ಚರ್ಮವು ಮಾನವ ದೇಹದುದ್ದಕ್ಕೂ ಚಾಚಿಕೊಂಡಿರುವ ಒಂದು ಅಂಗ. ನಾವು ವಸ್ತುಗಳನ್ನ ಸ್ಪರ್ಶಿಸಲು ನಮಗೆ ತುಂಬಾ ಮುಖ್ಯವಾಗಿ ಬೇಕಿರುವುದೇ ಚರ್ಮ. ಚರ್ಮವು ದೃಢವಾದ ಅಂಗಾಂಶಗಳ ಗುಂಪಾಗಿದ್ದು, ಇದು ಆಂತರಿಕ ಅಂಗಗಳನ್ನ ಬಾಹ್ಯ ಅಂಶಗಳಿಂದ ಕಾಪಾಡುತ್ತದೆ. ಇದು ತುಂಬಾ ದಪ್ಪವಾದ ಪದರವಾಗಿದ್ದು, ಇದು 3 ಪದರಗಳ ವ್ಯವಸ್ಥೆ ಆಗಿರುತ್ತದೆ. ಪ್ರತಿಯೊಂದು ಪದರಕ್ಕೂ ತನ್ನದೇ ಆದ ಕಾರ್ಯಗಳಿರುತ್ತವೆ.
ತಳಭಾಗದ ಪದರವನ್ನ ಸಬ್ಕಟೆನಿಯಸ್ ಲೇಯರ್ ಎನ್ನುತ್ತಾರೆ, ಮಧ್ಯ ಪದರವನ್ನ ಡೇರ್ಮಿಸ್ ಎನ್ನುತ್ತಾರೆ ಮತ್ತು ನಮ್ಮ ಮೇಲ್ಮೈ ಅಲ್ಲಿರುವ ಪದರವನ್ನ ಎಪಿಡರ್ಮಿಸ್ ಎನ್ನುವರು. ಇವುಗಳ ಜೋಡಣೆಯ ಅಂಗಾಂಶಗಳಲ್ಲಿ ಎಲಾಸ್ಟಿನ್ ಎಂಬ ಅಂಶವಿದ್ದು ಇದು ಚರ್ಮಕ್ಕೆ ಎಲಾಸ್ಟಿಸಿಟಿ ನೀಡುತ್ತದೆ. ಇದು ನೀವು ದಿಢೀರನೆ ತೂಕ ಹೆಚ್ಚಿಕೊಂಡಾಗ ಅಥವಾ ಕಳೆದುಕೊಂಡಾಗ, ನಿಮ್ಮ ಚರ್ಮವು ಹಿಗ್ಗಿದಾಗ ಅಥವಾ ಸುಕ್ಕಾದಾಗ, ಅದರ ಎಲಾಸ್ಟಿಸಿಟಿಯನ್ನ ನಿಭಾಯಿಸುವುದೇ ಈ ಎಲಾಸ್ಟಿನ್.
ಗರ್ಭಧಾರಣೆ ವೇಳೆ ನೀವು ದಿಢೀರನೆ ತೂಕ ಗಳಿಸುವುದರಿಂದ, ಚರ್ಮವು ದಿಢೀರನೆ ಹಿಗ್ಗುತ್ತದೆ. ಇದು ಮಧ್ಯದ ಪದರವು ಹಿಗ್ಗಿ, ಹರಿದು ಹೋಗುವಂತೆ ಮಾಡುತ್ತದೆ. ಇದು ಡೆರ್ಮಿಸ್ ಪದರವು ಕೆಳಗಿರುವ ರಕ್ತನಾಳಗಳು ಕಣ್ಣುಗಳಿಗೆ ಕಾಣುವಂತೆ ಮಾಡುತ್ತದೆ. ಈ ಸ್ಟ್ರೆಚ್ ಮಾರ್ಕುಗಳು ಸ್ತನಗಳು, ತೊಡೆಗಳು, ಪೃಷ್ಠ, ಕೈಗಳು ಮತ್ತು ಬೆನ್ನಿನ ಮೇಲೆ ಕಾಣಿಸಿಕೊಳ್ಳುತ್ತವೆ.
ಕೆಂಪು ಮತ್ತು ಬಿಳಿ ಸ್ಟ್ರೆಚ್ ಮಾರ್ಕುಗಳ ನಡುವಿನ ವ್ಯತ್ಯಾಸವೇನು?
ಕೆಂಪು ಸ್ಟ್ರೆಚ್ ಮಾರ್ಕುಗಳು
ನಮ್ಮ ಚರ್ಮವು ಯಾವಾಗ ತನ್ನ ಸಾಮರ್ಥ್ಯಕ್ಕೂ ಮೀರಿ, ಅದರ ಕೆಳಗಿರುವ ಅಂಗಾಂಶಗಳು ಮುರಿತಕ್ಕೆ ಒಳಗಾಗಬಹುದು. ಈ ಕಾರಣದಿಂದ, ನಮಗೆ ನಮ್ಮ ಮೈ ಒಳಗಿನ ನೂರಾರು ರಕ್ತನಾಳಗಳು ನಮ್ಮ ಕಣ್ಣಿಗೆ ಕಾಣುವಂತೆ ಮಾಡಿ, ಆ ಭಾಗವು ನೇರಳೆ ಮಿಶ್ರಿತ ಕೆಂಪು ಬಣ್ಣವನ್ನ ಹೊಂದುವಂತೆ ಮಾಡುತ್ತದೆ.
ನೈಸರ್ಗಿಕ ಮದ್ದುಗಳು :
ವಿಟಮಿನ್ C : ಇದು ಕಾಲಜನ್ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಇದು ಸೊಪ್ಪುಗಳು, ಬೆರಿ ಮತ್ತು ಇತರೆ ಸಿಟ್ರಸ್ ಹಣ್ಣುಗಳಿಂದ ನಿಮಗೆ ಲಭ್ಯವಾಗುತ್ತದೆ.
ವಿಟಮಿನ್ E : ಇದರಲ್ಲಿ ಅಡಕವಾಗಿರುವ ಆಂಟಿ-ಆಕ್ಸಿಡಾಂಟ್ಸ್ ನಿಮ್ಮ ದೇಹದಲ್ಲಿರುವ ಟಾಕ್ಸಿನ್ಸ್ ಅನ್ನು ನಾಶ ಮಾಡಿ ನೀವು ಸ್ಟ್ರೆಚ್ ಮಾರ್ಕುಗಳಿಂದ ಬೇಗ ಚೇತರಿಸಿಕೊಳ್ಳುವಂತೆ ಮಾಡುತ್ತದೆ.
ಕೋಕೋ ಬಟರ್ : ಇದು ಕೋಕೋ ಸಸಿಗಳಿಂದ ತಯಾರಿಸಲ್ಪಡುತ್ತದೆ. ಇದರ ಆರ್ದ್ರಕಾರಿ ಗುಣಗಳು ಚರ್ಮಕ್ಕೆ ಒಳ್ಳೆಯದು.
ಬಿಳಿ ಸ್ಟ್ರೆಚ್ ಮಾರ್ಕುಗಳು
ಇವುಗಳು ಸಿಡಿಲು ಬಡಿದಂತೆ ನಿಮ್ಮ ದೇಹದ ಮೇಲೆ ಎರಗುತ್ತವೆ. ಇದು ಕುಗ್ಗಿದ ರಕ್ತನಾಳಗಳು ಅವುಗಳ ಕೆಳಗಿರುವ ಕೊಬ್ಬಿನ ಅಂಗಾಂಶಗಳನ್ನ ಪ್ರದರ್ಶಿಸುವುದರಿಂದ ಆಗುವುದು. ಇವುಗಳು ಏಕೆ ಬಿಳಿ ಅಥವಾ ಸಿಲ್ವರ್ ಬಣ್ಣ ಹೊಂದಿರುತ್ತವೆ ಎಂದರೆ, ಅವುಗಳ ಕೆಳಗಿರುವ ಕೊಬ್ಬಿನ ಅಂಗಾಂಶಗಳು ಈ ಬಣ್ಣವನ್ನೇ ಹೊಂದಿರುತ್ತವೆ. ಇವುಗಳು ಬಹುಕಾಲದಿಂದ ಉಳಿದುಕೊಂಡಿರುವ ಸ್ಟ್ರೆಚ್ ಮಾರ್ಕುಗಳಾಗಿರುವ ಕಾರಣ, ಇವುಗಳಿಗೆ ಹೆಚ್ಚಿನ ಚಿಕಿತ್ಸೆ ಬೇಕಾಗುತ್ತದೆ.
ಈ ಸ್ಟ್ರೆಚ್ ಮಾರ್ಕುಗಳನ್ನ ಕಡಿಮೆ ಮಾಡಲು ಕೆಲವೊಂದು ವೈದ್ಯಕೀಯ ಪ್ರಕ್ರಿಯೆಗಳು ಇದ್ದರು ಸಹಾ, ಅವುಗಳಲ್ಲಿ ಯಾವುದು ಕೂಡ ಈ ಸ್ಟ್ರೆಚ್ ಮಾರ್ಕುಗಳನ್ನ ತೊಲಗಿಸುವಲ್ಲಿ ಸಂಪೂರ್ಣ ಸಫಲವಾಗುವ ಗ್ಯಾರಂಟಿ ಇಲ್ಲವೆಂದು ಹೇಳುತ್ತಾರೆ ತಜ್ಞರು. ಹೀಗಾಗಿ ನೀವು ಅವುಗಳನ್ನ ಸಂಪೂರ್ಣವಾಗಿ ಹೋಗಲಾಡಿಸಲು ಆಗದಿದ್ದರೂ, ಅವುಗಳ ಬಣ್ಣವನ್ನ ತಿಳಿಯಾಗಿಸುವ ಕಡೆ ಪ್ರಯತ್ನಿಸಬಹುದು.
ಬಣ್ಣ ತಿಳಿಯಾಗಿಸಲು ಸಲಹೆಗಳು :
ನಿಮ್ಮ ದೇಹವು ಬೇಕಾಗುವಷ್ಟು ಎಲಾಸ್ಟಿನ್ ಅನ್ನು ತಯಾರಿಸಲು ನೀವು ಸಾಕಷ್ಟು ನೀರನ್ನು ಸೇವಿಸುತ್ತಾ ಜಲೀಕರಣ ಹೊಂದಿರಲೇಬೇಕು.
ಆರೋಗ್ಯಕರ ಆಹಾರಪದ್ಧತಿ ಪಾಲಿಸಿ ನಿಮ್ಮ ದೇಹವು ದಿಢೀರನೆ ತೂಕ ಗಳಿಸಿಕೊಳ್ಳುವುದು ಅಥವಾ ಕಳೆದುಕೊಳ್ಳುವುದನ್ನ ತಪ್ಪಿಸಿ.
ಇವುಗಳೊಂದಿಗೆ ನೀವು ನಿಮ್ಮ ದೇಹಕ್ಕೆ ತೆಂಗಿನ ಎಣ್ಣೆ ಅಥವಾ ವಿಟಮಿನ್ E ಆಯಿಲ್ ಅಂತಹ ತೈಲಗಳನ್ನ ಲೇಪಿಸಿಕೊಳ್ಳಬಹುದು. ಇವುಗಳು ನಿಮ್ಮ ಸ್ಟ್ರೆಚ್ ಮಾರ್ಕುಗಳಿಂದ ಉಂಟಾಗುವ ತುರಿಕೆ ಮತ್ತು ಶುಷ್ಕತೆಯನ್ನ ದೂರ ಮಾಡುತ್ತದೆ. ಅಷ್ಟೇ ಅಲ್ಲದೆ, ಸ್ಟ್ರೆಚ್ ಮಾರ್ಕುಗಳ ಬಣ್ಣವನ್ನೂ ತಿಳಿಯಾಗಿಸುತ್ತದೆ.

Comments are closed.