಲ್ಲಿ ಇದನ್ನೆಲ್ಲಾ ಮುಂಚೆ ಅನುಭವಿಸಿರದ ನವಜಾತ ಶಿಶುಗಳಿಗಂತೂ ಇದು ನರಕ ಯಾತನೆ ಆಗಿರುತ್ತದೆ. ಮಗುವಿಗೆ ಆರಾಮ ನೀಡಲು, ನಿಮ್ಮ ಮಗುವಿನ ಪಾದದ ಬೆರಳುಗಳ ಕೆಳಭಾಗದ ಸೆಂಟರ್ ಭಾಗವನ್ನ ಒತ್ತಿ. ಮೆಲ್ಲನೆ ಒತ್ತುವುದರಿಂದ ನಿಮ್ಮ ಮಗುವಿಗೆ ಆರಾಮ ನೀಡಿ!

೩. ಎದೆ
ನಿಮ್ಮ ಮಗುವಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡರೆ, ನಿಮ್ಮ ಮಗುವಿನ ಪಾದದ ಪ್ಯಾಡೆಡ್ ಭಾಗ (ಮಾಂಸ ಹೆಚ್ಚು ಇರುವ ಭಾಗ) ಅಂದರೆ ಬೆರಳುಗಳ ಕೆಳಗೆ ಮತ್ತು ಪಾದದ ಆರ್ಚ್ ಮೇಲಿನ ಜಾಗ. ಸ್ವಲ್ಪವೇ ಒತ್ತಡ ಹಾಕಿ, ವೃತ್ತಾಕಾರದಲ್ಲಿ ಮಸಾಜ್ ಮಾಡಿ, ಎದೆ ಕಟ್ಟುವುದು ಮತ್ತು ಕೆಮ್ಮುವುದನ್ನ ತಪ್ಪಿಸಿ.

೪. ಹೊಟ್ಟೆ ನೋವು
ಹೊಟ್ಟೆ ಕೆಡುವುದು, ಹೊಟ್ಟೆ ಕಟ್ಟಿದಂತೆ ಆಗುವುದು, ಮುರಿಯುವಂತೆ ಆಗುವುದು ಮತ್ತು ಉಸಿರಾಟದಲ್ಲಿ ತೊಂದರೆ ಆಗುವುದು ಉಂಟಾದರೆ, ಪ್ಯಾಡೆಡ್ ಭಾಗದ ಕೆಳಗಿನ ಭಾಗ ಅಂದರೆ ಪಾದದ ಮಧ್ಯಭಾಗ ಮೇಲೆ ಮಸಾಜ್ ಮಾಡಿ.

೫. ಹೊಟ್ಟೆಯ ಸಮೀಪದ ಭಾಗಗಳು
ಮಲಬದ್ಧತೆ, ಎದೆಯುರಿ, ಅಜೀರ್ಣತೆ ಇದ್ದರೆ, ಪಾದದ ಮಧ್ಯಭಾಗ ಮತ್ತು ಪ್ಯಾಡೆಡ್ ಭಾಗದ ಮದ್ಯದ ಭಾಗವನ್ನ ಮಸಾಜ್ ಮಾಡಿ. ಒಂದು ವೇಳೆ ನಿಮ್ಮ ಮಗುವಿನಲ್ಲಿ ಗ್ಯಾಸ್ ಸಮಸ್ಯೆಯಿಂದ ಅಥವಾ ಅತೀವ ತೇಗಿನಿಂದ ಹೊಟ್ಟೆ ನೋವು ಅನುಭವಿಸುತ್ತಿದ್ದರೆ, ಪಾದದ ಮಧ್ಯಭಾಗ ಮತ್ತು ಪಾದ ಕೆಳತುದಿಯ ನಡುವಿನ ಜಾಗದಲ್ಲಿ ಮಸಾಜ್ ಮಾಡಿ.

೬. ಪಕ್ಕೆ ನೋವು
ಶಿಶುಗಳು ಕೆಲವೊಮ್ಮೆ ತಮ್ಮ ದೇಹ ಸಹಿಸಲು ಆಗುವುದಕ್ಕಿಂತ ವೇಗವಾಗಿ ಕೆಲವೊಂದು ಭಾಗಗಳಲ್ಲಿ ಬೆಳವಣಿಗೆ ಹೊಂದುತ್ತವೆ. ಹೀಗಾಗಿ ಸೊಂಟ ಮತ್ತು ಪೃಷ್ಠ ಭಾಗಗಳಲ್ಲಿ ಮಕ್ಕಳಿಗೆ ನೋವು ಕಾಣಿಸಿಕೊಳ್ಳುವುದು ಸಹಜವಾಗಿರುತ್ತದೆ. ಇದನ್ನ ಕಡಿಮೆ ಮಾಡಲು, ಮಗುವಿನ ಪಾದದ ಕೆಳಭಾಗವನ್ನ ಚೆನ್ನಾಗಿ ಮಸ್ಸಾಜ್ ಮಾಡಿ.

Comments are closed.