ಆರೋಗ್ಯ

ಮಿದುಳಿನ ಪವರ್‌ ಹೆಚ್ಚಿಸುವ 6 ಆಹಾರಗಳು

Pinterest LinkedIn Tumblr


ಮಿದುಳಿನ ಆರೋಗ್ಯಕ್ಕೆ ಆಹಾರ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಮಿದುಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಅಂದರೆ ಸಾಕಷ್ಟು ಪೋಷಕಾಂಶಗಳ ಅಗತ್ಯ ಇದಕ್ಕೆ ಇದೆ. ಆದ್ದರಿಂದ ನಿಮ್ಮ ಮಿದುಳಿನ ಶಕ್ತಿ ಹೆಚ್ಚಿಸುವ, ಒತ್ತಡ ನಿವಾರಿಸಿ ಮನಸ್ಸಿಗೆ ಆಹ್ಲಾದ ಭಾವ ನೀಡುವ ಆಹಾರ ಸೇವನೆ ಅತ್ಯಗತ್ಯ.

1. ಧಾನ್ಯಗಳು: ಏಕಾಗ್ರತೆ ಮತ್ತು ಗಮನವನ್ನು ಕೇಂದ್ರೀಕರಿಸಲು ಧಾನ್ಯಗಳ ಸೇವನೆ ಸಹಕಾರಿ. ನಿಮ್ಮ ದೇಹದ ಇತರೇ ಅಂಗಗಳಂತೆ ಮಿದುಳು ಕೂಡ ಶಕ್ತಿಯಿಲ್ಲದೆ ಕೆಲಸ ಮಾಡುವುದಿಲ್ಲ. ಆದ್ದರಿಂದ ಧಾನ್ಯಗಳು ನಿಮ್ಮ ಆಹಾರದಲ್ಲಿ ಹೆಚ್ಚಿರಲಿ.

2. ಮೀನು: ಆರೋಗ್ಯಕರ ಮಿದುಳಿನ ಕಾರ್ಯವನ್ನು ಉತ್ತೇಜಿಸಲು ಮೀನು ಸೇವನೆ ಸಹಕಾರಿ. ಒಮೆಗಾ -3 ಎಣ್ಣೆಯುಕ್ತ ಮೀನುಗಳಲ್ಲಿ ಸ್ವಾಭಾವಿಕವಾಗಿ ಸಿಗುತ್ತದೆ. ಸೋಯಾ ಬೀನ್ಸ್‌, ಕುಂಬಳಕಾಯಿ ಬೀಜಗಳು, ವಾಲ್ನಟ್ಸ್‌ಗಳ ಸೇವನೆಯೂ ಸೂಕ್ತ.

3. ಬೆರ್ರಿಹಣ್ಣುಗಳು: ಅಲ್ಪಾವಧಿಯ ಸ್ಮರಣೆಯನ್ನು ಹೆಚ್ಚಿಸಲು ಸಹಾಯಕವಾಗಬಹುದು. ಬೆರ್ರಿಹಣ್ಣುಗಳು ಸೇವಿಸುವುದರಿಂದ ಪರೀಕ್ಷೆ ಸಮಯದಲ್ಲಿ ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

4. ಮೊಟ್ಟೆಗಳು: ಮಿದುಳಿನ ಆರೋಗ್ಯ ಕಾಪಾಡುತ್ತದೆ. ಮಿದುಳಿನ ಕುಗ್ಗುವಿಕೆಯನ್ನು ಕಡಿಮೆ ಮಾಡುತ್ತದೆ. ಪರೀಕ್ಷೆ ಸಮಯದಲ್ಲಿ ಸಾಕಷ್ಟು ಮೊಟ್ಟೆಯ ಆಹಾರ ಸೇವಿಸಿ.

5 ಕುಂಬಳಕಾಯಿ ಬೀಜ: ಜಿಂಕ್‌ ಅಂಶವನ್ನು ಹೇರಳವಾಗಿ ಹೊಂದಿರುವ ಇದು ನೆನಪಿನ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ. ಒತ್ತಡ ನಿವಾರಿಸಿ ಮೂಡನ್ನು ಕೂಡ ಉತ್ತೇಜಿಸುತ್ತದೆ.

6. ಬ್ಲ್ಯಾಕ್‌ಕರಂಟ್‌ : ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡಲು ಇದು ಸಹಾಯ ಮಾಡಬಹುದು. ವಿಟಮಿನ್‌ ಸಿ ಅಂಶವಿರುವ ಇದು ದೀರ್ಘಕಾಲದವರೆಗೆ ಮಾನಸಿಕ ಚುರುಕುತನವನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ.

Comments are closed.