ಆರೋಗ್ಯ

ಕ್ಯಾರೆಟ್‌ನಿಂದ ಸೌಂದರ್ಯ ಹೆಚ್ಚಳ

Pinterest LinkedIn Tumblr

ಕ್ಯಾರೆಟ್‍ಗಳು ರುಚಿಕರವಾದ ತರಕಾರಿ. ಇವುಗಳಲ್ಲಿ ಬೀಟಾ ಕ್ಯಾರೊಟಿನ್, ವಿಟಮಿನ್ ಎ ಮತ್ತು ಆಂಟಿ ಆಕ್ಸಿಡೆಂಟ್‍ಗಳು ಅಧಿಕವಾಗಿದೆ. ಕ್ಯಾರೆಟ್‍ಗಳನ್ನು ಸೇವಿಸುವುದರಿಂದ ಕಣ್ಣುಗಳಿಗೆ, ಜೀರ್ಣ ಕ್ರಿಯೆಗೆ, ತ್ವಚೆಗೆ ಮತ್ತು ಹಲ್ಲುಗಳಿಗೆ ತುಂಬಾ ಒಳ್ಳೆಯದು.

ಹೊಳೆಯುವ ತ್ವಚೆಗೆ ನಿಮ್ಮ ತ್ವಚೆಯು ಸದಾ ಹೊಳಪಿನಿಂದ ಮತ್ತು ಆರೋಗ್ಯದಿಂದ ಕೂಡಿರಬೇಕೇ..? ಹಾಗಾದರೆ ಪ್ರತಿನಿತ್ಯ ನೀವು ಕ್ಯಾರೆಟ್ ಜ್ಯೂಸ್ ಕುಡಿಯಬೇಕು. ಯಾಕೆಂದರೆ ಇದರಲ್ಲಿರುವ ಆಂಟಿ ಆಕ್ಸಿಡೆಂಟ್‍ಗಳು ಮತ್ತು ವಿಟಮಿನ್ ಸಿ ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿರಿಸುತ್ತವೆ.

ಇನ್ನೇನ್ ಲಾಭ..?
ಕ್ಯಾರೆಟನ್ನು ಪೇಸ್ಟ್ ಮಾಡಿಕೊಂಡು ಜೇನುತುಪ್ಪದ ಜೊತೆಗೆ ನಿಮ್ಮ ಮುಖಕ್ಕೆ ಫೇಸ್ ಮಾಸ್ಕ್ ಆಗಿ ಸಹ ಬಳಸಬಹುದು. ವಯಸ್ಸಾದಂತೆ ಕಾಣುವುದನ್ನು ತಡೆಯಲು ಕ್ಯಾರೆಟ್‍ನಲ್ಲಿರುವ ವಿಟಮಿನ್ ಸಿ ಸಹಕಾರಿಯಾಗುತ್ತದೆ. ಇದು ದೇಹದಲ್ಲಿ ಕೊಲ್ಲಾಜೆನ್ ಉತ್ಪಾದನೆಯನ್ನು ಹೆಚ್ಚಿಸಲು ವಿಶೇಷವಾಗಿ ಶ್ರಮಿಸುತ್ತದೆ. ತ್ವಚೆಯ ಬಿಗಿತವನ್ನು ಕಾಪಾಡಿಕೊಳ್ಳುವುದು ಕೊಲ್ಲಾಜೆನ್‍ನ ಪ್ರಮುಖ ಕೆಲಸವಾಗಿರುತ್ತದೆ.

ಕ್ಯಾರೆಟ್‍ನಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ತ್ವಚೆಯಲ್ಲಿ ಸುಕ್ಕುಗಳು ಬರದಂತೆ ಸಮರ್ಥವಾಗಿ ಕಾಪಾಡುತ್ತದೆ.

ಸೂರ್ಯನಿಂದ ರಕ್ಷಣೆ ಸೂರ್ಯನ ಕಿರಣಗಳಿಂದ ನಿಮ್ಮ ತ್ವಚೆಯನ್ನು ಕಾಪಾಡುತ್ತದೆ. ಕ್ಯಾರೆಟ್ ಜ್ಯೂಸ್ ಸನ್ ಬರ್ನ್‍ಗಳನ್ನು ಗುಣಪಡಿಸುತ್ತದೆ ಮತ್ತು ತ್ವಚೆಯನ್ನು ಸೂರ್ಯನ ಬೆಳಕಿನಿಂದ ಕಾಪಾಡುತ್ತದೆ. ಸನ್‍ಸ್ಕ್ರೀನ್ ಲೋಶನ್ ಬಳಸುವ ಬದಲು ನೀವು ಕ್ಯಾರೆಟ್ ಜ್ಯೂಸನ್ನು ಸೇವಿಸಿ ನಿಮ್ಮ ತ್ವಚೆಯನ್ನು ಕಾಪಾಡಿಕೊಳ್ಳಿ. ತ್ವಚೆಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಕ್ಯಾರೆಟ್‍ಗಳನ್ನು ಹಲವಾರು ತ್ವಚೆಯ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ.

ಚರ್ಮದ ತುರಿಕೆ, ಗುಳ್ಳೆಗಳು,ಮೊಡವೆಗಳು ಮುಂತಾದ ತ್ವಚೆಯ ಸಮಸ್ಯೆಗಳನ್ನು ಕ್ಯಾರೆಟ್‍ನಿಂದ ಗುಣಪಡಿಸಿಕೊಳ್ಳಬಹುದು.

ಇದರ ಜೊತೆಗೆ ಕ್ಯಾರೆಟ್ ಜ್ಯೂಸ್ ಸೇವಿಸುವುದರಿಂದ ತ್ವಚೆಯ ಹೊಳಪನ್ನು ಸಹ ಹೆಚ್ಚಿಸಿಕೊಳ್ಳಬಹುದು.

Comments are closed.