ಆರೋಗ್ಯ

ದಿನವೂ ಇದನ್ನು ಸೇವಿಸಿದರೆ ಮುಖದ ಮೇಲಿನ ಮೊಡವೆಗಳು ಮಾಯವಂತೆ…!

Pinterest LinkedIn Tumblr

ಚರ್ಮದ ರಕ್ಷಣೆಗೆಂದು ಕೇವಲ ಫೆಸ್ ಪ್ಯಾಕ್ ಗಳು, ವಿವಿಧ ಬಗೆಯ ಕ್ರೀಮ್ ಗಳನ್ನು ಉಪಯೋಗಿಸಿದರೆ ಸಾಲದು. ಆರೋಗ್ಯಕರವಾದ ಆಹಾರವನ್ನು ಸೇವಿಸುವುದೂ ಬಹಳ ಮುಖ್ಯ. ಕೆಳಗೆ ತಿಳಿಸಲಾದ ಪದಾರ್ಥಗಳನ್ನು ತಿನ್ನುವುದರಿಂದ ಮೊಡವೆಗಳು ಬರದಂತೆ ತಡೆಯಬಹುದು. ಇಷ್ಟಕ್ಕೂ ಆ ಪದಾರ್ಥಗಳು ಯಾವುವೆಂದು ತಿಳಿದುಕೊಂಡು, ದಿನವೂ ಸೇವಿಸಿದಲ್ಲಿ ಮುಖದ ಮೇಲೆ ಮೊಡವೆಗಳು ಬರದೆ, ಮುಖ ಗೌರವವರ್ಣ ಪಡೆಯುತ್ತದೆ.

ಬಸಳೆ ಸೊಪ್ಪು:
ಚರ್ಮದೊಳಗೆ ಅಡಗಿ ಕುಳಿತಿರುವ ಬ್ಯಾಕ್ಟೀರಿಯಾ ಹಾಗು ಇತರೆ ಕ್ರಿಮಿಗಳು ಹೊರಗೆ ಬರುವುದರಿಂದ ಮೊಡವೆಗಳು ಕಾಣಿಸಿ ಕೊಳ್ಳುತ್ತವೆ. ರಕ್ತದಲ್ಲಿನ ಬ್ಯಾಕ್ಟೀರಿಯಾ ಹಾಗೂ ಕ್ರಿಮಿಗಳನ್ನು ನಾಶ ಪಡಿಸುವ ಕ್ಲೋರೋಫಿಲ್ ಅಂಶ ಬಸಳೆ ಸೊಪ್ಪಿನಲ್ಲಿದೆ. ವಿಟಮಿನ್ -ಎ ಸಹ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಮೊಡವೆಗಳ ವಿರುದ್ಧ ಹೋರಾಡುತ್ತದೆ.

ಅರಶಿನ :
ಚರ್ಮದ ಉರಿಯನ್ನು ಕಡಿಮೆಗೊಳಿಸುತ್ತದೆ ಹಾಗೂ ಕಾಂತಿಯನ್ನು ಹೆಚ್ಚಿಸುತ್ತದೆ. ಸಹಜವಾಗಿಯೆ ಆಂಟಿಬಯಾಟಿಕ್ ಗುಳವುಳ್ಳ ಅರಶಿನವನ್ನು ಯಾವುದೊ ಒಂದು ವಿಧದಲ್ಲಿ ಪ್ರತೀ ದಿನ ಅರ್ಥ ಚಮಚ ಉಪಯೋಗಿಸುತ್ತಿದ್ದರೆ, ರಕ್ತದಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.

ಕ್ಯಾರೆಟ್ :
ಇದರಲ್ಲಿ ವಿಟಮಿನ್-ಎ, ಬೀಟಾ ಕೆರೋಟಿನ್ ರೂಪದಲ್ಲಿ ಹೇರಳ ವಾಗಿರುತ್ತದೆ. ಇದು ಮೊಡವೆಗಳು ಬರಲು ಕಾರಣವಾದ ಕ್ರಿಮಿಗಳನ್ನು ನಾಶಗೊಳಿಸುತ್ತವೆ. ಪ್ರತೀದಿನ ಕನಿಷ್ಟ ಒಂದು ಕ್ಯಾರೆಟ್ ಸೇವಿಸಿದಲ್ಲಿ ಮೊಡವೆಗಳು ಬರದಂತೆ ನೋಡಿಕೊಳ್ಳ ಬಹುದು.

ಮೀನು :
ಒಮೇಗ-3 ಪ್ಯಾಟೀ ಆಸಿಡ್ ಗಳು ಹೇರಳವಾಗಿರುತ್ತವೆ. ಇವು ಹರದಯ, ಚರ್ಮ ಮೊದಲಾದವುಗಳನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಮೀನುಗಳಿಂದ ಲಭಿಸುವ ಪ್ರೊಟೀನ್ ಚರ್ಮದಲ್ಲಿರುವ ಬ್ಯಾಕ್ಟೀರಿಯಗಳೊಂದಿಗೆ ಹೋರಾಡಿ, ಒಣ ಚರ್ಮ ಬರದಂತೆ ತಡೆಯುತ್ತದೆ.

Comments are closed.