ಮಂಗಳೂರು: ಒತ್ತಡ ಭರಿತ ಜೀವನ ಹಾಗೂ ಜಡ ಜೀವನ ಶೈಲಿ ನಿದ್ರಾಹೀನತೆಗೆ ಪ್ರಮುಖ ಕಾರಣಗಳಾಗಿವೆ. ಆದ್ದರಿಂದ, ಈ ಸಮಸ್ಯೆಗೆ ಕಾರಣವನ್ನು ಕಂಡುಹಿಡಿದು ಅವುಗಳನ್ನು ಹೋಗಲಾಡಿಸಲು ಅದಕ್ಕೆ ತಕ್ಕ ಚಿಕಿತ್ಸೆಯನ್ನು ಕೊಡುವುದು ನಿದ್ರಾಹೀನತೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳವ ಉತ್ತಮ ವಿಧಾನವಾಗಿದೆ.
ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸಿದರೆ ನಿದ್ರೆಯೂ ಚೆನ್ನಾಗಿ ಬರುತ್ತದೆ ಮತ್ತು ಯಾವುದೇ ವಿಧವಾದ ಅಡ್ಡ ಪರಿಣಾಮವನ್ನೂ ಬೀರುವುದಿಲ್ಲ.
ಸುಗಂಧ ಭರಿತ ಐ ಪಿಲ್ಲೋ :
೧. ತೀರಾ ದಣಿವಾದಾಗ ಮನೆಯಲ್ಲೇ ತಯಾರಿಸಿದ ಸಣ್ಣ ದಿಂಬುಗಳನ್ನು ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿಟ್ಟು ಬಳಿಕ ಅರ್ಧ ಗಂಟೆಗಳ ಕಾಲ ಕಣ್ಣಿನ ಮೇಲೆ ಇಟ್ಟರೆ ದಣಿವು ಮಾಯವಾಗಿ ನಿಮ್ಮಲ್ಲಿ ಲವಲವಿಕೆ ಮೂಡುವುದು. ರಾತ್ರಿ ನಿದ್ರೆಯೇ ಬಾರದಿರುವ ಇನ್ಸೊಮ್ನಿಯಾ ಸಮಸ್ಯೆಯಿದ್ದವರಿಗೆ ಇದು ಉತ್ತಮ ಪರಿಣಾಮ ಬೀರುವುದು. ಕೆಲಸದೊತ್ತಡ ಮತ್ತು ಕೆರಳುವಿಕೆ ಇತ್ಯಾದಿಗಳು ಇದರಿಂದ ನಿವಾರಣೆಯಾಗುತ್ತದೆ.
೨. ಈ ಕಣ್ಣು ದಿಂಬುಗಳಲ್ಲಿರುವ ಸುಗಂಧವು ನರಗಳ ಮೇಲೆ ಪರಿಣಾಮ ಬೀರುತ್ತದೆ. ತಲೆನೋವು ಕಾಣಿಸಿಕೊಂಡರೆ ಈ ದಿಂಬನ್ನು ಓವನ್‌ನಲ್ಲಿ ಸ್ವಲ್ಪ ಬಿಸಿ ಮಾಡಿ ಹಣೆಗೆ ಇಟ್ಟುಕೊಳ್ಳಿ. ನೆಗಡಿ ಮತ್ತು ಕೆಮ್ಮಿನಿಂದ ಬಳಲುವವರು ನೀಲಗಿರಿ ತುಂಬಿಸಿರುವ ಐ ಪಿಲ್ಲೊಗಳನ್ನು ಬಳಸಿ. ಈ ಪಿಲ್ಲೊಗಳು ಶೀತ ಮತ್ತು ಕೆಮ್ಮನ್ನು ನಿವಾರಣೆ ಮಾಡುವುದು ಮಾತ್ರವಲ್ಲದೆ, ನಿದ್ರಾಹೀನತೆ ಮತ್ತು ಆಯಾಸವನ್ನೂ ಗುಣಪಡಿಸುತ್ತವೆ. ಕಣ್ಣು ಆಯಾಸಗೊಳ್ಳುವುದು, ನವೆ ಇತ್ಯಾದಿಗಳು ನಿವಾರಣೆಯಾಗುತ್ತವೆ.
ಕಂಪ್ಯೂಟರ್‌ನ ಮುಂದೆ ಗಂಟೆಗಟ್ಟಲೆ ಕಾಲ ಕೆಲಸ ಮಾಡಿದ ಬಳಿಕ, ತುಂಬಾ ಸಮಯದವರೆಗೆ ಟೀವಿ ನೋಡಿದ ಬಳಿಕ ಮತ್ತು ಕಣ್ಣಿನ ಮೇಕಪ್ ತೆಗೆದ ಬಳಿಕ ತಣ್ಣನೆಯ ಐ ಪಿಲ್ಲೊಗಳನ್ನು ಅರ್ಧ ಗಂಟೆಗಳ ಕಾಲ ಕಣ್ಣುಗಳ ಮೇಲೆ ಇಡಿ. ಇದರಿಂದ ಕಣ್ಣಿನ ಸೋಂಕನ್ನು ತಡೆಯಬಹುದು. ಇದನ್ನು ನಿಯಮಿತವಾಗಿ ಬಳಸುತ್ತಾ ಇದ್ದರೆ ಉತ್ತಮ ಪರಿಣಾಮ ಬೀರುತ್ತದೆ.
ದಿಂಬು ಎಂದರೆ ತಲೆದಿಂಬುಗಳಲ್ಲ. ಇದು ಕಣ್ಣುಗಳ ಮೇಲೆ ಇಡುವ ಪುಟ್ಟ ದಿಂಬುಗಳು. ಕಣ್ಣಿಗೆ ಆರಾಮದಾಯಕ ಎನಿಸುವ ಹಲವಾರು ರೀತಿಯ ಕಣ್ಣು ದಿಂಬುಗಳು ಅಥವಾ ಐ ಪಿಲ್ಲೋಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ತಜ್ಞರ ಪ್ರಕಾರ, ಲ್ಯಾವೆಂಡರ್ ಮತ್ತು ಆಗಸೆ ಬೀಜಗಳಿರುವ ಐ ಪಿಲ್ಲೋಗಳು ಕಣ್ಣಿಗೆ ತುಂಬಾ ಉತ್ತಮವಾಗಿರುತ್ತವೆ..