ಆರೋಗ್ಯ

ತಲೆಹೊಟ್ಟು ನಿವಾರಣೆಗೆ ಇಲ್ಲಿದೆ 4 ಬೆಸ್ಟ್‌ ಟಿಪ್ಸ್ !

Pinterest LinkedIn Tumblr

ತಲೆಹೊಟ್ಟಿನಿಂದ ಕಿರಿಕಿರಿ ಅನುಭವಿಸುವುದು ಮಾತ್ರವಲ್ಲ, ಅದರಿಂದ ಕೂದಲು ಉದುರುವ ಸಮಸ್ಯೆ ಕೂಡ ಕಂಡು ಬರುವುದು.

ತಲೆಹೊಟ್ಟು ಕಾಣಿಸಿದರೆ ಕೆಮಿಕಲ್‌ ಇರುವ ಡ್ಯಾಂಡ್ರಫ್‌ ಫ್ರೀ ಶ್ಯಾಂಪೂ ಹಾಕುವ ಬದಲು ಈ ಈ ಟಿಪ್ಸ್‌ ಪಾಲಿಸಿದರೆ ತಲೆಹೊಟ್ಟು ಸಮಸ್ಯೆಯೂ ಇರುವುದಿಲ್ಲ, ಕೂದಲಿನ ಆರೋಗ್ಯ ಮತ್ತಷ್ಟು ಹೆಚ್ಚಾಗುವುದು.

ತಲೆಗೆ ಎಣ್ಣೆ ಮಸಾಜ್‌ ಮಾಡಿ
ಕೂದಲಿನ ಬುಡ ಒಣಗುವುದರಿಂದ ತಲೆಹೊಟ್ಟು ಸಮಸ್ಯೆ ಕಾಣಿಸುತ್ತದೆ. ಆದ್ದರಿಂದ ಕೂದಲಿಗೆ ಚೆನ್ನಾಗಿ ಎಣ್ಣೆ ಮಸಾಜ್‌ ಮಾಡಿ.

ಮೆಂತೆ
ಮೆಂತೆಯನ್ನು ರುಬ್ಬಿ ಅದನ್ನು ತಲೆಗೆ ಹಚ್ಚಿ ಒಂದು ಗಂಟೆಯ ಬಳಿಕ ಸ್ನಾನ ಮಾಡಿ.

ತಲೆ ತುಂಬಾ ತುರಿಸುತ್ತಿದೆಯೇ?
ಒಂದು ಕಪ್‌ ಬಿಸಿ ನೀರಿಗೆ ಸ್ವಲ್ಪ ಕಹಿಬೇವಿನ ಎಲೆ ಹಾಕಿ ಮಾರನೆಯ ದಿನ ಎಲೆಯನ್ನು ತೆಗೆದು ಬಿಸಾಡಿ, ಆ ನೀರಿನಿಂದ ತಲೆ ಬುಡಕ್ಕೆ ಮಸಾಜ್‌ ಮಾಡಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಿರಿ, ಈ ರೀತಿ ಮಾಡುವುದರಿಂದ ತಲೆ ತುರಿಕೆ ಬೇಗನೆ ಕಡಿಮೆಯಾಗುವುದು.

ಮೆಹಂದಿ ಹಾಕುವುದು
ತಲೆಗೆ ಮೆಹಂದಿ ಹಾಕುವುದರಿಂದ ತಲೆಹೊಟ್ಟಿನ ಸಮಸ್ಯೆ ಇಲ್ಲವಾಗುವುದು.

Comments are closed.