ಆರೋಗ್ಯ

ಚಿಕನ್‌ನಿಂದ ನಮಗೆ ತಿಳಿಯದಂತಹ 200 ವಿಧದ ಖಾಯಿಲೆಗಳು …?

Pinterest LinkedIn Tumblr

ಇತ್ತೀಚಿನ ದಿನಗಳಲ್ಲಿ ನಾವು ಕುಡಿಯುವ ನೀರಿನಿಂದ ಹಿಡಿದು ಉಸಿರಾಡುವ ಗಾಳಿಯವರೆಗೂ ಪ್ರತಿಯೊಂದೂ ಕಲುಷಿತವಾಗಿ ಬಿಟ್ಟಿವೆ. ಹೊರಗಿನ ತಿಂಡಿ ತಿನ್ನಲು ಅವುಗಳಲ್ಲಿ ಗುಣಮಟ್ಟ ಇರುವುದಿಲ್ಲ. ಎಂತಹ ಎಣ್ಣೆಯನ್ನು ಬಳಸುತ್ತಾರೋ? ಎಂಬ ಭಯ ಎಲ್ಲರನ್ನೂ ಕಾಡುತ್ತಿದೆ. ಆದ್ದರಿಂದಲೇ ಅರೋಗ್ಯವಂತರಾಗಿರಬೇಕು ಎಂಬ ಪ್ರಜ್ಞೆಯುಳ್ಳವರು ತಮಗೆ ಇಷ್ಟವಾದ ತಿಂಡಿಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳುತ್ತಿದ್ದಾರೆ. ಆದರೆ ಇಂದಿನ ಬಿಡುವಿಲ್ಲದ ಜೀವನದಲ್ಲಿ ಒಂದು ಕ್ಷಣವೂ ಸಮಯ ದೊರೆಯುವುದಿಲ್ಲ. ತಿನ್ನುವುದಕ್ಕೇ ಸಮಯ ಇಲ್ಲದಿದ್ದರೆ, ಇನ್ನು ತಯಾರಿಸಿ ತಿನ್ನಲು ಸಮಯ ಎಲ್ಲಿರುತ್ತದೆ ಹೇಳಿ? ಆದರೆ ಆರೋಗ್ಯವು ಮುಖ್ಯ ವಾದ್ದರಿಂದ ಕೆಲಸವನ್ನು ಬದಿಗಿಟ್ಟು ಮನೆಯಲ್ಲೇ ತಯಾರಿಸಿ ತಿನ್ನೋಣ ಎಂದುಕೊಂಡಲ್ಲಿ ಅದರಲ್ಲೂ ಮೋಸ ಮಾಡುತ್ತಿದ್ದಾರೆ ಕಲಬೆರಕೆದಾರರು…

ಚಿಕ್ಕ ಮಕ್ಕಳು, ದೊಡ್ಡವರು ಎಂಬ ಬೇಧ ಇಲ್ಲದೆ ಚಪ್ಪರಿಸಿಕೊಂಡು ತಿನ್ನುವ ಚಿಕನ್ ನಿಂದ ನಮಗೆ ತಿಳಿಯದಂತಹ ಖಾಯಿಲೆಗಳನ್ನು ನಾವೇ ಕೊಂಡುಕೊಂಡಂತೆ ವಿಷವಾಗಿ ಬದಲಾಗುತ್ತಿದೆ. ಮಲೈ ಚಿಕನ್ ಹೆಸರನ್ನು ಎಂದಾದರೂ ಕೇಳಿದ್ದೀರಾ? ಈ ಹೆಸರು ಈಗ ರಾಜ್ಯದಾದ್ಯಂತ ಜನರನ್ನು ಭಯಾಂದೋಳನಕ್ಕೆ ಸಿಲುಕುವಂತೆ ಮಾಡುತ್ತಿದೆ. ಸಾಧಾರಣವಾಗಿ ಎಲ್ಲರೂ ಬ್ರಾಯಿಲರ್ ಕೋಳಿಯ ಮಾಂಸ ತಿನ್ನುವುದನ್ನು ರೂಢಿಸಿಕೊಂಡಿದ್ದಾರೆ. ಇದನ್ನು 60 ದಿನಗಳು ಬೆಳೆಸಿದಾಗ ಮಾತ್ರವಷ್ಟೇ ಮಾಂಸವನ್ನು ಮಾರುಕಟ್ಟೆಗೆ ಕಳುಹಿಸಬೇಕು. ಈ 60 ದಿನಗಳೂ ಕೋಳಿಗಳಿಗೆ ಗುಣಮಟ್ಟವುಳ್ಳ ಮೇವು, ಒಳ್ಳೆಯ ನೀರನ್ನಿಟ್ಟು, ಗಾಳಿ ಬೀಸುವಂತೆ ಬೆಳೆಸಿದ್ದರೆ ಅಂತಹ ಚಿಕನ್ ಸೇವಿಸುವುದರಿಂದ ನಮಗೆ ಯಾವುದೇ ತೊಂದರೆ ಇರುವುದಿಲ್ಲ.

ಆದರೆ…..ಕೋಳಿ ಫಾರಂನ ಯಜಮಾನರು ಹಣದ ದುರಾಸೆಯಿಂದ ಕೋಳಿ ಮರಿಗಳ ಕತ್ತು, ತೊಡೆಯ ಭಾಗಗಳಿಗೆ ಸ್ಟೆರಾಯಿಡ್ ನೀಡಿ ಕೇವಲ 25 ದಿನಗಳಲ್ಲೇ ಅವುಗಳನ್ನು 60 ದಿನಗಳಿಗೆ ಅವುಗಳ ತೂಕ ಹೆಚ್ಚುವಂತೆ ಮಾಡಿ ಅದನ್ನು ಮಾಂಸದ ಅಂಗಡಿಗಳಿಗೆ ಸರಬರಾಜು ಮಾಡಿ ಕೋಟಿಗಟ್ಟಲೆ ಹಣವನ್ನು ಗಳಿಸುತ್ತಿದ್ದಾರೆ.

ಇಂತಹ ಚಿಕನ್ ಸೇವಿಸುವುದರಿಂದ ಸುಮಾರು 200 ವಿಧದ ಖಾಯಿಲೆಗಳು ಬರುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ. ಅದರಲ್ಲೂ ಚಿಕ್ಕ ಮಕ್ಕಳ ಆರೋಗ್ಯದ ಮೇಲೆ ಇಂತಹ ಚಿಕನ್ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಇನ್ನು ಮುಂದೆ ಯೋಚಿಸಿ.

ಆರೋಗ್ಯ ತಜ್ಞರು……ಬೆಲೆ ಹೆಚ್ಚಾದರೂ ನಿಮಗೆ ಹತ್ತಿರದಲ್ಲಿರುವ ಹಳ್ಳಿಗೆ ಹೋಗಿ ಮನೆಗಳಲ್ಲಿ ಬೆಳೆಸಿದ ಕೋಳಿಗಳನ್ನು ತಂದು ಸೇವಿಸುವುದು ಒಳ್ಳೆಯದೆಂದು ಸಲಹೆ ನೀಡುತ್ತಿದ್ದಾರೆ. ಮೊದಲೇ ಇದು ಕೆಟ್ಟ ಕಾಲವಾದ್ದರಿಂದ ಕೆಲವು ದಿನಗಳಾದರೂ ಆರೋಗ್ಯವಾಗಿ ಬದುಕಬೇಕೆಂದರೆ ಕಾಳಜಿ ವಹಿಸಲೇಬೇಕಲ್ಲವೆ.?

Comments are closed.